ಟಿವಿ ಸಿರಿಯಲ್ ನಟಿಗೆ ಸ್ನೇಹಿತನೇ ಅಸಭ್ಯವಾಗಿ ವರ್ತಿಸಿ ಜೀವ ಬೆದರಿಕೆ ಹಾಕಿರೋ ಘಟನೆ ಬೆಂಗಳೂರಿನ ಅನ್ನಪೂರ್ಣಶ್ವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ..ಧಾರವಾಹಿಯಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿರೋ ಜೀವಿತಾ.ಸ್ನೇಹಿತ ಚೇತನ್ ಟೆಮ್ಕರ್ ಎಂಬಾತನಿಂದ ಅಸಭ್ಯ ವರ್ತನೆ .
ಕಂಠ ಪೂರ್ತಿ ಕುಡಿದು ಜೀವಿತಾಳ ಮನೆಗೆ ಬಂದಿದ್ದ ಚೇತನ್ .ಧಾರವಾಹಿಯಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿರೋ ಜೀವಿತಾ ಉಲ್ಲಾಳ್ ಗೆ ಹಲವು ದಿನಗಳಿಂದ ಚೇತನ್ ಟೆಮ್ಕರ್ ಎಂಬಾತ ಸ್ನೇಹಿತನಾಗಿದ್ದ, ಏಕಾಏಕಿ ಕಂಠ ಪೂರ್ತಿ ಕುಡಿದು ಮನೆಯೊಳಗೆ ನುಗ್ಗಿದ ಚೇತನ್, ಒಂದು ಗ್ಲಾಸ್ ನೀರನ್ನ ಕೇಳಿ ಬಾಗಿಲು ಮುಚ್ಚಿಕೊಂಡಿದ್ದಾನೆ..
ನೀರು ತರುವಷ್ಟರಲ್ಲಿ ಚೇತನ್ ಅಸಭ್ಯವಾಗಿ ವರ್ತನೆ ಶುರು ಮಾಡಿದ್ದ.. ಇದನ್ನು ವಿರೋಧಿಸಿದ ಜೀವಿತಾ ಉಲ್ಲಾಳ್ ನ್ನು ಗೋಡೆಗೆ ತಳ್ಳಿ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ್ದಾನೆ.. ಬಳಿಕ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಸಹ ಹಾಕಿದ್ದಾನೆ.. ಬಳಿಕ ನಟಿ ಜೀವಿತಾ ಉಲ್ಲಾಳ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ..