ಕ್ಯಾಮರಾ ಮುಂದೆಯೇ ಒಳ ಉಡುಪು ತೆಗೆದ ಅರ್ಜುನ್ ಕಪೂರ್ ಸಹೋದರಿ: ಪ್ರಿಯಾಂಕ ರಿಯಾಕ್ಷನ್ ಏನ್ ಗೊತ್ತಾ?

ಚಲನಚಿತ್ರ

ಹೈದರಾಬಾದ್: ಬಾಲಿವುಡ್ ನಟ ಅರ್ಜುನ್ ಕಪೂರ್ ಗೆಳತಿ ಮಲೈಕಾ ಅರೋರಾ ಜೊತೆ ಸಖತ್ ಸುದ್ದಿಯಾಗ್ತಿದ್ದು ಇತ್ತೀಚೆಗಷ್ಟೇ ಈ ಜೋಡಿ ಹಕ್ಕಿಗಳು ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಆದರೆ ಈ ಭಾರಿ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕಪೂರ್ ಸುದ್ದಿಯಾಗಿದ್ದು ಆಕೆ ಹಂಚಿಕೊಂಡು ವಿಡಿಯೋವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.

ಅನ್ಶುಲಾ ಇನ್ನೂ ಚಿತ್ರರಂಗಕ್ಕೆ ಎಂಟ್ರಿಕೊಡದೆ ಹೋದರು ಸಾಕಷ್ಟು ಫೇಮಸ್​ ಆಗಿದ್ದಾರೆ. ಅನ್ಶುಲಾ ತನ್ನ ಒಳಉಡುಪನ್ನು ಕ್ಯಾಮರಾ ಮುಂದೆಯೇ ಸಂತೋಷದಿಂದ ತೆಗೆದಿದ್ದು, ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದ ನಟಿ ಪ್ರಿಯಾಂಕ ಕೂಡ ರೆಪ್ಲೈ ಮಾಡಿದ್ದಾರೆ.

ದಪ್ಪಗಿರುವ ಕಾರಣಕ್ಕೆ ಅನ್ಶುಲಾ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಫಿಟ್ ಆಗಲು ನಿರಂತರವಾಗಿ ದೇಹವನ್ನು ದಂಡಿಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ಇವರು ವ್ಯಾಯಾಮದ ಹಲವಾರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಂದಿದ್ದಾರೆ. ಅದರಂತೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಒಳ ಉಡುಪನ್ನು ತೆಗೆಯುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

 

ಈ ವಿಡಿಯೋದಲ್ಲಿ ಅನ್ಶುಲಾ ತಮ್ಮ ಒಳ ಉಡುಪನ್ನು ಕ್ಯಾಮರಾದ ಮುಂದೆ ತೆಗೆದಿರುವುದು ಕಂಡುಬರುತ್ತದೆ. ಈ ವಿಡಿಯೋಗೆ ‘ಭಾನುವಾರ ಬ್ರಂಚ್‌ನಿಂದ ಮನೆಗೆ ಬಂದ ನಂತರ ಅತ್ಯಂತ ಸಂತೋಷದ ಕ್ಷಣ, #ನೋಬ್ರಾಕ್ಲಬ್ ‘ ಎಂದು ಶೀರ್ಷಿಕೆ ಬರೆದಿದ್ದಾರೆ.ಇದೀಗ ಪ್ರಿಯಾಂಕಾ ಚೋಪ್ರಾ ಅವರು ಅನ್ಶುಲಾ ಅವರ ವಿಡಿಯೋಗೆ ‘ಪ್ರತಿದಿನವೂ’ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸ್ಮೈಲಿಂಗ್​ ಇಮೋಜಿ ಹಾಕಿದ್ದಾರೆ. ಕೊರೊನಾ ಸಮಯದಲ್ಲಿ ಪ್ರತಿದಿನ ಭಾನುವಾರ ಎಂದು ಮಹಿಳಾ ಬಳಕೆದಾರರು ಬರೆದಿದ್ದಾರೆ. ಈ ಕಾಮೆಂಟ್‌ಗೆ ಅನ್ಶುಲಾ ನಗುತ್ತಾ ಉತ್ತರಿಸಿದ್ದು, ಸಂಪೂರ್ಣ ಸತ್ಯ ಎಂದಿದ್ದಾರೆ. ಬಹುತೇಕ ಎಲ್ಲಾ ಮಹಿಳಾ ಬಳಕೆದಾರರು ಅನ್ಶುಲಾ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.

Leave a Reply

Your email address will not be published.