ಟ್ರಂಪ್ ನಿವಾಸದ ಮೇಲೆ ಎಫ್ ಬಿ ಐ ದಾಳಿ

ಅಂತರಾಷ್ಟ್ರೀಯ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವಾಸ ಮಾರ್ ಎ ಲಾಗೊ ಮೇಲೆ ಎಫ್‍ಬಿಐ ದಾಳಿ ಮಾಡಿದೆ.

2020ರಲ್ಲಿ ಚುನಾವಣೆಯ ಸೋಲಿನ ಬಳಿಕ ಟ್ರಂಪ್ ಶ್ವೇತಭವನವನ್ನು ತೊರೆದು, ತಮ್ಮ ಫ್ಲೊರಿಡಾ ನಿವಾಸಕ್ಕೆ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಡೋನಾಲ್ಡ್ ಟ್ರಂಪ್, ಫ್ಲೊರಿಡಾದ ಪಾಮ್ ಬೀಚ್‍ನಲ್ಲಿರುವ ನನ್ನ ಮನೆ ಮೇಲೆ ಎಫ್ ಬಿ ಐ ದಾಳಿ ನಡೆಸಿದ್ದು, ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ. ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸಿದ ನಂತರವೂ, ನನ್ನ ಮನೆಯ ಮೇಲೆ ಈ ಅಘೋಷಿತ ದಾಳಿ ಅಗತ್ಯವಿರಲಿಲ್ಲ ಎಂದಿದ್ದಾರೆ.

ಎಫ್‍ಬಿಐ ಅಧಿಕಾರಿಗಳು ತಮ್ಮ ಸುರಕ್ಷಿತ ನೆಲೆಯ ಬಾಗಿಲನ್ನು ಒಡೆದು ತೆರೆದಿದ್ದಾರೆ. ಈ ರೀತಿಯ ದಾಳಿ ತೃತೀಯ ಜಗತ್ತಿನ ದೇಶಗಳಲ್ಲಿ ಮಾತ್ರ ನಡೆಯುತ್ತದೆ ಎಂದ ಅವರು, ತಮ್ಮ ಮನೆಗೆ ಎಫ್‍ಬಿಐ ಮುತ್ತಿಗೆ ಹಾಕಿದೆ ಎಂದು ಕಿಡಿಕಾರಿದರು.

ಘಟನೆಗೆ ಸಂಬಂಧಿಸಿ ವಾಷಿಂಗ್ಟನ್‍ನಲ್ಲಿರುವ ಎಫ್‍ಬಿಐನ ಪ್ರಧಾನ ಕಚೇರಿ ಮತ್ತು ಮಿಯಾಮಿಯಲ್ಲಿರುವ ಅದರ ಉಪ ಕಚೇರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

Leave a Reply

Your email address will not be published.