ಟಗರಿನ ಮುಂದೆ ಖಡಕ್ ಲುಕ್ ನಲ್ಲಿರುವ ವಿರಾಟ್ ಕೊಹ್ಲಿ..! ಫೋಟೋ ವೈರಲ್

ಕ್ರೀಡೆ

ಬೆಂಗಳೂರು: ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟಗರು ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಖಡಕ್ ಲುಕ್‍ನಲ್ಲಿರುವ ಟಗರಿನ ಮುಂದೆ ವಿರಾಟ್ ಕೊಹ್ಲಿ ನಿಂತಿರುವ ಪೋಸ್ಟ್‌ನ್ನು ಆರ್‌ಸಿಬಿ ಫ್ರಾಂಚೈಸ್ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದೆ. ಈ ಪೋಸ್ಟ್‌ನಲ್ಲಿ ಟಗರು ಕಣ್ಣನ್ನು ಕೆಂಪಾಗಿಸಿ ಕೊಹ್ಲಿಯನ್ನು ನೋಡುತ್ತಿದ್ದು, ಕೊಹ್ಲಿ ಕೂಡ ಕಣ್ಣು ಕೆಂಪಗೆ ಮಾಡಿಕೊಂಡು ಟಗರಿನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟಗರಿನ ಮುಂದೆ ಕೊಹ್ಲಿಯ ಫೋಟೋ ಕಂಡು ಆರ್​ಸಿಬಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಕೊಹ್ಲಿಯ ಟಗರು ಲುಕ್ ವೈರಲ್ ಆಗುತ್ತಿದೆ.

Leave a Reply

Your email address will not be published.