ವೈರಲ್ ಆಯ್ತು ವಿಮಾನದೊಳಗೆ ಸಿಗರೇಟ್ ಸೇದುತ್ತಿರುವ ವಿಡಿಯೋ: ಸಿಂಧಿಯಾಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ರಾಜಕೀಯ

ನವದೆಹಲಿ: ಸ್ಪೈಸ್‍ಜೆಟ್ ವಿಮಾನದೊಳಗೆ ವ್ಯಕ್ತಿಯೋರ್ವ ಸಿಗರೇಟ್ ಸೇದಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದ್ದು ಸಿಗರೇಟ್ ಸೇದಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಗುಗಾರ್ಂವ್ ನಿವಾಸಿ ಬಾಬಿ ಕಟಾರಿಯಾ ವಿಮಾನದ ಸೀಟಿನ ಮೇಲೆ ಶೂಧರಿಸಿ ಮಲಗಿಕೊಂಡು, ಲೈಟರ್‌ನಲ್ಲಿ ಸಿಗರೇಟ್ ಹೊತ್ತಿಸಿಕೊಂಡು, ನಿಟ್ಟುಸಿರು ಬಿಡುತ್ತಾ ಸಿಗರೇಟ್ ಸೇದುತ್ತಿರುವುದನ್ನು ವೀಡಿಯೋದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಾಬಿ ಕಟಾರಿಯಾ ಸಿಗರೇಟ್ ಸೇದುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಟ್ವಿಟರ್ ನಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ಯಾಗ್ ಮಾಡಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಮೂಲಗಳ ಪ್ರಕಾರ ಈ ವೀಡಿಯೋ 2022 ಜನವರಿ 23ರದ್ದಾಗಿದೆ. ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2022ರ ಜನವರಿ 23 ರಂದು, ಬಲ್ವಿಂದರ್ ಕಟಾರಿಯಾ ಅವರು ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ದೆಹಲಿಗೆ ಪ್ರಯಾಣಿಸಿದ್ದ ವೇಳೆ ಈ ವಿಡಿಯೋ ಮಾಡಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಸದ್ಯ ಬಾಬಿ ಕಟಾರಿಯಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಈ ಪ್ರಕರಣ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

Leave a Reply

Your email address will not be published.