‘’ಅನ್ ಲಾಕ್ ರಾಘವ’’ ಸಿನಿಮಾ ಟೈಟಲ್ ಲಾಂಚ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಚಲನಚಿತ್ರ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್  ನಿರ್ಮಾಣದ  ಹೊಸ ಚಿತ್ರದ ಟೈಟಲ್ ಲಾಂಚ್ ಇಂದು ಆಗಿದ್ದು, ಈ ವಿನೂತನ ಸಿನಿಮಾದ ಟೈಟಲ್ ಅನ್ನು ಅಶ್ವಿನಿ ಪುನೀತ್ ರಾಜ್‍ ಕುಮಾರ್ ಅವರು ಲಾಂಚ್ ಮಾಡಿದ್ದಾರೆ.  ಸತ್ಯ ಪಿಕ್ಚರ್ಸ್ ಹೊಸ ಸಿನಿಮಾ ಇದಾಗಿದ್ದು, ಯಾವಾಗಲೂ ವಿಭಿನ್ನ ಕಥೆಯ ಜೊತೆ ಬರುವ ಸತ್ಯ ಪ್ರಕಾಶ್​ ಈ ಬಾರಿ ಜನರಿಗೆ ಏನು ಮೋಡಿ ಮಾಡಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

ಸತ್ಯ ಪಿಕ್ಚರ್ಸ್ ನ ಹೊಸ ಸಿನಿಮಾದ ಹೆಸರು ಆನ್ ಲಾಕ್ ರಾಘವ. ಈ  ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳಲಿದ್ದು, ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಕತೆ ಬರೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.  ಮೊದಲಿನಿಂದಲೂ ಸತ್ಯ ಪ್ರಕಾಶ್ ಚಿತ್ರಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡುತ್ತಿದ್ದರು. ಈಗ ಅವರ ಅನುಪಸ್ಥಿತಿಯಲ್ಲಿ ಸತ್ಯ ಪಿಕ್ಚರ್ಸ್ ಹೊಸ ಹೆಜ್ಜೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್ ನೀಡಿದ್ದಾರೆ.

Leave a Reply

Your email address will not be published.