Home Cinema ‘ಸಪ್ತಪದಿ’ ತುಳಿಯಲು ‘ರಾಧಿಕಾ ಕುಮಾರಸ್ವಾಮೀ’ ಮತ್ತೆ ಸಿದ್ಧರಾದ್ರಾ..?

‘ಸಪ್ತಪದಿ’ ತುಳಿಯಲು ‘ರಾಧಿಕಾ ಕುಮಾರಸ್ವಾಮೀ’ ಮತ್ತೆ ಸಿದ್ಧರಾದ್ರಾ..?

7695
0
SHARE

ರಾಧಿಕಾ ಕುಮಾರ್ ಸ್ವಾಮೀ… ಗಾಂಧಿನಗರದ ಸ್ವೀಟಿ. ತನ್ನ ಅಂದ, ಚೆಂದ ಮತ್ತು ಅಭಿನಯದಿಂದಲ್ಲೇ, ಅಭಿಮಾನಿಗಳ ಮನಗೆದ್ದ ಚೆಲುವೆ. ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮೂಲಕ ಬೇಜಾನ್ ಸುದ್ದಿ ಮಾಡ್ತಿದ್ದಾರೆ. ಬೈರಾದೇವಿ & ದಮಯಂತಿ ಚಿತ್ರದ ಮೂಲಕ ಕಮಾಲ್ ಮಾಡೋದಕ್ಕೆ ಸಜ್ಜಾಗಿರುವ ರಾಧಿಕಾ, ಸದ್ಯ ಕಾಂಟ್ರ್ಯಾಕ್ಟ್ ಮುಗಿಸಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ..

ಯಸ್.. ಸ್ವೀಟಿ ಮತ್ತೆ ಸಪ್ತಪದಿ ತುಳಿಯೋದಕ್ಕೆ ಸಜ್ಜಾದ್ರಾ ಅಂತ ಶಾಕ್ ಆಗ್ಬೇಡಿ. ಈ ಬಾರಿ ರಾಧಿಕಾ ಸಪ್ತಪದಿ ತುಳಿಯುತ್ತಿರೋದು ರಿಯಲ್ಲಾಗಲ್ಲ, ರೀಲ್‌ನಲ್ಲಿ ಅನ್ನೊದು ನೆನಪಿರಲಿ. ಅದು ಕಾಂಟ್ರ್ಯಾಕ್ಟ್ ಸಿನಿಮಾದಲ್ಲಿ ನಡೆಯುತ್ತಿರುವ ಮದುವೆಯಲ್ಲಿ ರಾಧಿಕಾ ಮಸ್ತಾಗಿ ಮಿಂಚಿದ್ದಾರೆ. ಕೈಗೆ ರಂಗು ಹಾಕಿಕೊಂಡು ರಂಗು ರಂಗಾದ ದೃಶ್ಯದ ಮೂಲಕ ಚಿತ್ರವನ್ನು ಇನ್ನಷ್ಟು ರಂಗೇರಿಸಿದ್ದಾರೆ.
ಕಾಂಟ್ರ್ಯಾಕ್ಟ್ ಹಲವು ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಬಹುಭಾಷಾ ಸಿನಿಮಾ. ಇದೀಗ ಬಿಡುಗಡೆಗೆ ಸಜ್ಜಾಗಿದ್ದು.

ಚಿತ್ರತಂಡ ಟೀಸರ್ ಮತ್ತು ಕೆಲವೊಂದಿಷ್ಟು ಸ್ಟಿಲ್ಸ್‌ಗಳನ್ನು ರಿಲೀಸ್ ಮಾಡಿದೆ. ಆ ಸ್ಟಿಲ್ಸ್‌ಗಳಲ್ಲಿ ರಾಧಿಕಾ ಅರ್ಜುನ್ ಸರ್ಜಾರೊಟ್ಟಿಗೆ ಮದುವೆ ಸೀನ್‌ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರು ಉದ್ಯಮಿಗಳ ನಡುವೆ ಜಗಳಕ್ಕೂ ಕಾರಣರಾಗಿದ್ದಾರೆ. ಕಾಂಟ್ರ್ಯಾಕ್ಟ್ ಬೆಸಿಕಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಹಿಂದೆಂದೂ ಕಾಣದ ಅವತಾರದಲ್ಲಿ ನಿಮಗೆ ಇಲ್ಲಿ ಕಾಣಸಿಗುವ ರಾಧಿಕಾ, ಈ ಬಾರಿ.. ಅಭಿಮಾನಿಗಳ ಮನಸನ್ನ ಕೊಳ್ಳೆ ಹೊಡೆಯುವ ಪಣ ತೊಟ್ಟಿದ್ದಾರೆ. ಹಾಗಾಗೇ, ಮತ್ತಷ್ಟು ಗ್ಲ್ಯಾಮರಸ್ ಆಗಿ, ಮತ್ತೊಂದಷ್ಟು ಹುರುಪಿನೊಂದಿಗೆ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ ರಾಧಿಕಾ ಪಿಂಕ್ ಕಲ್ಲರ್ ಲಾಂಗ್ ಗೌನ್‌ನಲ್ಲಿ ಮಂದಹಾಸ ಬೀರುತ್ತಾ ಮೋಡಿಮಾಡುವಂತೆ ನಟಿಸಿದ್ದಾರೆ.

ಈಗಾಗಲ್ಲೇ ಚಿತ್ರದ ಕೆಲವು ತುಣುಕುಗಳು ರಿಲೀಸ್ ಆಗಿದ್ದು ಕೋಸ್ಟಾರ್‌ಗಳ ಜೊತೆಗೆ ರಾಧಿಕಾ ಬಿಂದಾಸ್ ಸ್ಟೆಪ್ ಹಾಕಿದ್ದಾರೆ. ಸಮೀರ್ ಚಿತ್ರದ ನಿರ್ದೇಶಕ. ಕಾಂಟ್ರ್ಯಾಕ್ಟ್‌ನಲ್ಲಿ ಅರ್ಜುನ್ ಸರ್ಜಾ ಆಕ್ಷನ್ ಹಂಗಾಮ ಇದೆ. ಸದ್ಯ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಆಕ್ಷನ್ ಸನ್ನಿವೇಶಗಳನ್ನೇ ನಿರ್ದೇಶಕರು ಹೈಲೈಟ್ ಮಾಡಿದ್ದಾರೆ. ಸಂಜಯ್ ಜೊತೆ ಫೈಟ್ ಮಾಡೋಕೆ, ಎದುರಾಳಿ ಸಹ ಸಂಜಯ್ ಆಗಿರಬೇಕು. ಆದರೆ ಯಾರೂ ಸಂಜಯ್ ಆಗೋಕೆ ಸಾಧ್ಯವಿಲ್ಲ. ಎಂಬ ಸಂಭಾಷಣೆ ಮೂಲಕ ಆಕ್ಷನ್ ಕಿಂಗ್ ಅಬ್ಬರ ಜೋರಾಗಿದ್ದು.

ಕಾಂಟ್ರ್ಯಾಕ್ಟ್‌ನಲ್ಲಿ ಹೆಚ್ಚು ಕನೆಕ್ಟ್ ಆಗಿರಲಿದೆ ಎಂಬ ಇನ್‌ವೀಟೇಷನ್ ಕೊಟ್ಟಂತಿದೆ ಚಿತ್ರದ ಪುಟ್ಟ ಟೀಸರ್. ಅರ್ಜುನ್ ಸರ್ಜಾ ಚಿತ್ರದ ನಾಯಕ. ರಾಧಿಕಾ ಮತ್ತು ಅರ್ಜುನ್ ಕಾಂಬಿನೇಶನ್ ಮೊದಲ ಸಿನಿಮಾ ಇದು ಅನ್ನೋದು ವಿಶೇಷ. ಇನ್ನು ನಿರ್ದೇಶಕ ಜೆ,ಡಿ.ಚಕ್ರವರ್ತಿ ಕೂಡಾ ಚಿತ್ರದ ಮತ್ತೊಬ್ಬ ನಾಯಕನಾಗಿ ನಟಿಸಿದ್ದಾರೆ. ಅಸಲಿ ಕಥೆಯ ಗುಟ್ಟನ್ನು ಟೀಸರ್‌ನಲ್ಲಿ ಚೂರು ಬಿಟ್ಟುಕೊಡದ ಸಮೀರ್, ಇಬ್ಬರು ಉದ್ಯಮಿಗಳ ಜಟಾಪಟಿಯ ವಿಷಯವನ್ನು ಟೀಸರ್‌ನಲ್ಲಿ ಅನಾವರಣ ಮಾಡಿದ್ದಾರೆ. ಯಾವುದೇ ಕಾಂಪ್ರಮೈಸ್‌ಗಳನ್ನು ಮಾಡಿಕೊಳ್ಳದೆ ಚಿತ್ರ ರಿಚ್ಚಾಗಿ ತೆರೆಮೇಲೆ ತಂದಿದ್ದಾರೆ. ಉದ್ಯಮವೊಂದರ ಮಾಲೀಕನ ಪಾತ್ರದಲ್ಲಿ ಸಂಜಯ್ ಆಗಿ ಅರ್ಜುನ್ ಸರ್ಜಾಮಿಂಚಿದ್ದು. ಅಸಲಿ ಖದರ್ ತೋರಿಸಿದ್ದಾರೆ.

