ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೂ ಲಸಿಕೆ ನೀಡಲು ಮನವಿ

ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೂ ಲಸಿಕೆ ನೀಡಲು ಮನವಿ

562
0

ವರದಿ: ನಾ. ಅಶ್ವಥ ಕುಮಾರ್

ಚಾಮರಾಜಗರ : ಕೋರೊನಾ ಸೋಂಕು ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತಿರುವ ಗ್ರಾಮ ಪಂಚಾಯ್ತಿಗಳ ಜನಪ್ರತಿನಿಧಿಗಳಿಗೂ ಕೋರೋನಾ ನಿಯಂತ್ರಣ ಲಸಿಕೆ ಕೊಡಿ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷರೊಬ್ಬರು ಮನವಿ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣ ರವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ, ರಾಜ್ಯ ಸರ್ಕಾರವು ಕೋರೊನಾ ವಾರಿಯರ್ಸ್ ಎಂದು ಗ್ರಾಮ ಪಂಚಾಯ್ತಿಯ ಸಿಬ್ಬಂದಿಗಳಿಗೆ ಲಸಿಕೆ ನೀಡಿದೆ, ಆದರೆ ಅದೇ ಗ್ರಾಮ ಪಂಚಾಯ್ತಿಗಳಲ್ಲಿ ಇರುವ ಜನ ಪ್ರತಿನಿಧಿಗಳಿಗೆ ಲಸಿಕೆ ನೀಡಿದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮ ಪಂಚಾಯ್ತಿಗಳಲ್ಲಿ ಸಿಬ್ಬಂದಿಗಳೊಂದಿಗೆ ಜನಪ್ರತಿನಿಧಿಗಳು ಇರುವರು. ಜೀವದ ಹಂಗುತೊರೆದು ಕೋರೊನಾ ಸೋಂಕು ತಡೆಗೆ ಶ್ರಮಿಸುತ್ತಿರುವ ಜನಪ್ರತಿನಿಧಿಗಳಿಗೆ ಲಸಿಕೆ ನೀಡಬೇಕೆಂದು ಮನವಿ ಮಾಡುತ್ತಾ, ಗ್ರಾಮಾಂತರ ಪ್ರದೇಶಗಳಲ್ಲಿನ ಪಂಚಾಯ್ತಿಯ ಸದಸ್ಯರುಗಳು ಮತ್ತು ಸಿಬ್ಬಂದಿಗಳು ಒಗ್ಗಟ್ಟಾಗಿ ಕೋರೊನಾ ಸೋಂಕು ತಡೆಗೆ ಅಗತ್ಯ ಕ್ರಮ ವಹಿಸಿದಾಗ ಮಾತ್ರ ಗ್ರಾಮಾಂತರ ಪ್ರದೇಶದಲ್ಲಿ ಕೋರೊನಾ ಸೋಂಕು ತಡೆಗಟ್ಟಬಹುದು ಒಂದೆರಡು ಪಂಚಾಯ್ತಿಗಳಲ್ಲಿ ಕಠಿಣ ವಾದ ನಿರ್ಧಾರ ಕೈಗೊಂಡು, ಮತ್ತೆರಡು ಪಂಚಾಯ್ತಿಗಳಲ್ಲಿ ಸಡಿಲಿಕೆ ಮಾಡಿದರೆ ಕೋರೊನಾ ಸೋಂಕು ಕಡಿಮೆಯಾಗದು ಎಂದು ಹೇಳಿದ್ದಾರೆ.

ಮನುಷ್ಯನಿಗೆ ಮಹಾಮಾರಿಯಾಗಿರುವ ಕೋರೊವನ್ನು ಚಾಮರಾಜನಗರ ಜಿಲ್ಲೆಯಲ್ಲಿ ಹಿಮ್ಮೆಟ್ಟಿಸಲು ಗ್ರಾಮಾಂತರ ಪ್ರದೇಶಗಳಲ್ಲಿರುವ ಗ್ರಾಮ ಪಂಚಾಯ್ತಿ ಅಧ್ಯಕ್ಷರು-ಉಪಾಧ್ಯಕ್ಷರು, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತರೊಂದಿಗೆ ಸಹಕಾರ ನೀಡಿಬೇಕೆಂದು ಮನವಿ ಮಾಡಿದ್ದಾರೆ.

VIAಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೂ ಲಸಿಕೆ ನೀಡಲು ಮನವಿ
SOURCEಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೂ ಲಸಿಕೆ ನೀಡಲು ಮನವಿ
Previous articleಕೊರೋನಾ ಎರಡನೇ ಅಲೆ ಆರ್ಭಟ; ಕೋಳಿ ಬಲಿ ಕೊಟ್ಟು ದಂಡಿನ ಮಾರಿಯನ್ನ ತಂಪು ಮಾಡಿದ ಜನ
Next articleಇಂದಿನಿಂದ 4ದಿನಗಳ ಕಾಲ ಯಾದಗಿರಿ ಸಂಪೂರ್ಣ ಲಾಕ್ ಡೌನ್!

LEAVE A REPLY

Please enter your comment!
Please enter your name here