Home District ಕಾಣಿಯೂರು ಮಠದ ಸ್ವಾಮೀಜಿ ಗೋವಿಗೆ ಸಾಷ್ಟಾಂಗ ನಮಸ್ಕಾರ… ಪೋಟೋ ಭಾರೀ ವೈರಲ್

ಕಾಣಿಯೂರು ಮಠದ ಸ್ವಾಮೀಜಿ ಗೋವಿಗೆ ಸಾಷ್ಟಾಂಗ ನಮಸ್ಕಾರ… ಪೋಟೋ ಭಾರೀ ವೈರಲ್

166
0
SHARE

ಉಡುಪಿ. ಜಿಲ್ಲೆಯ ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರು ಗೋವಿಗೆ ಸಾಷ್ಟಾಂಗ ನಮಸ್ಕರಿಸಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಮೆಚ್ಚುಗೆ ಪಡೆದಿದೆ.. ಸ್ವಾಮೀಜಿಯಾಗಿ ದೀಕ್ಷೆ ಪಡೆದ ಸನ್ಯಾಸಿಗಳು ದೇವರು, ತಾಯಿ, ಗುರು ಹಾಗೂ ಗೋವು ಹೊರತು ಇತರರಿಗೆ ನಮಸ್ಕರಿಸುವ ಕ್ರಮವಿಲ್ಲ..

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರು ಮಠದ ಪಟ್ಟದ ದೇವರಾದ ಯೋಗನೃಸಿಂಹ ಮತ್ತು ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿದ ಅನಂತರ ಗೋಪೂಜೆ ಮಾಡಿ ಗೋವಿನ ಕಾಲಿಗೆರಗಿ ಸಾಷ್ಟಾಂಗ ನಮಸ್ಕಾರ ಮಾಡುವುದು ಶ್ರೀಗಳ ನಿತ್ಯ ದಿನಚರಿ. ಅದರಂತೆ ಇತ್ತೀಚೆಗೆ ಸ್ವಾಮಿಗಳು ಗೋವಿಗೆ ಸಾಷ್ಟಾಂಗ ನಮಸ್ಕರಿಸಿದ ಪೋಟೋ

ಸುಧೀರ್‌ ಭಟ್‌ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಇದು ಜಾಲತಾಣಗಳಲ್ಲಿ ವೈರಲ್ ಆಗಿ ಮೆಚ್ಚುಗೆ ಪಡೆದಿದೆ.. ಗೋವಿನ ಬಗ್ಗೆ ವಿಶೇಷ ಪ್ರೀತಿ ಇರುವ ಶ್ರೀಗಳು ದೇಸಿ ತಳಿಯ ಗೋವುಗಳನ್ನು ಸಾಕುತ್ತಿದ್ದು, ಇವರ ಹಿಂದಿನ ಪರ್ಯಾಯ ಅವಧಿಯಲ್ಲಿ ಕೃಷ್ಣಮಠದಲ್ಲಿ ಪ್ರಥಮ ಗೋ ಸಮ್ಮೇಳನವನ್ನೂ ಆಯೋಜಿಸಿದ್ದರು.

LEAVE A REPLY

Please enter your comment!
Please enter your name here