ಮರದ ಕೊಂಬೆ ಬಿದ್ದು 13 ವರ್ಷದ ಬಾಲಕ ಮೃತ: ಪಾಲಿಕೆಯಿಂದ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ಪರಿಹಾರ

ಬೆಂಗಳೂರು

ಬೆಂಗಳೂರು: ಮರದ ಕೆಳಗೆ ನಿಂತಿದ್ದ ಬಾಲಕನ ಮೇಲೆ ಕೊಂಬೆಯೊಂದು ಬಿದ್ದು ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಹಿನ್ನೆಲೆ ನಿನ್ನೆ ಬಿಬಿಎಂಪಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪೂರ್ವ ವಲಯ ಆಯುಕ್ತರು ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತ ಪಿ. ಎನ್ ರವೀಂದ್ರ ಅವರು ರಾಕೇಶ್ ಪೋಷಕರಾದ ತಂದೆ ಸರವಣ್ಣ, ತಾಯಿ ಯಮುನಾರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ವಿತರಿಸಿದರು. ಗಾಯಗೊಂಡ ಬಾಲಕ ನನ್ನು ಚಿಕಿತ್ಸೆಗಾಗಿ ಜನಪ್ರಿಯ ನರ್ಸಿಂಗ್ ಹೋಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮುಂಜಾನೆ 1.30 ರ ವೇಳೆಗೆ ಬಾಲಕ ಮೃತಪಟ್ಟಿದ್ದಾನೆ. ಘಟನೆ ತಿಳಿದ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಕೂಡಲೆ ಪರಿಹಾರ ನೀಡಲು ವಲಯ ಆಯುಕ್ತರಿಗೆ ಸೂಚನೆ ನೀಡಿದ್ದರಿಂದ ಚೆಕ್ ವಿತರಿಸಲಾಯಿತು. ಈ ವೇಳೆ ಪೂರ್ವ ವಲಯದ ಜಂಟಿ ಆಯುಕ್ತರಾದ ಶಿಲ್ಪಾ ಉಪಸ್ಥಿತರಿದ್ದರು.

Leave a Reply

Your email address will not be published.