Home Cinema “ ವೀರ ಸಿಂಧೂರ ಲಕ್ಷ್ಮಣ” ಅವತಾರವೆತ್ತಲು ಸಾರಥಿ ಸಿದ್ದ !

“ ವೀರ ಸಿಂಧೂರ ಲಕ್ಷ್ಮಣ” ಅವತಾರವೆತ್ತಲು ಸಾರಥಿ ಸಿದ್ದ !

284
0
SHARE

ಬೆಂಗಳೂರು. ದರ್ಶನ್ ಮನಸು ಹೊಸತನದತ್ತ ವಾಲುತ್ತಿದೆ. ಕಮರ್ಷಿಯಲ್ ಸಿನಿಮಾಗಳಾಚೆಯೂ ದರ್ಶನ್ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ನಮ್ಮ ಪ್ರೀತಿಯ ರಾಮು.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.. ಕುರುಕ್ಷೇತ್ರ.. ಅಂಥಹ ಸಿನಿಮಾಗಳೂ ದರ್ಶನ್ ಮಾಡಿರುವ ಪ್ರಯೋಗದ ಫಲಗಳೇ. ರಾಜಾ ವೀರ ಮದಕರಿ ನಾಯಕ ದರ್ಶನ್ ಮಾಡ್ತಿರುವ ಮತ್ತೊಂದು ಎಕ್ಸ್ ಫಿರಿಮೆಂಟ್. ಹಿಸ್ಟೋರಿಕಲ್.. ಪಿರಿಯಾಡಿಕಲ್. ಜಾನರ್ ನತ್ತ ಹೆಚ್ಚಿನ ಒಲವನ್ನ ತೋರುತ್ತಿರುವ ದರ್ಶನ್  ಇದೀಗ ವೀರ ಸಿಂಧೂರ ಲಕ್ಷ್ಮಣನ ಅವತಾರವೆತ್ತಲು ಸಿದ್ಧರಾಗಿದ್ದಾರೆ.

 

ವಿಶೇಷ ಅಂದ್ರೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ತರುಣ್ ಸುಧೀರ್ ವೀರ ಸಿಂಧೂರ ಲಕ್ಷ್ಮಣ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದಾರೆ. ಇನ್ನು, ಇದೇ ರಾಬರ್ಟ್‌ಗೆ ಬಂಡವಾಳ ಹೂಡಿರುವ ನಿರ್ಮಾಪಕ ಉಮಾಪತಿ ವೀರ ಸಿಂಧೂರ ಲಕ್ಷ್ಮಣನಿಗೂ ದುಡ್ಡು ಹೂಡಲಿದ್ದಾರೆ. ಇನ್ನು, ದರ್ಶನ್ ಖುದ್ದು ಸಿಂಧೂರ ಲಕ್ಷ್ಮಣನ ಸಿನಿಮಾ ಮಾಡ್ಬೇಕೆಂಬ ಇಂಗಿತ ವ್ಯಕ್ತಪಡಿಸಿರೋದು ಮತ್ತೊಂದು ವಿಶೇಷ. ಹೌದು, ರಾಬರ್ಟ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಖುದ್ದು ದರ್ಶನ್ ತರುಣ್ ಬಳಿ ಸಿಂಧೂರ ಲಕ್ಷ್ಮಣನ ಸಿನಿಮಾ ಮಾಡುವ ಬಯಕೆ ವ್ಯಕ್ತಪಡಿಸಿದ್ದರು.

