
ನಮ್ಮ ಕೈಲಾದಷ್ಟು ಹೋರಾಡಿದ್ದೇವೆ. ಫಲಿತಾಂಶಗಳನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ
ಲಕ್ನೋ: ನಮ್ಮ ಕೈಲಾದಷ್ಟು ಹೋರಾಡಿದ್ದೇವೆ. ನಾವು ಫಲಿತಾಂಶಗಳನ್ನು ಕಾದು ನೋಡುತ್ತೇವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ʼಲಡ್ಕಿ ಹೂ, ಲಾಡ್ ಸಕ್ತಿ ಹೂʼ ಅಭಿಯಾನದ ಅಡಿಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ 159 ಮಹಿಳಾ ಅಭ್ಯರ್ಥಿಗಳೆಲ್ಲರೂ ಹೋರಾಡಿದ್ದು, ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ನಮ್ಮ ಕೈಲಾದಷ್ಟು ಹೋರಾಡಿದ್ದೇವೆ. ನಾವು ಫಲಿತಾಂಶಗಳನ್ನು ಕಾದು ನೋಡುತ್ತೇವೆ.
ಅಂತರಾಷ್ಟ್ರೀಯ ಮಹಿಳಾ ದಿನದಂದು ನಾವು ಅವರನ್ನು ಅಭಿನಂದಿಸಬೇಕಾಗಿದೆ ಎಂದಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಪಂಚ ರಾಜ್ಯಗಳಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ನಿರ್ವಹಣೆ ತೋರುವ ಭವಿಷ್ಯ ನುಡಿದಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ಪೈಪೋಟಿ ನೀಡುವ ಸಾಧ್ಯತೆಗಳಿದ್ದು, ಪಂಜಾಬ್ನಲ್ಲಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎನ್ನುವ ಸಮೀಕ್ಷೆಗಳು ಹೊರ ಬಿದ್ದಿದೆ.