Home Cinema What..??? “ರಶ್ಮಿಕಾ ನನ್ನ ಕೂಸು”, ಅಂದ್ರಾ ವಿಜಯ್ ದೇವರಕೊಂಡ..! ಅಯ್ಯಯ್ಯೋ…ಅರ್ಜುನ್ ರೆಡ್ಡಿನೇ ಆಗ್ತಾರಾ ರಶ್ಮಿಕಾ ಮಂದಣ್ಣ...

What..??? “ರಶ್ಮಿಕಾ ನನ್ನ ಕೂಸು”, ಅಂದ್ರಾ ವಿಜಯ್ ದೇವರಕೊಂಡ..! ಅಯ್ಯಯ್ಯೋ…ಅರ್ಜುನ್ ರೆಡ್ಡಿನೇ ಆಗ್ತಾರಾ ರಶ್ಮಿಕಾ ಮಂದಣ್ಣ ಗಂಡ..!

498
0
SHARE

ರಶ್ಮಿಕಾ ಮಂದಣ್ಣ.. ಅಖಿಲ ಕರ್ನಾಟಕದ ಕ್ರಶ್. ಸಾನ್ವಿಯಾಗಿ.. ಕನ್ನಡಿಗರ ಮನೆ ಹಾಗೂ ಮನಸುಗಳಿಗೆ ಲಗ್ಗೆ ಇಟ್ಟಿದ್ದ ರಶ್ಮಿಕಾ ಅದ್ಯಾವಾಗ ರಕ್ಷಿತ್ ಶೆಟ್ಟಿನಿಂದ ದೂರವಾದ್ರೋ, ಆಗಿನಿಂದನೇ ಒಂದು ಕೂಗು ಮನವಿಯ ರೂಪದಲ್ಲಿ ಕೇಳಿ ಬರ‍್ತಾನೇ ಇದೆ. ಅದುವೇ ವಿಜಯ್ ದೇವರಕೊಂಡ ನೀನೇ ಆಗ್ಬೇಕು ರಶ್ಮಿಕಾ ಮಂದಣ್ಣ ಗಂಡ ಅನ್ನೋದು.ಯಸ್, ಅದ್ಯಾವಾಗ ಗೀತ ಗೋವಿಂದಂ ಬಂತು ನೋಡಿ, ಅಲ್ಲಿಂದನೇ.. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಿಜಜೀವನದಲ್ಲೂ ಸತಿಪತಿಗಳಾದ್ರೇ ಎಷ್ಟು ಸೊಗಸಾಗಿರುತ್ತೆ ಅನ್ನುವ ಅಭಿಪ್ರಾಯ ಕೇಳಿ ಬಂದಿತ್ತು.

ಇದಕ್ಕೆ ತಕ್ಕಂತೆ ಇಬ್ಬರ ನಡುವೆ ಕುಚ್ ಥೋ ಹೈ ಅನ್ನುವ ಮಾತುಗಳೂ ಕೇಳಿ ಬಂದಿತ್ತು. ಬಟ್, ಕೇಳಿ ಬಂದ ಅಂತೆ ಕಂತೆಗಳಿಗೆಲ್ಲಾ ಬ್ರೇಕ್ ಹಾಕಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ, ವಿ ಆರ್ ಗುಡ್ ಫ್ರೆಂಡ್ಸ್ ಅನ್ನುವ ಮಾತಿನೊಂದಿಗೆ ಸ್ಮೈಲ್ ಮಾಡಿದ್ದರು.ನಾವ್ ಸ್ನೇಹಿತರು ಅಂಥ ರಶ್ಮಿಕಾ & ವಿಜಯ್ ದೇವರಕೊಂಡ ಹೇಳಿದ್ರೂ, ಅದ್ಯಾಕೋ.. ಅಭಿಮಾನಿಗಳು ಮಾತನ್ನ ಒಪ್ಪಿಕೊಳ್ಳಲು ತಯಾರಿಲ್ಲ. ಬಹುಶ, ಇದೇ ಕಾರಣಕ್ಕೋ ಏನೋ.. ಇದೀಗ, ಮತ್ತೊಮ್ಮೆ.. ವಿಜಯ್ ದೇವರಕೊಂಡ, ರಶ್ಮಿಕಾಳ ಗಂಡ ಆಗಬೇಕು ಅನ್ನುವ ಅಭಿಯಾನವನ್ನ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮಾಡ್ತಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ ರಶ್ಮಿಕಾ ಮಂದಣ್ಣ ಸೌಥ್ ಸಿನಿದುನಿಯಾದ ಸೆನ್ಸೇಶನಲ್ ಸುಂದರಿ. ಇದೇ ಮಾತನ್ನ.. ಒಪ್ಪಿರುವ ಗೂಗಲ್, ಮೊನ್ನೆಯಷ್ಟೇ ಒಂದು ವಿಚಾರ ಬಹಿರಂಗಪಡಿಸಿತ್ತು. ದಕ್ಷಿಣ ಭಾರತದ ಮೋಸ್ಟ್ ಸರ್ಚಡ್ ನಾಯಕಿಯಲ್ಲಿ ರಶ್ಮಿಕಾ ನಾಲ್ಕನೇ ಸ್ಥಾನದಲ್ಲಿರುವ ಸಂಗತಿ ಹೇಳಿತ್ತು. ಇದು, ಸಹಜವಾಗಿ ಸಾನ್ವಿ ಸೆಳೆತದಿಂದ ನರಳಾಡ್ತಿರುವ ಅಭಿಮಾನಿಗಳ ಸಂತಸಕ್ಕೂ ಕಾರಣವಾಗಿತ್ತು. ನಮ್ಮ ಚಸ್ಮಾ ಚೋಖರಿ ಮುಂದೆ ತಮನ್ನಾ, ಸಮಂತಾ, ನಯನತಾರಾನೂ ಡಮ್ಮಿನೇ ಅನ್ನುವ ಅಭಿಮಾನದ ಮಾತುಗಳಿಗೂ ಕಾರಣವಾಗಿತ್ತು. ಇನ್ನು ಎಲ್ಲರಂತೆ, ಗೂಗಲ್‌ನಲ್ಲಿ ರಶ್ಮಿಕಾ ಗೂಗ್ಲಿಗೆ ವಿಜಯ್ ದೇವರಕೊಂಡನೂ ಕ್ಲೀನ್ ಬೋಲ್ಡ್ ಆಗಿದ್ದರು.

