
ಒಡೆಸ್ಸಾ ನಗರದ ಮೇಲೆ ಬಾಂಬ್ ದಾಳಿ ನಡೆಸಲು ತಯಾರಿ: ಉಕ್ರೇನ್ ಅಧ್ಯಕ್ಷ ಆರೋಪ
ಉಕ್ರೇನ್ :ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಈ ನಡುವೆ ಒಡೆಸ್ಸಾ ನಗರದ ಮೇಲೆ ಬಾಂಬ್ ದಾಳಿ ನಡೆಸಲು ರಷ್ಯಾ ತಯಾರಿ ನಡೆಸುತ್ತಿದೆ. ಬಾಂಬ್ ದಾಳಿ ನಡೆಸಲು ರಷ್ಯಾ ಸೇನಾ ಪಡೆಗಳು ತಯಾರಿ ಮಾಡಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊ ಡೊಮಿರ್ ಜೆಲೆನ್ಸ್ಕಿ ಆರೋಪ ಮಾಡಿದ್ದಾರೆ. ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, ರಷ್ಯಾದಲ್ಲಿ ಮಾಸ್ಟರ್ಕಾರ್ಡ್, ವೀಸಾ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಜತೆ ರಷ್ಯಾ ಅಧ್ಯಕ್ಷ ಪುಟಿನ್ ಚರ್ಚೆ ನಡೆಸಿದ್ದಾರೆ. ಉಕ್ರೇನ್-ರಷ್ಯಾ ನಡುವಿನ ಯುದ್ಧದ ಬಗ್ಗೆ ಮಾತುಕತೆ ನಡೆಸಲಾಗಿದೆ. ಉಕ್ರೇನ್ನ ಇರ್ಪಿನ್ನಲ್ಲಿ ರಷ್ಯಾ ಸೇನೆ ಫೈರಿಂಗ್ ಮಾಡಿದ್ದು, ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.