Vishal injured while shooting.. ”ಮಾರ್ಕ್ ಆಂಟನಿ” ಚಿತ್ರದ ಶೂಟಿಂಗ್ ವೇಳೆ ತಮಿಳು ನಟ ವಿಶಾಲ್ ಗೆ ಗಾಯ

ಚಲನಚಿತ್ರ

ಕಾಲಿವುಡ್ ನಟ ವಿಶಾಲ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರೀಕರಣದಲ್ಲಿ ಸ್ಟಂಟ್ ಮಾಡುವಾಗ ಏಟು ಮಾಡಿಕೊಂಡಿದ್ದರು. ಇದೀಗ ಶೂಟಿಂಗ್ ವೇಳೆಯಲ್ಲಿ ವಿಶಾಲ್‌ಗೆ ಗಂಭೀರ ಗಾಯವಾಗಿದೆ.ಬಹುನಿರೀಕ್ಷಿತ `ಮಾರ್ಕ್ ಆ್ಯಂಟನಿ’ ಸಿನಿಮಾ ಮತ್ತೆ ಸುದ್ದಿಯಲ್ಲಿದೆ.

 

ಈ ಚಿತ್ರದ ಶೂಟಿಂಗ್ ವೇಳೆ ಮತ್ತೆ ಅವಘಡ ಸಂಭವಿಸಿದೆ. ಫೈಟ್ ಸೀನ್ ಚಿತ್ರೀಕರಿಸುವಾಗ ನಟ ವಿಶಾಲ್‌ಗೆ ಮತ್ತೆ ಪೆಟ್ಟಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದಿಕ್ ರವಿಚಂದ್ರನ್ ನಿರ್ದೇಶನದ `ಮಾರ್ಕ್ ಆ್ಯಂಟನಿ’ ವಿಶಾಲ್ ಪೊಲೀಸ್ ಅಧಿಕಾರಿಯಾಗಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯಾಗಿ ರೀತು ವರ್ಮಾ ಸಾಥ್ ನೀಡಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟ ಸೂರ್ಯ ಕೂಡ ಕಾಣಿಸಿಕೊಳ್ತಿದ್ದಾರೆ.

Leave a Reply

Your email address will not be published.