Home Cinema What.! ಸುದೀಪ.ಶಿವಣ್ಣ.. ಕಾಲಿಡ್ತಾರಾ ಮಂಡ್ಯ ರಣರಂಗಕ್ಕೆ..! ಗಾಂಧಿನಗರವಾಯ್ತಾ ಇಬ್ಬಾಗ ಸುಮಕ್ಕ-ನಿಖಿಲ್ ಯುದ್ಧಕ್ಕೆ..?

What.! ಸುದೀಪ.ಶಿವಣ್ಣ.. ಕಾಲಿಡ್ತಾರಾ ಮಂಡ್ಯ ರಣರಂಗಕ್ಕೆ..! ಗಾಂಧಿನಗರವಾಯ್ತಾ ಇಬ್ಬಾಗ ಸುಮಕ್ಕ-ನಿಖಿಲ್ ಯುದ್ಧಕ್ಕೆ..?

1621
0
SHARE

ಯಸ್ .ಪಾಲಿಟಿಕ್ಸ್ ಎನ್ನುವುದು ಎಲ್ಲ ಆಟಗಳಿಗಿಂತ ವೆರಿವೆರಿ ಡೇಂಜರಸ್. ಈ ಆಟದಲ್ಲಿ ಸೋಲು ಗೆಲುವಿನ ಲೆಕ್ಕಚಾರಗಳನ್ನ ಫಿಕ್ಸ್ ಮಾಡೋದು ನಾವು ಅಂದುಕೊಂಡಷ್ಟು ಸುಲಭವಲ್ಲ ಬಿಡಿ. ಅದರಲ್ಲೂ ಈಗ ಮುಂಬರುವ ಲೋಕಸಭಾ ಚುನಾವಣೆಯ ಬಿಸಿ ಈಗಿನಿಂದಲೇ ಸಿಕ್ಕಾಪಟ್ಟೆ ಕಾವೇರಿದೆ.

ರಾಜಕೀಯ ಹಾಗೂ ಸಿನಿಮಾ ಅಣ್ಣತಮ್ಮಂದಿರಂತೆ ಒಂದಾಗೋ ಸುಸಮಯವಿದು. ಸೆಲೆಬ್ರೆಟಿಗಳಿಗೆ ಇನ್ನಿಲ್ಲದ ಭಾರೀ ಡಿಮ್ಯಾಂಡ್ ಕೂಡ ಶುರುವಾಗುತ್ತೆ. ಈಗ ಕರ್ನಾಟಕದ ಪ್ರತಿಷ್ಟೆಯ ಅಖಾಡ ಅಂತಾನೇ ಕರೆಸಿಕೊಳ್ಳೊ ಮಂಡ್ಯದಲ್ಲಿ ನಡಿತಿರೋ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ಸ್ವರೂಪ ಪಡೆದುಕೊಳ್ತಿದೆ. ’ಲೆಟ್ ದಿ ಗೇಮ್ ಬಿಗಿನ್’ ಎನ್ನುವ ಹೊಸ ಪೊಲಿಟಿಕಲ್ ಮಂತ್ರ ನಮ್ಮ ಕಿವಿಗಳಿಗೆ ಕೇಳಿಸ್ತಿದೆ.ಮಂಡ್ಯದಲ್ಲಿ ಅಂಬಿ ಪತ್ನಿ ಸುಮಲತಾ ಯಾವಾಗ ಮೈತ್ರಿ ಸರ್ಕಾರದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಸುದ್ಧಿಬಂತೋ ಮಂಡ್ಯ ರಾಜಕೀಯವಲಯದಲ್ಲಿ ಬಿರುಗಾಳಿಯೆದ್ದು ಬಿಡ್ತು.

