Home Cinema What..! ಭಗ್ನಪ್ರೇಮಿ ರಕ್ಷಿತ್ ಕೈ ಹಿಡಿಯಬೇಕಂತೇ ಮೇಘನಾ..! ಇಬ್ಬರ ಮದುವೆ ಮಾಡಿಸಲು ಸಜ್ಜಾಗಿದ್ದೇಕೆ ಅಭಿಮಾನಿಗಳ ಬಣ..!

What..! ಭಗ್ನಪ್ರೇಮಿ ರಕ್ಷಿತ್ ಕೈ ಹಿಡಿಯಬೇಕಂತೇ ಮೇಘನಾ..! ಇಬ್ಬರ ಮದುವೆ ಮಾಡಿಸಲು ಸಜ್ಜಾಗಿದ್ದೇಕೆ ಅಭಿಮಾನಿಗಳ ಬಣ..!

603
0
SHARE

ರಕ್ಷಿತ್ ಶೆಟ್ಟಿ.. ಕಳೆದ ಮೂರು ತಿಂಗಳಿನಿಂದ ಸಿನಿಮಾಗಳಿಗಿಂತ, ವ್ಯಯಕ್ತಿಕ ಜೀವನದ ವಿಚಾರಕ್ಕೆ ಸದ್ದು ಮಾಡ್ತಿರುವ ಸುದ್ದಿಯಾಗ್ತಿರುವ ನಟ.ಮುದ್ದು ಅಂದಿದ್ದ ಮನಸನ್ನ, ಅದ್ಯಾವಾಗ ರಶ್ಮಿಕಾ ಮುದ್ದೆ ಮಾಡಿ ಒದ್ದು ಹೋದ್ರೋ ಅಂದಿನಿಂದ ಗಾಂಧಿನಗರದ ಸಿಂಪಲ್ ಸ್ಟಾರ್ ಮೇಲೆ, ಅಭಿಮಾನಿಗಳಿಗೆ ಅದೇನೋ ಒಂದು ರೀತಿಯ ಸಿಂಪತಿ. ಹಾಗಾಗೇ, ಮೂರು ತಿಂಗಳಿನಿಂದ ಶೆಟ್ಟರಿಗೊಂದು ಹುಡುಗಿ ಹುಡುಕುತ್ತಿರುವ ಭಕ್ತ ಗಣ ಇದೀಗ ಇವ್ರೇ ನಮ್ಮ ಅತ್ತಿಗೆ ಅಂಥ ಮೇಘನಾ ಗಾಂವ್ಕರ್‌ರತ್ತ ಬೊಟ್ಟು ಮಾಡುತ್ತಿದೆ.

ಯಸ್, ಮೇಘನಾ ಗಾಂವ್ಕರ್. ಚಾರ್‌ಮಿನಾರ್ ಚಿತ್ರದ ಮುದ್ಧಾದ ಚೋಖರಿ. ನೋಡಲು ಯಾವ ಹಿಂದಿ ನಟಿಗಿಂತ ಕಮ್ಮಿ ಇರದ ಮೇಘನಾನೇ, ರಕ್ಷಿತ್‌ಗೆ ಬೆಸ್ಟ್ ಜೋಡಿ ಅನ್ನುವ ಅಭಿಮತವನ್ನೀಗ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅದೊಂದು ಫೋಟೊ ಅನ್ನೋದೇ ಇಲ್ಲಿನ ಇಂಟ್ರೆಸ್ಟಿಂಗ್ ಸಂಗತಿ.ಹೌದು, ಅಸಲಿಗೆ ಇತ್ತೀಚಿಗೆ ಅವಾರ್ಡ್ ಸಮಾರಂಭವನ್ನ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಚಿತ್ರರಂಗದ ತಂತ್ರಜ್ಞರಿಗೆ ನೀಡುವ ಪ್ರಶಸ್ತಿ ಸಮಾರಂಭವದು. ಇದೇ ಸಮಾರಂಭದಲ್ಲಿ ರಕ್ಷಿತ್ ಭಾಗಿಯಾಗಿದ್ದರು.

