
ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ: ಉಕ್ರೇನ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಉಕ್ರೇನ್ ಮೇಲೆ ಆಕ್ರಮಣ ಮಾಡಲು ಚೀನಾ ತನ್ನ ಸೇನೆಯನ್ನು ಜಮಾವಣೆ ಮಾಡುತ್ತಿರುವ ಬೆನ್ನಲ್ಲೇ ಸಭೆ ನಡೆಸಿರುವ ಉಕ್ರೇನ್ ದೇಶದಲ್ಲಿ 30 ದಿನಗಳ ಕಾಲ ತುರ್ತು ಪರಿಸ್ಥಿತಿ ವಿಧಿಸಲು ನಿರ್ಧರಿಸಿದೆ. ಈ ತುರ್ತು ಪರಿಸ್ಥಿತಿ ಡೊನೆಟಸ್ಕ್ ಮತ್ತು ಲುಹಾನ್ಸ್$್ಕ ಪ್ರದೇಶಗಳನ್ನು ಹೊರತು ಪಡಿಸಿ ದೇಶಾದ್ಯಂತ ಅನ್ವಯವಾಗಲಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿರುತ್ತದೆ.
ಯುದ್ಧ ಸಂಭವಿಸಿದರೆ ಸಾಮಾನ್ಯ ನಾಗರಿಕರು ಯುದ್ಧದಲ್ಲಿ ಭಾಗವಹಿಸಲು ಉಕ್ರೇನ್ ಅನುಮತಿ ನೀಡಿದೆ. ಇದಕ್ಕಾಗಿ ನಾಗರಿಕರು ತಮ್ಮೊಂದಿಗೆ ಶಸ್ತ್ರಾಸ್ತ್ರಗಳನ್ನು ಒಯ್ಯುವಂತಹ ವಿಧೇಯಕಕ್ಕೆ ಉಕ್ರೇನ್ ಸಂಸತ್ತು ಸಹಿ ಹಾಕಿದೆ. ಮೀಸಲು ಸೈನಿಕ ಪಡೆಯ ಸೈನಿಕರಿಗೆ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದೆ.