
ನವೀನ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಎಚ್.ಕೆ.ಪಾಟೀಲ
ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟ ಹಿನ್ನೆಲೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ ನಿವಾಸಕ್ಕೆ ಇಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ನವೀನ ಗ್ಯಾನಗೌಡರ ಬಾಂಬ್ ದಾಳಿಯಲ್ಲಿ ನಮ್ಮನ್ನು ಅಗಲಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಕುಟುಂಬದವರು ಹಾಗೂ ಗ್ರಾಮಸ್ಥರು.
ಇನ್ನೇನು ನವೀನ ಆರೇಳು ತಿಂಗಳಲ್ಲಿ ಬರುತ್ತಾನೆ ಅಂತಾ ನಿರೀಕ್ಷೆ ಮಾಡಿದ್ದರು. ಜಗತ್ತಿನಲ್ಲಿ ಒಟ್ಟು ಅಧಿಕಾರ ಕೇಂದ್ರೀಕೃತ ಆಗಬೇಕು ಅನ್ನೋದಕ್ಕೆ ಯುದ್ದ ಆಗಿದೆ. ಮಹಾಯುದ್ಧ ಆಗುತ್ತದೆ ಎಂಬ ಭಯ ಕಾಡುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೆ ಉಕ್ರೇನ್ ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಕರೆತರುವ ಕೆಲಸ ಮಾಡಬೇಕು. ಯುದ್ದ ಭೂಮಿಯ ಸಮೀಪ ರಷ್ಯಾದ ಏರ್ಫೋರ್ಟ್ ಇದೆ. ಅಲ್ಲಿಂದ ಭಾರತೀ ಯರನ್ನು ಕರೆತರುವ ಕೆಲಸ ಮಾಡಬೇಕು. ನಮ್ಮ ದೇಶಕ್ಕೆ ಎಲ್ಲ ಮಕ್ಕಳು ಸುರಕ್ಷಿತವಾಗಿ ಬರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.