ಮೇಘನಾ ಕೂಡಾ ಇದ್ದರು. ಇದೇ ವೇಳೆ ಮೇಘನಾ ರಕ್ಷಿತ್ ಅಕ್ಕ ಪಕ್ಕದಲ್ಲಿ ಕುಳಿತಾಗ, ಕ್ಯಾಮರಾ ಕಣ್ಣು ಇಬ್ಬರನ್ನೂ ಸೆರೆ ಹಿಡಿದಿದೆ. ನೋಡಲು ಬಲು ಸುಂದರವಾದ ಫೋಟೊ ಅದು. ಸಹಜವಾಗಿ ಮೇಘನಾ ಗಾಂವ್ಕರ್‌ಗೂ ಇಷ್ಟವಾಗಿದೆ. ಹಾಗಾಗಿ, ತಡಮಾಡದ ಮೇಘನಾ ಫೋಟೊವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಇಲ್ಲೇ ನೋಡಿ, ಅಭಿಮಾನಿಗಳಿಗೆ ಮೇಘನಾರಲ್ಲಿ ತಮ್ಮ ಅತ್ತಿಗೆ ಕಂಡಿದ್ದು.ಮೇಘನಾ, ಅದ್ಯಾವ ಶುಭ ಘಳಿಗೆಯಲ್ಲಿ ತಮ್ಮ ಇನ್ಸ್‌ಟಾಗ್ರಾಂ ಅಕೌಂಟ್‌ನಲ್ಲಿ ಫೋಟೊ ಶೇರ್ ಮಾಡಿದ್ರೋ, ಅಲ್ಲಿಂದ ಕಮೆಂಟ್‌ಗಳ ಸುರಿಮಳೆನೇ ಆಗಲು ಶುರುವಾಯ್ತು.

ಅದು, ಎಂಥ ಕಮೆಂಟ್‌ಗಳೂ ಅಂತೀರಾ. ಅಬ್ಬಬ್ಬಾ, ಒಂದಕ್ಕಿತೊಂದು ಕಮೆಂಟ್‌ಗಳೂ. ಕೆಲವರ ಪ್ರಕಾರ ಮೇಘನಾ, ರಕ್ಷಿತ್‌ಗಂತನೇ ಹೇಳಿ ಮಾಡಿಸಿದ ಹುಡುಗಿ, ಇನ್ನೂ ಕೆಲವರ ಮೇಘನಾ ರಶ್ಮಿಕಾ ಸಾವಿರ ಪಟ್ಟು ವಾಸಿ.ಬರೀ ಇದೊಂದೆ ಫೋಟೊ ಅಲ್ಲ, ಇನ್ನೊಂದೂ ಘಟನೆನೂ ಇವ್ರಿಬ್ಬರ ನಡುವೆ ಕುಚ್ ಥೋ ಹೈ ಅನ್ನುವದಕ್ಕೆ ಸಾಕ್ಷಿಯಂತಿದೆ. ಹೌದು, ನಿಮಗೆ ಗೊತ್ತಿರಲಿ ಇತ್ತೀಚಿಗೆ ಬೆಂಗಳೂರು ಟೈಮ್ಸ್ ಪ್ರಶಸ್ತಿ ಸಮಾರಂಭ ಹಮ್ಮಿಕೊಂಡಿತ್ತು.