ಹಾಗಾಗೇ, ವಿಜಯ್ ದೇವರಕೊಂಡ, ನನಗೆ ಪಾರ್ಟಿ ಬೇಕು ಅಂಥ ರಶ್ಮಿಕಾರಲ್ಲಿ ಕೇಳಿದ್ದರು. ಅಷ್ಟೇ ಅಲ್ಲ.. ಚೈಲ್ಡ್ ಅಂಥಾನೂ ಕಾಲ್ ಎಳೆದಿದ್ದರು.ಇನ್ನೂ ಅದ್ಯಾವಾಗ ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಚೈಲ್ಡ್ ಅಂದ್ರೋ, ಆಗ.. ರಶ್ಮಿಕಾ ಕೂಡಾ ವಿಜಯ್ ದೇವರಕೊಂಡಗೆ ಉತ್ತರ ಕೊಟ್ಟರು. ನೀವೆನ್ ಕಮ್ಮಿನಾ.. ನಿಮ್ಮನ್ನೂ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಿದ್ದಾರೆ ಜನ.. ಅನ್ನುವ ಮಾತುಗಳನ್ನ ಆಡಿದ್ದರು. ಅಷ್ಟೇ ಅಲ್ಲ.. ನನ್ನನ್ನ ಚೈಲ್ಡ್ ಅಂಥ ಕರಿಬೇಡಿ.. ನೀವ್ ಪಾರ್ಟಿ ಕೋಡೋದು ಮಾತ್ರ ಮರಿಬೇಡಿ ಅಂಥಾನೂ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ದೇವರಕೊಂಡಗೆ ಉತ್ತರ ಕೊಟ್ಟಿದ್ದರು.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವಿನ ಇದೇ ಸಿಹಿಯಾದ ಹಿತವಾದ ಸಂಭಾಷಣೆ ಇದೀಗ, ಅಭಿಮಾನಿಗಳ ಆಸೆಯನ್ನ ಇಮ್ಮಡಿಗೊಳಿಸಿದೆ. ಇದಕ್ಕೆ ಕೈಗನ್ನಡಿ ಅನ್ನುವಂತೆ ಇಬ್ಬರ ಸಂಭಾಶಣೆಯ ಕಮೆಂಟ್ ಸೆಕ್ಷನ್‌ಗಳಲ್ಲಿ ಇಬ್ಬರು ಮದುವೆಯಾಕಾಗಬಾರದು ಅನ್ನುವ ಅಭಿಪ್ರಾಯಗಳೂ ವ್ಯಕ್ತವಾಗ್ತಿವೆ. ಕಾರಣ ಪ್ರತಿಬಾರಿಯೂ ಇಬ್ಬರ ನಡುವಿನ ಸಂಭಾಶಣೆಗಳೂ ಅಷ್ಟು ಮುದ್ದಾಗಿರುತ್ವೆ. ಇಬ್ಬರ ಜೋಡಿನೂ ಹೇಳಿ ಮಾಡಿಸಿದಂತಿದೆ ಅನ್ನೋದು.

ಅಂದ ಹಾಗೇ ಗೀತ ಗೋವಿಂದಂನಲ್ಲಿ ಒಟ್ಟಿಗೆ ಕಾಣಿಸಿಕೊಂಡು.. ಸಿನಿಪ್ರಿಯರ ಮನಸು ಹಾಗೂ ಗಲ್ಲಾಪೆಟ್ಟಿಗೆ ಎರಡನ್ನೂ ಕೊಳ್ಳೆ ಹೊಡೆದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ, ಸದ್ಯ ಡಿಯರ್ ಕಾಮ್ರೇಡ್ ಸಿನಿಮಾದ ಮೂಲಕ, ಮತ್ತೆ ಮೋಡಿ ಮಾಡಲು ಸಿದ್ಧವಾಗಿದ್ದಾರೆ.ಅದೇನೆ ಇರ‍್ಲಿ, ಸದ್ಯ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೊಮ್ಮೆ ಮೋಡಿ ಮಾಡಲು ಸಿದ್ಧವಾಗಿದ್ದಾರೆ.

ಇದ್ರ ಬೆನ್ನಲ್ಲೇ.. ರಶ್ಮಿಕಾ ಹಾಗೂ ವಿಜಯ್ ಒಂದಾಗಲಿ, ಮದುವೆಯಾಗಲಿ ಅನ್ನುವ ಕೂಗು ಮತ್ತೊಮ್ಮೆ ಎದ್ದಿದೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳ ಅಭಿಪ್ರಾಯದಂತೆ ಇಬ್ಬರು ಮದುವೆಯಾದ್ರೇ ಅಚ್ಚರಿ ಪಡುವಂಗಿಲ್ಲ. ಕಾರಣ, ಅಭಿಮಾನಿಗಳ ಅಭಿಮಾನ.. ಎಂಥೆಂಥವರ ಹೃದಯದಲ್ಲೂ ಪ್ರೀತಿ ಉಕ್ಕುವಂತೆ ಮಾಡಿ ಬಿಡುತ್ತೆ. ಮದುವೆಯಾಗುವಂತೆನೂ ಮಾಡಿ ಬಿಡುತ್ತೆ ಅನ್ನುವದಕ್ಕೆ ಉದಾಹರಣೆಗಳೂ ಇಲ್ಲಿ ತುಂಬಾನೇ ಇವೆ.

LEAVE A REPLY

Please enter your comment!
Please enter your name here