ಹುಬ್ಬಳ್ಳಿ. ನಗರದ ಚೆನ್ನಮ್ಮ ವೃತ್ತದಲ್ಲಿ ಉತ್ತರ ಪ್ರದೇಶ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಬೇಕಾ ಬಿಟ್ಟು ಓಡಾಡುತ್ತಿರುವುದು ಎಲ್ಲರಲ್ಲೂ ಆತಂಕ ಮೂಡಿಸಿತ್ತು.ನಗರದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿರೋ ವ್ಯಕ್ತಿಗೆ ನಿನ್ನೆ ರಾತ್ರಿ ಕೊರೊನಾ ಪಾಸಿಟಿವ್ ಅಂತ ಮೇಸೆಜ್ ಬಂದಿದೆ.
ರಾತ್ರಿ ೧೧ ಗಂಟೆಯಿಂದ ಪೋನ್ ಮಾಡಿದ್ರು ಯಾರು ಕೇರ್ ಮಾಡ್ತಿಲ್ಲ ಅಂತ ವ್ಯಕ್ತಿ ಗೋಳಾಡುತ್ತಿದ್ದ. ಈ ಹಿನ್ನೆಲೆ ಚೆನ್ನಮ್ಮ ವೃತ್ತದಲ್ಲಿ ಪಾಸಿಟಿವ್ ಬಂದಿರೋ ವ್ಯಕ್ತಿ ಓಡಾಡುತ್ತಿರೋ ವ್ಯಕ್ತಿಯ ಗೋಳಾಟದ ಕುರಿತು ಪ್ರಜಾಟಿವಿ ಸುದ್ದಿ ಪ್ರಸಾರ ಮಾಡಿ ಅಧಿಕಾರಿಗಳಿಗೆ ಎಚ್ಚರಿಸಿತ್ತು.
ಪ್ರಜಾ ಟಿವಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸೋಂಕಿತ ವ್ಯಕ್ತಿಯನ್ನುಆಂಬುಲೆನ್ಸ್ ಮೂಲಕರ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.