Home Crime (Video)ಈ ಆಸ್ಪತ್ರೆಗೆ ಹೋದ್ರೆ ಬದುಕಿದ್ದವರು ಸಾಯ್ತಾರೆ. ಸತ್ತವರನ್ನು ಬದುಕಿಸ್ತೀವಿ ಅಂತಾ ಫುಲ್ ಟ್ರೀಟ್ಮೆಂಟ್ ಕೊಡ್ತಾರೆ..?! ದುಡ್ಡಿಗಾಗಿ...

(Video)ಈ ಆಸ್ಪತ್ರೆಗೆ ಹೋದ್ರೆ ಬದುಕಿದ್ದವರು ಸಾಯ್ತಾರೆ. ಸತ್ತವರನ್ನು ಬದುಕಿಸ್ತೀವಿ ಅಂತಾ ಫುಲ್ ಟ್ರೀಟ್ಮೆಂಟ್ ಕೊಡ್ತಾರೆ..?! ದುಡ್ಡಿಗಾಗಿ ಕೀಳು ಮಟ್ಟಕ್ಕಿಳಿದ ಈ ಆಸ್ಪತ್ರೆಯ ಕಥೆ ಇದು…

756
0
SHARE

ಈ ಆಸ್ಪತ್ರೆಗೆ ನೀವು ಹೋದ್ರೆ ಪ್ರಾಣ ಹೋಗೋದು ಗ್ಯಾರಂಟಿ.. ಚೆನ್ನಾಗಿರೋ ಜನ್ರು ಕೂಡಾ ಹೆಣವಾಗಿ ಹೊರ ಬರ್ತಾರೆ. ಆ ಆಸ್ಪತ್ರೆ ನಮ್ಮ ಸಿಟಿ ಮಧ್ಯ ಇದ್ರು ಕೂಡಾ ಯೂಸ್ ಇಲ್ಲ. ದುಡ್ಡಿನ ಆಸೆಗಾಗಿ ಅಮಾಯಕ ಜನ್ರ ಪ್ರಾಣವನ್ನೇ ತಗೀತಾರೆ ಇಲ್ಲಿನ ವೈದ್ಯರು.ನಗರದ ಚಾಮರಾಜಪೇಟೆ ಯಲ್ಲಿರೋ ಬೃಂದಾವನ ಆಸ್ಪತ್ರೆ ಕಥೆನೇ ಇಷ್ಟು.

ಇಲ್ಲಿ ದುಡ್ಡಿಗೋಸ್ಕರ ವೈದ್ಯರು ಏನನ್ನಾದ್ರೂ ಮಾಡ್ತಾರೆ. ಇದಕ್ಕೆ ಉದಾಹರಣೆ ಅಂದ್ರೆ ಇವತ್ತು ನಡೆದ ಈ ಘನ ಘೋರ ಘಟನೆ. ಚನ್ನಪಟ್ಟಣ ಮೂಲದ ಮಹದೇವಪ್ಪ ಹೆಚ್1ಎನ್1 ಚಿಕಿತ್ಸೆಗೆ ಅಂತಾ ಈ ಬೃಂದಾವನ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ಸುಮಾರು 17 ದಿನದಿಂದ ಇವ್ರಿಗೆ ಚಿಕಿತ್ಸೆ ಕೊಡೋದಾಗಿ ಹೇಳಿ ಕುಟುಂಬಸ್ಥರಿಂದ ಸಾವಿರಾರು ರೂಪಾಯಿ ಮೆಡಿಸನ್ ತರೆಸಿಕೊಂಡಿದ್ದಾರೆ.

ಬರೋಬ್ಬರಿ 3 ಲಕ್ಷ ಬಿಲ್ ಕಟ್ಟಿಸಿಕೊಂಡಿದ್ದಾರೆ. ಇನ್ನು ಇಷ್ಟು ದಿನ ಆದ್ರೂ ಸರಿಯಾಗಿ ಟ್ರೀಟ್ಮೆಂಟ್ ಕೊಟ್ಟಿಲ್ಲ ಅಂತಾ ಮೃತ ಮಹದೇವಪ್ಪನ್ನು ಡಿಸ್ಚಾರ್ಜ್ ಮಾಡಿ ಅಂತಾ ಕೇಳಿಕೊಂಡಾಗ, ಕ್ರಿಟಿಕಲ್ ಕಂಡಿಷನ್ ಇದೆ ಉಳಿಸೋಕೆ ಆಗಿಲ್ಲ ಅಂತಾ ಹೇಳಿದ್ದಾರೆ.ಇದ್ರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿದ್ರು.

ಇವ್ರು ಮೊದಲೇ ಮೃತಪಟ್ಟಿದ್ರೂ ನಮ್ ಹತ್ರ ದುಡ್ಡು ತಗೋಳೋಕೆ ಮೋಸ ಮಾಡಿದ್ದಾರೆ ಅಂತಾ ಆರೋಪಿಸಿದ್ರು. ಇಷ್ಟೆಲ್ಲಾ ಆಗ್ತಿದ್ರೂ ಕೂಡಾ ಆಡಳಿತ ಮಂಡಳಿಯವ್ರು ತಲೆಮರೆಸಿಕೊಂಡಿದ್ರು. ತರಾತುರಿಯಲ್ಲಿ ಮಹದೇವಪ್ಪನ ಮೃತ ದೇಹ ನೀಡಿ, ಕುಟುಂಬಸ್ಥರನ್ನು ಸಾಗುಹಾಕುವ ಕೆಲಸ ಮಾಡಿದ್ರು.

ಇನ್ನು ಇವ್ರಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಏನ್ ಸರ್ ಇದೆಲ್ಲಾ ಅಂತ ಕೇಳಿದ್ರೆ, ನಮ್ಮಿಂದ ಈ ಸಾವು ಆಗಿಲ್ಲ ನಾವು ಸರಿಯಾಗಿನೇ ಟ್ರೀಟ್ಮೆಂಟ್ ಕೊಟ್ಟಿದ್ದೀವಿ ಅಂತಾ ಜಾರಿಕೊಳ್ತಿದ್ದಾರೆ.ಒಟ್ನಲ್ಲಿ ಹಣದ ಆಸೆಗಾಗಿ ಕೆಲ ಆಸ್ಪತ್ರೆಗಳು ಅದೆಷ್ಟೋ ಅಮಾಯಕರ ಪ್ರಾಣವನ್ನು ತೆಗೆಯೋಕು ಹಿಂದೆ ಮುಂದೆ ನೋಡೋದಿಲ್ಲ. ಆದಷ್ಟು ಬೇಗ ಆರೋಗ್ಯ ಇಲಾಖೆ ಈ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಂಡು ಸಾಯೋ ಜೀವಗಳನ್ನ ಉಳಿಸ್ಬೇಕಾಗಿದೆ.

LEAVE A REPLY

Please enter your comment!
Please enter your name here