ಯಾಕಂದ್ರೆ ರೆಬಲ್‌ಸ್ಟಾರ್ ಅಂಬರೀಷ್ ಬದುಕಿದ್ದಾಗ ಮಂಡ್ಯದಲ್ಲಿ ಗಳಿಸಿರೋ ಪ್ರೀತಿ, ಅಭಿಮಾನ ಹಾಗೂ ವರ್ಚಸ್ಸು ಅಷ್ಟಿಷ್ಟಲ್ಲ. ಅಂಬಿ ಮೇಲಿನ ವಿಶ್ವಾಸ ಸುಮಲತಾರ ರಾಜಕೀಯ ಪ್ರವೇಶಕ್ಕೆ ಪ್ಲಸ್‌ಪಾಯಿಂಟ್ ಆಗುವ ಸಹಜಸತ್ಯ ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೆ ನಿರಾಸೆ ಉಂಟಾಗಿದ್ದು ನಿಜ. ಆದರೆ ಇಷ್ಟಕ್ಕೆ ಕುಗ್ಗದ ಅಂಬಿ ಅಭಿಮಾನಿಗಳು ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬ ದಿಟ್ಟಧೋರಣೆಯ ಜೊತೆ ಸುಮಲತಾರ ರಾಜಕೀಯ ಎಂಟ್ರಿಗೆ ಪರಿಪೂರ್ಣ ಬೆಂಬಲ ಕೊಟ್ಟಿದಾರೆ.ಆದರೆ ಈ ಪಾಲಿಟಿಕ್ಸ್ ಪುರಾಣದಲ್ಲಿ ಹೊಸ ಟ್ವೀಸ್ಟ್ ಇದೆ. ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಎಚ್.ಡಿ.ಕೆ ಸುಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಗ್ರೀನ್ ಸಿಗ್ನಲ್ ದಕ್ಕಿದೆ.

ಸೋ, ಮಂಡ್ಯ ಕ್ಷೇತ್ರದ ಈ ರೋಚಕ ಹಣಾಹಣಿಗೆ ಎರಡೂ ಕಡೆಯಿಂದ ವೇದಿಕೆ ಸೃಷ್ಟಿಯಾಗಿದೆ. ಇಬ್ಬರೂ ಸಿನಿಮಾಲೋಕದ ಮೈನ್ ಅಟ್ರಾಕ್ಷನ್‌ಗಳಾಗಿರೋದ್ರಿಂದ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳಿಗೆ ಹೊಸತಲೆ ನೋವಾಗಿಬಿಟ್ಟಿದೆ. ಯಾರಿಗೆ ನಮ್ಮ ಸರ್ಪೊಟ್ ಎಂಬ ಸೀರಿಯಸ್ ನಿರ್ಧಾರ ತೆಗೆದುಕೊಳ್ಳಲು ಸ್ಟಾರ್‌ಗಳು ಪೇಚಿಗೆ ಸಿಲುಕಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆಯಂದ್ರೆ ಕನ್ನಡದ ಟಾಪ್ ನಟರು ಕೊಡ್ತಿರೋ ಗೊಂದಲಮಯ ಹೇಳಿಕೆಗಳು. ಇಬ್ಬರಲ್ಲಿ ನಾವು ಯಾರ ಪರ ನಿಲ್ಲಬೇಕು ಎನ್ನುವ ಕನ್ಫ್ಯೂಶನ್ ಎಲ್ಲರ ತಲೆಗಳಲ್ಲಿ ಹುಳ ಬಿಟ್ಟಂತಾಗಿದೆ.ಕನ್ನಡ ಚಿತ್ರರಂಗದ ಆಧಾರಸ್ಥಂಭಗಳು ಎನಿಸಿಕೊಳ್ಳೊ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಸುಮಲತಾಗೆ ಬೆಂಬಲ ನೀಡುವ ಬಗ್ಗೆ ಯಾವ ಕ್ಲಾರಿಟಿಯನ್ನೂ ಕೊಟ್ಟಿಲ್ಲ.

