Home District ಉಡುಪಿಯಲ್ಲಿ ತಪ್ಪಿದ ಕೊರೋನಾ ಕಂಟ್ರೋಲ್ !

ಉಡುಪಿಯಲ್ಲಿ ತಪ್ಪಿದ ಕೊರೋನಾ ಕಂಟ್ರೋಲ್ !

ಉಡುಪಿಯಲ್ಲಿ ತಪ್ಪಿದ ಕೊರೋನಾ ಕಂಟ್ರೋಲ್ !

584
0

ಉಡುಪಿ; ಜಿಲ್ಲೆಯಾದ್ಯಂತ ಕೊರೋನಾ ಕಂಟ್ರೋಲ್ ತಪ್ಪಿದೆ. ಪ್ರತಿದಿನ ಸಾವಿರದ ಐನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಸರ್ಕಾರ ಕೊಟ್ಟಿರುವ ವಿನಾಯಿತಿಯನ್ನು ಜನ ದುರ್ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ಒಂದೊಂದು ಜಂಕ್ಷನ್ನಲ್ಲಿ ಮೂವತ್ತಕ್ಕಿಂತ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಿಗದಿತ ಕಾರಣ ಇಲ್ಲದೆ ಓಡಾಡುವವರಿಗೆ ಟ್ರಾಫಿಕ್ ಪೊಲೀಸರು, ನಗರ ಠಾಣೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಮಣಿಪಾಲ ಉಡುಪಿ ರಸ್ತೆ ಆಗಿರೋದ್ರಿಂದ ಬೇರೆ ಎಲ್ಲ ಏರಿಯಾ ಗಳಿಗಿಂತ ಈ ರಸ್ತೆಯಲ್ಲಿ ಹೆಚ್ಚಿನ ಜನರ ಓಡಾಟ ಕಂಡುಬಂತು.

ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಆಸ್ಪತ್ರೆಗಳು ಹೆಚ್ಚು ಇರುವ ಕಾರಣ ರೋಗಿಗಳ ಕಡೆಯವರು ಮೆಡಿಕಲ್ ಗೆ ಓಡಾಡುವವರು ಹೆಚ್ಚಾಗಿ ಕಂಡು ಬಂದರು. ಪೊಲೀಸರು ದಂಡ ವಿಧಿಸುವ ಜೊತೆ ಜನಜಾಗೃತಿಯನ್ನ ಮೂಡಿಸುತ್ತಿದ್ದಾರೆ. ಬೇಕಾಬಿಟ್ಟಿ ಓಡಾಡದಂತೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಜಿಲ್ಲೆಯ ಸದ್ಯದ ಕೊರೋನಾ ಸ್ಥಿತಿಗತಿಗಳ ಬಗ್ಗೆ ವಾರ್ನ್ ಮಾಡುತ್ತಿದ್ದಾರೆ. ನಿಗದಿತ ಕಾರಣ ಕೊಡದವರ ಮೇಲೆ ಪೊಲೀಸರು ದಂಡ ಹಾಕಿದ್ದಾರೆ. ಕಾರ್ಯಕ್ರಮಗಳಿಗೆ ಓಡಾಡುವವರಿಗೆ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಅವಕಾಶ ಕೊಡುತ್ತಿದ್ದಾರೆ.

ದಿನಸಿ ಅಂಗಡಿಗಳಿಗೆ 12 ಗಂಟೆಯ ತನಕ ಅವಕಾಶ ಕೊಟ್ಟ ಕಾರಣ ನಗರ ಭಾಗದಲ್ಲಿ ಕೊಂಚ ಓಡಾಟ ಹೆಚ್ಚು ಇದೆ. ಹತ್ತು ಗಂಟೆ ತನಕ ಸಮಯವಕಾಶ ಕೊಟ್ಟರೆ ಸಾಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಇದೆ. ಮುಂಜಾಗ್ರತೆ ವಹಿಸಿ ಕಠಿಣ ನಿಯಮ ಪಾಲಿಸಬೇಕು ಎಂಬ ಜನಾಭಿಪ್ರಾಯ ಉಡುಪಿಯಲ್ಲಿದೆ.

VIAಉಡುಪಿಯಲ್ಲಿ ತಪ್ಪಿದ ಕೊರೋನಾ ಕಂಟ್ರೋಲ್ !
SOURCEಉಡುಪಿಯಲ್ಲಿ ತಪ್ಪಿದ ಕೊರೋನಾ ಕಂಟ್ರೋಲ್ !
Previous articleಕೊರೊನಾ ಭೀತಿ ಹಿನ್ನೆಲೆ : ಜಿಲ್ಲಾದ್ಯಾಂತ ವಾರದಲ್ಲಿ ಎರಡು ದಿನ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಅವಕಾಶ
Next articleಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಕಡತಗಳು ಪೊಲೀಸರಿಂದ ಸೀಜ್!

LEAVE A REPLY

Please enter your comment!
Please enter your name here