ಉಕ್ರೇನ್ ನಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು ವಾಪಸ್: ತಮಗಾದ ಅನುಭವ ಬಿಚ್ಚಿಟ್ಟ ಕನ್ನಡಿಗ ಗೌತಮ್

ಬೆಂಗಳೂರು

ಬೆಂಗಳೂರು: ಯೂಕ್ರೇನ್​ನಿಂದ ಸುರಕ್ಷಿತವಾಗಿ  ಆಗಮಿಸಿದ ಕನ್ನಡಿಗ ಗೌತಮ್ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಮಗಾದ ಅನುಭವವನ್ನು ಹೇಳಿದ್ದಾರೆ. ಉಕ್ರೇನ್ ನಿಂದ ನಾವು ಭಾರತಕ್ಕೆ ವಾಪಸ್ ಬರಲು ಇಂಡಿಯನ್ ಗವರ್ನಮೆಂಟ್ ಸಪೋರ್ಟ್ ಬಹಳ‌ ಮುಖ್ಯವಾಗಿತ್ತು. ಕಳೆದ ಒಂದು ವಾರದಿಂದ ಭಾರತಕ್ಕೆ ವಾಪಸ್ ಬರಲು ತುಂಬಾ ಕಷ್ಟ ಪಟ್ಟೆವು. ಇದಕ್ಕೆ ಭಾರತ ಸರ್ಕಾರ ತುಂಬಾ ಸಪೋರ್ಟ್ ಮಾಡಿದೆ. ಅಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ.  ಜೀವಂತವಾಗಿ ಬರುತ್ತೇನೋ ಇಲ್ವೋ ಅಂತ ಭಯವಾಗಿತ್ತು. ಆದರೂ ಸುರಕ್ಷಿತವಾಗಿ ಬಂದಿದ್ದೇವೆ. ಇನ್ನೂ ಕೂಡ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಭಾರತೀಯ ವಿದ್ಯಾರ್ಥಿಗಳು ಕೀವ್, ಖಾರ್ಕಿವ್ ನಗರದ ಯುನಿವರ್ಸಿಟಿಗಳಿಲ್ಲಿದ್ದಾರೆ. ಅವರೆಲ್ಲರನ್ನೂ ರಕ್ಷಿಸುವ ಪ್ರಯತ್ನ ಆಗಬೇಕು ಎಂದು ಗೌತಮ್ ತಮಗಾದ ಅನುಭವವನ್ನು ತೋಡಿಕೊಂಡಿದ್ದಾರೆ.

Leave a Reply

Your email address will not be published.