
ಮೇವು ಹಗರಣ… ಖಜಾನೆ ದುರ್ಬಳಕೆ ಕೇಸ್; ಲಾಲುಪ್ರಸಾದ್ ಗೆ 5 ವರ್ಷ ಜೈಲು
ಜಾರ್ಖಂಡ್: ಬಹುಕೋಟಿ ಮೇವು ಹಗರಣ ಸಂಬಂಧ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೇ 60 ಲಕ್ಷ ರೂ. ದಂಡವನ್ನೂ ವಿಧಿಸಿದೆ.
ಮೇವು ಹಗರಣ: ಜಾರ್ಖಂಡ್ನ ಒಟ್ಟು ಐದು ಮೇವು ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿಯನ್ನು ಖಜಾನೆಗಳಿಂದ ಅಕ್ರಮವಾಗಿ ತೆಗೆದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಲಾಲು ಯಾದವ್ ಮೇಲಿದ್ದು, ಇದೀಗ ಜಾರ್ಖಂಡ್ನ ಐದನೇ ಮೇವು ಪ್ರಕರಣದಲ್ಲಿ ಲಾಲೂಗೆ ಶಿಕ್ಷೆ ನೀಡಲಾಗಿದೆ.
ಮೇವಿಗಾಗಿ ವಿವಿಧ ಜಿಲ್ಲೆಗಳಲ್ಲಿ ಖಜಾನೆಗಳಲ್ಲಿ ಪಶುಸಂಗೋಪನಾ ಇಲಾಖೆ ಮೀಸಲಿಟ್ಟಿದ್ದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಆರೋಪ ಸಾಬೀತಾಗಿದ್ದು, ಫೆಬ್ರವರಿ 15 ರಂದು ಸಿಬಿಐ ಕೋರ್ಟ್ ಐದನೇ ಮೇವು ಪ್ರಕರಣದಲ್ಲಿ (ಡೊರಾಂಡಾ ಖಜಾನೆ ಕೇಸ್) ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ನೀಡಿತ್ತು.