 

ನೀನೆ ನಿರ್ದೇಶನ ಮಾಡು ಎಂದಿದ್ದರು. ಹೇಳಿ.. ಕೇಳಿ.. ತರುಣ್ ಗೆ ಸಿಂಧೂರ ಲಕ್ಷ್ಮಣನ ವೀರ ಕಥನ ಚೆನ್ನಾಗಿಯೇ ಗೊತ್ತು. ಯಾಕಂದ್ರೆ  ತರುಣ್ ತಂದೆ ಖ್ಯಾತ ನಟ ಸುಧೀರ್ ಅವರು ತಮ್ಮ ನಾಟಕದ ಕಂಪನಿಯಿಂದ ಇದೇ ಸಿಂಧೂರ ಲಕ್ಷ್ಮಣನ ನಾಟಕವನ್ನೂ ಹಿಂದೆ ಆಡಿದ್ದರು. ಲಕ್ಷ್ಮಣನ ಪಾತ್ರದಲ್ಲಿ ಎಲ್ಲರ ಹೃದಯವನ್ನೂ ಗೆದ್ದಿದ್ದರು. ಈ ಅರ್ಥದಲ್ಲಿ ತರುಣ್ ಗೆ ಸಿಂಧೂರ ಲಕ್ಷ್ಮಣನ ಕಥೆ ಹೊಸತೇನಲ್ಲ. ಇದೇ ಕಾರಣದಿಂದಾಗಿ ಸಿಂಧೂರ ಲಕ್ಷ್ಮಣ ಕಥೆಯನ್ನು ಮುಂದಿನ ದಿನಗಳಲ್ಲಿ ಸಿನಿಮಾ ಮಾಡೋಣ, ನಿನಗೆ ಹೇಗೂ ಕಥೆ ಗೊತ್ತಲ್ಲ ಕೊಂಚ ಸ್ಕ್ರಿಪ್ಟ್ ಮೇಲೆ ವರ್ಕ್ ಮಾಡು. ನೀನೇ ನಿರ್ದೇಶನ ಮಾಡು ಎಂದು ಹೇಳಿದ್ದರು. ಅದ್ರಂತೆ ತರುಣ್ ಕೂಡಾ ಸ್ವಲ್ಪ ಮಟ್ಟಿಗಿನ ಸ್ಕ್ರಿಪ್ಟ್ ಕೆಲ್ಸಗಳನ್ನ ರೆಡಿ ಮಾಡಿಕೊಂಡಿದ್ದಾರೆ.

ಇನ್ನು, ‘ಸಿಂಧೂರ ಲಕ್ಷ್ಮಣನ ಕಥೆಯನ್ನು ಸಿನಿಮಾ ಮಾಡಬೇಕು ನೀವು, ಆ ರೈಟ್ಸ್ ತೆಗೆದಿಟ್ಟುಕೊಳ್ಳಿ ಎಂದು ನಿರ್ಮಾಪಕ ಉಮಾಪತಿ ಅವ್ರಿಗೆ ಹೇಳಿದ್ದು ಕೂಡಾ ಖುದ್ದು ದರ್ಶನ್ ಅವ್ರೇ. ಅಲ್ಲಿಗೆ ನೀವೆ ಲೆಕ್ಕ ಹಾಕಿ ದರ್ಶನ್ ಅವ್ರಿಗೆ ಸಿಂಧೂರ ಲಕ್ಷ್ಮಣನ ಜೀವನ ಕಥೆ ಸಿನಿಮಾವನ್ನಾಗಿಸ್ಬೇಕೆಂಬ ತುಡಿತ ಎಷ್ಟರ ಮಟ್ಟಿಗೆ ಇದೆ ಅನ್ನುವದನ್ನ. ಇನ್ನು, ದರ್ಶನ್.. ಸಿಂಧೂರ ಲಕ್ಷ್ಮಣನ ಕಥೆಯನ್ನ ಸಿನಿಮಾ ರೂಪಕ್ಕಿಳಿಸಬೇಕೆಂಬ ಮಹತ್ವಕಾಂಕ್ಷೆಯನ್ನ ಇಟ್ಕೊಂಡಿದ್ದಾರೆ. ಆದ್ರೆ ಇದು ಸಾಧ್ಯವಾಗೋದು ಯಾವಾಗ..? ಇಂಥಹದ್ದೊಂದು ಪ್ರಶ್ನೆ ಇದೀಗ ಎಲ್ಲರನ್ನೂ ಕಾಡ್ತಿದೆ.