ಈ ಬಗ್ಗೆ ಸುದೀಪ್ ಮನಸ್ಸಿನಲ್ಲಿ ಬೇರೆಯೇನೋ ಓಡ್ತಿದೆ ಅನಿಸುತ್ತೆ. ’ಅಲ್‌ರೆಡಿ ಸುಮಲತಾರ ಬಳಿ ದರ್ಶನ್ ಇರುವಾಗ ನನ್ನ ಅವಶ್ಯಕತೆ ಅವರಿಗಿಲ್ಲ ಅನ್ಸುತ್ತೆ. ಸುಮಲತಾರಿಂದ ನನಗ್ಯಾವ ಬುಲಾವ್ ಕೂಡ ಬಂದಿಲ್ಲ. ಅಲ್ಲದೇ ನನಗೆ ರಾಜಕೀಯದಲ್ಲಿ ಸ್ವಲ್ಪ ಆಸಕ್ತಿ ಕಡಿಮೆ’ ಅಂತ ಒಂದು ಕ್ವಾಷೆನ್ ಮಾರ್ಕ್ ಇಟ್ಟುಬಿಟ್ಟಿದಾರೆ ನಟ ಸುದೀಪ್.ಯಾವಾಗಲೂ ತಮ್ಮ ರಾಜಕೀಯ ಸ್ನೇಹಿತರ ಪರವಾಗಿ ಸ್ಟಾರ್ ಕ್ಯಾಂಪೆನ್‌ನಲ್ಲಿ ಖುಷಿಯಿಂದ ಭಾಗವಹಿಸುವ ಕಿಚ್ಚನ ಮನಸ್ಸು ಹೀಗೇಕೆ ಬದಲಾಯ್ತು ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.ಇನ್ನು ಶಿವರಾಜ್ ಕುಮಾರ್ ಸುಮಲತಾರ ರಾಜಕೀಯ ಪ್ರವೇಶದ ಬಗ್ಗೆ ತಮ್ಮ ಓಪಿನಿಯನ್ ತಿಳಿಸೋಕೆ ಹಿಂದೇಟು ಹಾಕಿದಾರೆ.

ಸುಮಲತಾರ ಬಗೆಗಿನ ರೇವಣ್ಣ ವಿವಾದತ್ಮಕ ಹೇಳಿಕೆಯನ್ನ ಖಂಡಿಸಿದ ಶಿವಣ್ಣ ಸುಮಲತಾರಿಗೆ ಬೆಂಬಲ ಕೊಡುವ ವಿಷಯದಲ್ಲಿ ಮೌನ ವಹಿಸಿದ್ರು. ’ಸುಮಲತಾರ ಸ್ಪರ್ಧೆ ಅವರ ವೈಯಕ್ತಿಕ ನಿರ್ಧಾರ, ಅಂಬರೀಷ್ ನನ್ನ ತಂದೆಯ ಸಮಾನ, ಅವರಿಗೆ ಯಾವಾಗಲೂ ನನ್ನ ಮನಸ್ಸಿನಲ್ಲಿ ತಂದೆಯ ಸ್ಥಾನ ಕೊಟ್ಟಿದ್ದೇನೆ. ಆದರೆ ಚುನಾವಣೆಯಲ್ಲಿ ಸುಮಲತಾ ಪರವಾಗಿ ಪ್ರಚಾರಕ್ಕೆ ಹೋಗುವ ಬಗ್ಗೆ ಇನ್ನು ನಾನು ನಿರ್ಧಾರಿಸಿಲ್ಲ’ ಎಂದು ತಮ್ಮ ನಿಲುವನ್ನ ನೇರವಾಗಿ ವ್ಯಕ್ತಪಡಿಸಿದ್ರು ಹ್ಯಾಟ್ರಕ್ ಹೀರೊ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬಹಳ ನಿಕಟವಾಗಿರುವ ಶಿವಣ್ಣ ಏನಾದ್ರೂ ನಿಖಿಲ್‌ಗೆ ಸರ್ಪೊಟ್ ಮಾಡಬಹುದಾ ಎನ್ನುವ ಆಸೆ ಜೆಡಿಎಸ್ ಕಾರ್ಯಕರ್ತರ ಮನಸ್ಸಿನಲ್ಲಿ ಮನೆ ಮಾಡಿದೆ.ಇನ್ನು ಸ್ಯಾಂಡಲ್‌ವುಡ್‌ನ ಸಾರಥಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ’ಏಕ್ ಮಾರ್ ದೋ ಥುಕಡಾ’ ಎನ್ನುವ ರೀತಿ ಸುಮಲತಾಗೆ ತಮ್ಮ ಫುಲ್ ಸರ್ಪೊಟ್ ಇರುತ್ತೆ ಅಂತ ಕಡ್ಡಿಮುರಿದಂತೆ ಹೇಳಿದ್ದಾರೆ.

