ಪದವಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸುವ ವಿಚಾರ: ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ

ಬೆಂಗಳೂರು

ಬೆಂಗಳೂರು: ಪದವಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪದವಿ ಕಾಲೇಜಿನಲ್ಲಿ ಕಾಲೇಜು ಡೆವಲಪ್ಮೆಂಟ್ ಬೋರ್ಡ್ ನಲ್ಲಿ ಯೂನಿಫಾರ್ಮ್ ಇದ್ದರೆ ಕಡ್ಡಾಯವಾಗಿ ಧರಿಸಬೇಕು, ಅಲ್ಲಿ ಹಿಜಾಬ್ ಹಾಕುವಂತಿಲ್ಲ. ಇನ್ನೂ  ಡೆವಲಪ್ಮೆಂಟ್ ಬೋರ್ಡ್ ನಲ್ಲಿ ಯೂನಿಫಾರ್ಮ್ ಬೋರ್ಡ್ ಇಲ್ಲದಿದ್ದರೆ ಅಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಏನು ಬೇಕಾದರೂ ಹಾಕಿಕೊಳ್ಳಬಹುದು. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.