ಇದೇ ಸಮಾರಂಭದಲ್ಲಿ ರಕ್ಷಿತ್ ಭಾಗಿಯಾಗಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಸಾಹಿತ್ಯಕ್ಕಾಗಿ ಅತ್ಯುತ್ತಮ ಸಾಹಿತಿ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದ್ರೆ ರಕ್ಷಿತ್ ಸಮಾರಂಭಕ್ಕೆ ಗೈರಾಗಿದ್ದರು. ಆಗ, ರಕ್ಷಿತ್ ಪರವಾಗಿ ಮೇಘನಾ ಪ್ರಶಸ್ತಿ ಸ್ವೀಕರಿಸಿದ್ದರು. ಹಾಗಾಗಿ, ರಕ್ಷಿತ್ ಮನಸಿನಲ್ಲಿ ಮತ್ತೊಮ್ಮೆ ಪ್ರೀತಿ ಚಿಗುರೊಡೆದಿದೆ ಅನ್ನೋದು ಅನೇಕ ಅಭಿಮಾನಿಗಳ ಸ್ಟ್ರಾಂಗ್ ಫೀಲಿಂಗ್.ರಕ್ಷಿತ್ ಹು ಅಂದ್ರೆ ಅಭಿಮಾನಿಗಳೇನೋ, ಮೇಘನಾ ಜೊತೆ ಮದುವೆ ಮಾಡಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಆದ್ರೆ ಇದು ಸಾಧ್ಯವಾ, ಹೀಗೊಂದು ಚರ್ಚೆನೂ ಇದೇ ವೇಳೆ ಆಗಬೇಕಿದೆ. ಹೌದು, ಅಸಲಿಗೆ ರಕ್ಷಿತ್ ಹಾಗೂ ಮೇಘನಾ ಇಂದು ನಿನ್ನೆ ಪರಿಚಿತಗೊಂಡಿಲ್ಲ. ಇಬ್ಬರದ್ದೂ ಬರೋಬ್ಬರಿ ಒಂಭತ್ತು ವರ್ಷಗಳ ಸ್ನೇಹ. ಹಿಂದೆ ಅನಿಶ್ ಹಾಗೂ ಮೇಘನಾ ನಮ್ ಏರಿಯಾಲ್ ಒಂದು ದಿನ ಸಿನಿಮಾ ಮಾಡಿದ್ದರಲ್ಲಾ, ಅದೇ ಸಿನಿಮಾದಲ್ಲಿ ರಕ್ಷಿತ್ ಕೂಡಾ ಇದ್ದರು. ನಂತ್ರ ತುಘ್ಲಕ್ ಸಿನಿಮಾದಲ್ಲೂ ಮೇಘನಾ ರಕ್ಷಿತ್‌ಗೆ ಆನ್ ಸ್ಕ್ರೀನ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಅಂದಿನಿಂದ ಇಂದಿನವರೆಗೂ ಇಬ್ಬರ ನಡುವಿನ ಸ್ನೇಹ ಹಾಗೇ ಮುಂದುವರೆದುಕೊಂಡು ಬಂದಿದೆ. ಸಿಂಪಲ್ಲಾಗ್ ಹೇಳಬೇಕಂದ್ರೆ ಸಿಂಪಲ್ ಸ್ಟಾರ್ ಮನೆಯ ಯಾವ್ದೇ ಸಮಾರಂಭವಿರಲಿ, ಕಾರ್ಯಕ್ರಮವಿರಲಿ ಅಲ್ಲಿ ಸಿಂಪಲ್ ಹುಡುಗಿ ಮೇಘನಾ ಇದ್ದೇ ಇರ‍್ತಾರೆ. ಒಂಧರ್ಥದಲ್ಲಿ ಮೇಘನಾ ರಕ್ಷಿತ್ ಮನೆಯ ಸದಸ್ಯೆ ಇದ್ದಂತೆ.

ಇದೇ ಕಾರಣಕ್ಕೆ ರಕ್ಷಿತ್ ಹಾಗೂ ಮೇಘನಾ ಜಸ್ಟ್ ಗುಡ್ ಫ್ರೆಂಡ್ಸ್ ಅನ್ನೋದು ಕೂಡಾ ಇದೇ ಗಾಂಧಿನಗರದಲ್ಲಿ ಕೇಳಿ ಬರುವ ಮಾತು.ಇನ್ನೂ ಇದೇ ವೇಳೆ, ಇನ್ನೊಂದು ಸುದ್ದಿನೂ ರೆಕ್ಕೆ ಪುಕ್ಕ ಕಟ್ಟಿಕೊಂಡಿದೆ. ಹೌದು, ಮೇಘನಾಗೆ ಆಲ್ ರೆಡಿ ಬಾಯ್‌ಫ್ರೆಂಡ್ ಇದ್ದಾರೆ. ಹಾಗಾಗಿ, ರಕ್ಷಿತ್ ಹಾಗೂ ಮೇಘನಾ ಒಂದಾಗ್ತಾರೆ, ಮದುವೆಯಾಗ್ತಾರೆ ಅನ್ನುವ ಕಲ್ಪನೆಗಳೇ ಬೇಡ ಅನ್ನೋದು ಇವ್ರಿಬ್ಬರನ್ನ ಹತ್ತಿರದಿಂದ ಬಲ್ಲವರ ಮಾತು.

LEAVE A REPLY

Please enter your comment!
Please enter your name here