ಇದಕ್ಕೆ ಕಾರಣ ದರ್ಶನ್ ಅವರ ಮುಂದಿರುವ ಸಾಲು ಸಾಲು ಸಿನಿಮಾಗಳು. ಹೌದು, ಸದ್ಯಕ್ಕೆ ದರ್ಶನ್ ಅಭಿನಯದ ರಾಬರ್ಟ್ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು, ಹೊಸ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ತಕ್ಷಣ ಮಿಲನ ಪ್ರಕಾಶ್ ಅವ್ರ ಜೊತೆಗಿನ ಸಿನಿಮಾ ಶುರುವಾಗಲಿದೆ. ಕೊರೊನಾ ಹಾವಳಿ ಕಡಿಮೆಯಾಗಿದ್ದೇ ಆದಲ್ಲಿ ಡಿಸೆಂಬರ್ ನಂತರ ರಾಜಾ ವೀರ ಮದಕರಿ ನಾಯಕ ಚಿತ್ರದ ಚಿತ್ರೀಕರಣ ಮತ್ತೆ ಶುರುವಾಗಲಿದೆ. ಇದರ ನಡುವೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಜೊತೆ ದರ್ಶನ್ ಮತ್ತೊಂದು ಸಿನಿಮಾ ಮಾಡ್ತಾರೆ ಎಂಬ ಸುದ್ದಿಯೂ ಇದೆ. ಇದೆಲ್ಲಾ ಆದ ಬಳಿಕವೇ ಸಿಂಧೂರ ಲಕ್ಷ್ಮಣನ ಕಥೆ ಎತ್ತಿಕೊಳ್ಳಲು ಸಾಧ್ಯ.

ಆದರೆ ಈ ಕಥೆಯನ್ನು ದರ್ಶನ್ ಅವರೇ ಇಷ್ಟಪಟ್ಟು ಚಾಲನೆ ಕೊಟ್ಟಿರುವಾಗ ಯಾವಾಗ ಬೇಕಾದರೂ ಆರಂಭವಾಗಬಹುದು. ಆ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.  ಅದೇನೆ ಇರ‍್ಲಿ ಆ ಸಮಯದಲ್ಲಿ ಅಸಹಕಾರ ಚಳವಳಿಯಲ್ಲಿ ತನ್ನದೇ ಆದ ಗೆರಿಲ್ಲಾ ಪಡೆಯನ್ನು ಕಟ್ಟಿಕೊಂಡು ಆಂಗ್ಲರು ಕೂಡಿಟ್ಟುಕೊಂಡ ಹಣ, ಸಂಪತ್ತನ್ನು ದೋಚಿ ಬಡಬಗ್ಗರಿಗೆ ಹಂಚುತ್ತಿದ್ದ. ಹತ್ತು ಅಡಿ ಗೋಡೆಯನ್ನು ಹಾರಬಲ್ಲವನಾಗಿದ್ದ, ಹಿಮ್ಮುಖವಾಗಿಯೂ ವೇಗವಾಗಿ ಓಡುವಂತಹ ಛಾತಿ ಹೊಂದಿದ್ದ, ತನ್ನ ಸ್ನೇಹಿತನೊಬ್ಬನ ಕುತಂತ್ರಕ್ಕೆ ಬ್ರಿಟಿಷರಿಂದ ಅತೀ ಚಿಕ್ಕ ವಯಸ್ಸಿನಲ್ಲಿಯೇ ಹತನಾದ ವೀರ ಸಿಂಧೂರ ಲಕ್ಷ್ಮಣನ ಕಥೆ ಆದಷ್ಟು ಬೇಗನೇ ಸಿನಿಮಾ ರೂಪದಲ್ಲಿ ಮೂಡಿ ಬರಲಿ, ದರ್ಶನ್ ಸಿಂಧೂರ ಲಕ್ಷ್ಮಣನ ಅವತಾರದಲ್ಲಿ ಬೆಳ್ಳಿ ಪರದೆಯಲ್ಲಿ ಧಗಧಗಿಸಲಿ ಅನ್ನೋದೇ ಡಿ ಕಂಪನಿಯ ಆಶಯ.

 

 

LEAVE A REPLY

Please enter your comment!
Please enter your name here