Home District ಬೆಳಗ್ಗೆ ಮದುವೆ ;ಸಂಜೆ ಕ್ವಾರಂಟೈನ್ ; ನವ ದಂಪತಿಗೆ ಶಾಕ್

ಬೆಳಗ್ಗೆ ಮದುವೆ ;ಸಂಜೆ ಕ್ವಾರಂಟೈನ್ ; ನವ ದಂಪತಿಗೆ ಶಾಕ್

430
0
SHARE

ತುಮಕೂರು. ಬೆಳಗ್ಗೆ ಮದುವೆ ಮುಹೂರ್ತ ಮುಗಿಸಿದ ನವ ವಧುವರರು ಮಹಾಮಾರಿ ಕೊರೊನಾದಿಂದಾಗಿ ಸಂಜೆ ವೇಳೆಗೆ ಕ್ವಾರಂಟೈನ್ ನಲ್ಲಿ ಬಂಧಿಯಾಗಿದ್ದಾರೆ..ತುಮಕೂರು ಜಿಲ್ಲೆ ಗುಬ್ಬಿಯ ಹೇರೂರಿನ ನವ ಜೋಡಿಯೊಂದು ಕ್ವಾರಂಟೈನ್ ನಲ್ಲಿ  ಸೇರುವಂತೆ ಮಾಡಿದೆ ಕೊರೋನಾ. ಹಾಗಂತ ಈ ವಧು ವರರಿಗೇನೂ ಕೊರೊನಾ ಬಂದಿಲ್ಲ.ಬದಲಾಗಿ ಮದುವೆಯ ಅಡುಗೆ ಭಟ್ಟನಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಹಾಗಾಗಿ ವಧುವರರನ್ನೂ‌ ಸೇರಿ ಒಟ್ಟು 56 ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಹೇರೂರಿನ ಯುವಕ ಗಿರೀಶ್ ಹಾಗೂ ಕಾಟೇನಹಳ್ಳಿಯ ಯುವತಿ ಮೀನಾಕ್ಷಿಯ ಮದುವೆ ಜೂನ್ 17 ಮತ್ತು 18 ರಂದು ಹುಡುಗನ ಮನೆ ಮುಂದೆ ನಡೆದಿದೆ.ಈ ಮದುವೆಗೆ ಅಡುಗೆ ಮಾಡಲು ಬಂದ ಚಿಟ್ಟದಕುಪ್ಪೆಯ 50 ವರ್ಷದ ವ್ಯಕ್ತಿಗೆ ಸೋಂಕು ‌ದೃಢಪಟ್ಟಿದೆ.ಸೋಂಕಿನ ಲಕ್ಷಣಗಳು ಕಂಡುಬಂದ ಕಾರಣ ಇತ ಜೂನ್ 14 ರಂದು ಈತ  ಕೋವಿಡ್ ಟೆಸ್ಟ್ ಕೊಟ್ಟು ಬಂದಿದ್ದು,ರಿಪೋರ್ಟ್ ಬರುವವರೆಗೂ ಈತನನ್ನು ಅಧಿಕಾರಿಗಳು ಕ್ವಾರಂಟೈನ್ ನಲ್ಲಿ ಇಡಬೇಕಿತ್ತು. ಆದರೆ ಈತ ಎಲ್ಲಾಕಡೆ ಓಡಾಡಿಕೊಂಡು ಅಡುಗೆ ಕೆಲಸ ಮಾಡಿಕೊಂಡಿದ್ದ..18 ರಂದು ಪಾಸಿಟಿವ್ ರಿಪೋರ್ಟ್ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಅಡುಗೆ ಭಟ್ಟ ಇದ್ದ ಮದುವೆ ಮನೆಗೆ ದಾಳಿ ಮಾಡಿದ್ದಾರೆ.

ಅಡುಗೆ ಭಟ್ಟ, ವಧು ವರರು, ಕ್ಯಾಮೇರಾ ಮನ್, ವಧು ಮತ್ತು ವರನ ಹತ್ತಿರ ಸಂಪರ್ಕ ಇದ್ದವರು ಸೇರಿ ಒಟ್ಟು 56 ಜನರನ್ನು ಕ್ವಾರಂಟೈನ್ ಮಾಡಿದ್ದಾರೆ..

LEAVE A REPLY

Please enter your comment!
Please enter your name here