Home District ಸಂಡೇ ಲಾಕ್ ಡೌನ್ ; ಕೃಷ್ಣನಗರಿ ಸಂಪೂರ್ಣ ಸ್ತಬ್ಧ

ಸಂಡೇ ಲಾಕ್ ಡೌನ್ ; ಕೃಷ್ಣನಗರಿ ಸಂಪೂರ್ಣ ಸ್ತಬ್ಧ

178
0
SHARE

ಉಡುಪಿ. ಸಂಡೇ ಲಾಕ್ ಡೌನ್ ಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕಳೆದ ಭಾನುವಾರದಂತೆ ಈ ವಾರ ಸಹ ಜನರು ಬೀದಿಗೆ ಬರುತ್ತಿಲ್ಲ. ಬೆಳಿಗ್ಗೆಯಿಂದಲೇ ಕೃಷ್ಣನಗರಿಯ ರಸ್ತೆಗಳು ಸಂಪೂರ್ಣ ಸ್ತಬ್ಧವಾಗಿವೆ. ಖಾಸಗಿ ಬಸ್ ಸಂಚಾರ, ಸರ್ಕಾರಿ ಬಸ್, ಅಟೋಗಳು, ಟ್ಯಾಕ್ಸಿ ಕೂಡಾ ಇವತ್ತು ರಸ್ತೆಯಲ್ಲಿ ಓಡಾಡುತ್ತಿಲ್ಲ.

ಸಂಡೇ ಲಾಕ್ ಡೌನ್ ಜೊತೆಗೆ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಮಳೆಯಾರ್ಭಟ ಮುಂದುವರೆದಿದೆ. ಮಳೆಯನ್ನು ಲೆಕ್ಕಿಸದೆ ಪೊಲೀಸರು ಜಿಲ್ಲೆಯ ಪ್ರಮುಖ ಚೆಕ್ ಪೊಸ್ಟ್ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮುಂಜಾನೆಯಿಂದಲೇ ಮಳೆಗೆ ಡೋಂಟ್ ಕೇರ್ ಎಂದು ಲಾಕ್ ಡೌನ್ ನಿಯಮ ಮೀರಿ ರಸ್ತೆಗೆ ಇಳಿದವರ ಮೇಲೆ ಕೊರೊನಾ ವಾರಿಯರ್ಸ್‌ ವಾರ್ನಿಂಗ್ ಮಾಡುತ್ತಿದ್ದಾರೆ. ಹಾಲು, ಪೇಪರ್, ಮೆಡಿಕಲ್ ಅಗತ್ಯ ವಸ್ತು ಸಾಗಾಟಕ್ಕೆ ಮಾತ್ರ ಅವಕಾಶವಿದ್ದು ಅದು ಬಿಟ್ಟು ಬೇಕಾಬಿಟ್ಟಿ ವಾಹನ ಸಂಚಾರಿಸುತ್ತಿರುವ ಸವಾರರನ್ನು ಪೋಲಿಸರು ತಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here