Viral Video..ಮಿಲಿಟರಿ ಕರ್ತವ್ಯದ ವೇಳೆ ಹಾಡು ಹಾಡಿದ ಉಕ್ರೇನಿಯನ್ ರಾಕ್ ಸ್ಟಾರ್..!

ಅಂತರಾಷ್ಟ್ರೀಯ

ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಇಡೀ ಜಗತ್ತಿನ ದೂರದರ್ಶನ ಪರದೆಗಳಲ್ಲಿ ಬಿತ್ತರವಾಗುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿ ಐದು ದಿನಗಳು ಕಳೆದಿದ್ದರೂ, ದೇಶದ ನಾಗರಿಕರು ಬೆದರಿಕೆಗಳಿಗೆ ತಲೆಬಾಗುತ್ತಿಲ್ಲ. ಈ ನಡುವೆ ಮಿಲಿಟರಿ ಕರ್ತವ್ಯದಲ್ಲಿರುವ ಉಕ್ರೇನಿಯನ್ ರಾಕ್‌ಸ್ಟಾರ್ ಆಂಡ್ರಿ ಖ್ಲಿವ್ನ್ಯುಕ್, ನಿರ್ಜನವಾದ ಕೈವ್ ಬೀದಿಯಲ್ಲಿ ಹಾಡಿರುವ ವಿಡಿಯೋ ವೈರಲ್ ಆಗಿದೆ.

 

ಬೂಮ್‌ಬಾಕ್ಸ್ ಬ್ಯಾಂಡ್‌ನ ಉಕ್ರೇನ್ ಗಾಯಕ ಆಂಡ್ರಿ ಖ್ಲಿವ್ನ್ಯುಕ್ ರಷ್ಯಾದ ವಿರುದ್ಧ ಹೋರಾಡಲು ಸೈನ್ಯಕ್ಕೆ ಸೇರಿದ್ದಾರೆ. ಇದೀಗ, ಜನಪ್ರಿಯ ಗಾಯಕನ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸೆಂಟ್ರಲ್ ಕೈವ್‌ನ ನಿರ್ಜನ ಬೀದಿಯಲ್ಲಿ ಆಂಡ್ರಿ ತಮ್ಮ ಕೈಯಲ್ಲಿ ಗನ್ ಹಿಡಿದು ಹಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ನೆಟ್ಟಿಗರು ಉಕ್ರೇನ್ ಪರ ಧ್ವನಿ ಎತ್ತಿದ್ದು, ಯುದ್ಧ ನಿಲ್ಲಿಸಿ ಎಂಬಂತಹ ಘೋಷವಾಕ್ಯಗಳನ್ನು ಮಾಡಿದ್ದಾರೆ.

Leave a Reply

Your email address will not be published.