ಸಲ್ಮಾನ್ ಸಹೋದರ ಫೈಸಲ್‌ಖಾನ್ ಚಿತ್ರದ ಮತ್ತೊಂದು ಸ್ಟಾರ್ ಅಟ್ರ್ಯಾಕ್ಷನ್. ಮಹಾರಾಷ್ಟ್ರ, ಚೆನೈ, ಕೊಲ್ಲಾಪುರ್, ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಇನ್ನು ಅಮೀರ್ ಲಾಲ್ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ನಿರ್ದೇಶನ, ಪ್ರಭು ಅವರ ಸಂಕಲನ ಹಾಗೂ ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ ಮಾಡಿದ್ದು, ರಘು ಕುಲಕರ್ಣಿ ಕಲಾ ನಿರ್ದೇಶನ ಚಿತ್ರಕ್ಕಿದೆ. ಇನ್ನುಳಿದಂತೆ ಜೆ.ಡಿ ಚಕ್ರವರ್ತಿ, ಕೆ. ವಿಶ್ವನಾಥ್, ಸೋನಿ ಚರಿಸ್ಟಾ, ಇತಿ ಆಚಾರ್ಯ, ಶಿಪ್ರಾ ಮೂರ್ತಿ, ದುಬೈ ರಫೀಕ್ ಚಿತ್ರದ ದೊಡ್ಡ ತಾರಾಬಳಗದಲ್ಲಿ ನಟಿಸಿದ್ದಾರೆ.

ಸದ್ಯ, ಪೋಸ್ಟ್ ಪ್ರೋಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಅಂಗಳಕ್ಕೆ ತಲುಪಿರುವ ಕಾಂಟ್ರಾಕ್ಟ್ ಏಪ್ರಿಲ್‌ನಲ್ಲಿ ತೆರೆಗೆ ಬರೋದಕ್ಕೆ ಸಜ್ಜಾಗಿದ್ದು. ಕನ್ನಡ, ತೆಲುಗು, ತಮಿಳಿನಲ್ಲಿಯೂ ಸಿನಿಮಾ ಒಟ್ಟಾಗಿ ತೆರೆಗೆ ಬರಲಿದೆ. ಅದೇನೇ ಇದ್ರು.. ಸದ್ಯ ಲೋಕಸಭಾ ಚುನಾವಣಾ ಕಣ ಏಪ್ರಿಲ್‌ನಲ್ಲಿ ಇನ್ನಷ್ಟು ರಂಗೇರಲಿದ್ದು. ಕಂಟ್ರ್ಯಾಕ್ಟ್ ಮೂಲಕ ಮತ್ತೆ ಚಂದನವನಕ್ಕೆ ರೀ ಎಂಟ್ರಿಕೊಟ್ಟಿರುವ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಮನಕ್ಕೆ ಮತ್ತೆ ಯಾವರೀತಿ ಕನೆಕ್ಟ್ ಆಗ್ತಾರೆ, ಎಂಬ ತೀವ್ರ ಕುತೂಹಲ ಇದೀಗ ಗಾಂಧಿನಗರದವ್ರನ್ನ ಕಾಡ್ತಿದೆ.

LEAVE A REPLY

Please enter your comment!
Please enter your name here