Home Cinema What..! ಮದುವೆಗೂ ಮುನ್ನ ಪ್ರಗ್ನೆಂಟ್ ಆದ್ಳಾ ವಿಲನ್ ಸುಂದರಿ ಆಮಿ ಜಾಕ್ಸನ್….!

What..! ಮದುವೆಗೂ ಮುನ್ನ ಪ್ರಗ್ನೆಂಟ್ ಆದ್ಳಾ ವಿಲನ್ ಸುಂದರಿ ಆಮಿ ಜಾಕ್ಸನ್….!

530
0
SHARE

ಆಮಿ ಜಾಕ್ಸನ್.. ಬ್ರಿಟನ್ ಬೆಡಗಿ. ಅಭಿನಯದ ಗ್ರಾಮರ್‌ಗಿಂತ ತನ್ನ ಗ್ಲ್ಯಾಮರ್‌ನಿಂದನೇ ಬಣ್ಣದ ಬದುಕಿನಲ್ಲಿ ಮಿಂಚಿದ ಆಮಿ, ಇದೀಗ..ಗರ್ಭಿಣಿ.ಹೌದು, ಆಮಿ ಜಾಕ್ಸನ್ ಪ್ರಗ್ನೆಂಟ್ ಆಗಿದ್ದಾರೆ.

ಅರೇ.. ಪ್ರಗ್ನೆಂಟ್ ಆಗಲು ಆಮಿ ಮದುವೆಯಾವಾಗ ಆಯ್ತು ಅಂಥ ನೀವ್ ಕೇಳುವಂಗಿಲ್ಲ. ಕಾರಣ, ಆಮಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾಳೆ. ಯಸ್, ಆಮಿ ಹಾಗೂ ಬ್ರಿಟನ್ ಉದ್ಯಮಿ ಜಾರ್ಜ್ ಪ್ರೀತಿ ಉತ್ಸವ ೨೦೧೫ರಿಂದ ನಡಿತಿತ್ತು. ಇದೇ ಉತ್ಸವಕ್ಕೆ ಇನ್ನಷ್ಟು ಮೆರಗು ಬಂದಿದ್ದು ಕಳೆದ ಜನವರಿಯಲ್ಲಿ ಇಬ್ಬರ ನಿಶ್ಚಿತಾರ್ಥ ನೇರವೇರಿದಾಗ.

ಇನ್ನೂ ನಿಶ್ಚಿತಾರ್ಥದ ಬಳಿಕ ಆಮಿ ಅಭಿಮಾನಿಗಳಿಂದ ಹಿಡ್ದು, ಚಿತ್ರಜಗತ್ತಿನಲ್ಲೊಂದು ಕೂತುಹಲವಿತ್ತು. ಇಬ್ಬರ ಮದುವೆಯಾವಾಗ ಅನ್ನುವ ಪ್ರಶ್ನೆ ಇತ್ತು. ಇದೇ ಪ್ರಶ್ನೆ ಹಾಗೂ ಕೂತುಹಲಕ್ಕೆ ತಕ್ಕಂತೆ ಇದೀಗ ಆಮಿ ಐ ಮ್ ಪ್ರಗ್ನೆಂಟ್ ಅನ್ನುವ ಸುದ್ದಿಯನ್ನ ಕೊಟ್ಟಿದ್ದಾಳೆ.

ತನ್ನ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಪ್ರಿಯಕರ ಜಾರ್ಜ್ ಜೊತೆಗಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ನಿನ್ನ ನೋಡಲು ಇಬ್ಬರು ಕಾತುರದಿಂದ ಕಾಯ್ತಿದ್ದೀವಿ ಅಂದಿದ್ದಾಳೆ.ಇದೆಲ್ಲದ್ರ ನಡುವೆ.. ಮಗು ಹಡೆದ ಮೇಲಾದ್ರೂ ದಿ ವಿಲನ್ ಸುಂದರಿ ಆಮಿ ಜಾಕ್ಸನ್ ಮದುವೆಯಾಗ್ತಾಳಾ ಅನ್ನುವ ಚರ್ಚೆ ಇದೀಗ ನಡೆಯುತ್ತಿದೆ.

LEAVE A REPLY

Please enter your comment!
Please enter your name here