ಉಕ್ರೇನ್ ಬಿಕ್ಕಟ್ಟಿನ ಬೇರುಗಳು ಸೋವಿಯತ್ ಒಕ್ಕೂಟದಲ್ಲಿದೆ: ವಿದೇಶಾಂಗ ಸಚಿವ ಎಸ್.ಜೈಶಂಕರ್

ಅಂತರಾಷ್ಟ್ರೀಯ

ಉಕ್ರೇನ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಮೂಲವು ಸೋವಿಯತ್‌ ಒಕ್ಕೂಟದ ನಂತರ ರಾಜಕೀಯದಲ್ಲಿದೆ. ಅಲ್ಲದೇ ನ್ಯಾಟೋ ಪಡೆಯ ವಿಸ್ತರಣೆ ಮತ್ತು ರಷ್ಯಾ ಹಾಗೂ ಯುರೋಪ್‌ ದೇಶಗಳ ನಡುವಿನ ಸಂಬಂಧದಲ್ಲಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಪ್ಯಾರಿಸ್‌ನಲ್ಲಿ ಮಾತನಾಡಿದ ಅವರು, ‘ಈ ದಿನಗಳಲ್ಲಿ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇವುಗಳು ಹೊಸ ಸವಾಲುಗಳನ್ನು ಹುಟ್ಟುಹಾಕಿದೆ. ಅದೇ ರೀತಿ ಕಳೆದ 30 ವರ್ಷಗಳ ಜಟಿಲ ಸನ್ನಿವೇಶಗಳ ಫಲಿತಾಂಶವೇ ಉಕ್ರೇನ್‌ನ ಬಿಕ್ಕಟ್ಟಾಗಿದೆ. ಭಾರತ, ಫ್ರಾನ್ಸ್‌ ಸೇರಿದಂತೆ ಹಲವು ದೇಶಗಳು ಈ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರ ಬಯಸುತ್ತವೆ.

ಆದರೆ ನೀವು ಸಮಸ್ಯೆಗೆ ಪರಿಹಾರ ಹುಡುಕುತ್ತೀರಾ ಅಥವಾ ಸಮಸ್ಯೆಯಿಂದ ತೃಪ್ತಿಯಾಗಿದ್ದೀರಾ ಎಂಬುದು ಇಲ್ಲಿ ನಿಜವಾದ ಪ್ರಶ್ನೆಯಾ ಗಿದೆ. ಭಾರತ ರಷ್ಯಾ ಮತ್ತು ಇತರ ದೇಶಗಳೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮಾತನಾಡಬಲ್ಲದು’ ಎಂದು ಹೇಳಿದ್ದಾರೆ. ತೈವಾನ್‌ ಬಿಕ್ಕಟ್ಟು ಮತ್ತು ಉಕ್ರೇನ್‌ ಬಿಕ್ಕಟ್ಟುಗಳನ್ನು ಹೋಲಿಸಲಾಗದು. ಎರಡಕ್ಕೂ ಬೇರೆಯದೇ ಆದ ಇತಿಹಾಸವಿದೆ. ಆದರೆ ಈ 2 ಬಿಕ್ಕಟ್ಟಿನ ಹಿಂದೆ ನ್ಯಾಟೋ ಪಡೆಗಳ ಕೈವಾಡವಿದೆ ಎಂದು ಅವರು ಪರೋಕ್ಷವಾಗಿ ರಷ್ಯಾ ಪರವಾಗಿ ಮಾತನಾಡಿದ್ದಾರೆ.

Leave a Reply

Your email address will not be published.