ಅಂಬರೀಷ್ ಹಿರಿಮಗನ ಸ್ಥಾನದಲ್ಲಿದ್ದ ದರ್ಶನ್ ಸುಮಲತಾರಿಗೆ ಬೆಂಬಲ ಸೂಚಿಸಿರುವುದ್ರಲ್ಲಿ ಆಶ್ಚರ್ಯವೇನಿಲ್ಲ. ಈಗಾಗಲೇ ’ಮಗನ ಜಾಗದಲ್ಲಿ ನಿಂತು ನಾನು ಏನು ಮಾಡಬೇಕು ಎನ್ನುವ ಆರ್‌ಡಾರ್ ಮಾಡಿ ಸಾಕು, ನೀವು ಯಾವಾಗ ಕ್ಯಾಂಪೇನ್‌ಗೆ ಕರಿತಿರಾ ನಾನು ಆಗ ಬರೋಕೆ ರೆಡಿ’ ಅಂತ ಸುಲತಾರ ಬಳಿ ದರ್ಶನ್ ಹೇಳಿಬಿಟ್ಟಿದ್ದಾರಂತೆ. ಇನ್ನು ಸುಮಲತಾ ಕೂಡ ’ದರ್ಶನ್ ಹಾಗೂ ಯಶ್ ನಮ್ಮ ಮನೆಯ ಮಕ್ಕಳು. ಅವರು ಯಾವಾಗ ಕರೆದ್ರೂ ನನ್ನ ಸಹಾಯಕ್ಕೆ ಬರ‍್ತಾರೆ. ಶೂಟಿಂಗ್ ಸಮಯವನ್ನ ಹೊರತುಪಡಿಸಿ ಇಬ್ಬರೂ ನನ್ನ ಪರವಾಗಿ ಪ್ರಚಾರ ಮಾಡೋಕೆ ಖಂಡಿತ ಬರ‍್ತಾರೆ ಎನ್ನುವ ನಂಬಿಕೆಯಿದೆ’ ಅಂತಾರೆ ಸುಮಲತಾ ಅಂಬರೀಷ್.

ತಮ್ಮ ಆಲೋಚನೆಗಳ ಮೂಲಕ ಮಂಡ್ಯ ರಾಜಕೀಯವಲಯದಲ್ಲಿ ಹೊಸ ಎನರ್ಜಿ ಹುಟ್ಟುಹಾಕಿರುವ ನಿಖಿಲ್ ಕೂಡ ಸುಮಲತಾರಿಗೆ ತೀವ್ರ ಪೈಪೋಟಿ ಕೊಡೊದ್ರಲ್ಲಿ ಡೌಟೇ ಬೇಡ. ಈಗ ಸುಮಲತಾರಿಗೆ ಸಾಥ್ ಕೊಡ್ತಿರೊ ನಟ ದರ್ಶನ್ ಹಾಗೂ ಯಶ್ ವಿರುದ್ಧವಾಗಿ ಜೆಡಿಎಸ್ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ದರ್ಶನ್ ಹಾಗೂ ಯಶ್ ಬೆಂಬಲಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಿದೆ. ’ಹೀಗೆ ಏಕಾಏಕಿ ಸುಮಲತಾ ಪರವಾಗಿ ಪ್ರಚಾರ ಮಾಡಿ ನಿಖಿಲ್‌ರನ್ನ ಸೋಲಿಸೋದ್ರಲ್ಲಿ ಯಾವುದೇ ಅರ್ಥ ಇಲ್ಲ. ಬೇಕಾದ್ರೆ ಸ್ಟಾರ್ ನಟರೇ ಬಂದು ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲಲಿ.

ನಟರೆಂಬ ಸ್ಟಾರ್ ವ್ಯಾಲ್ಯೂವನ್ನ ದುರುಪಯೋಗಪಡಿಸಿಕೊಳ್ಳುವುದು ಬೇಡ, ಒಂದು ವೇಳೆ ನಮ್ಮ ವಿರೋಧದ ನಡುವೇಯೂ ದರ್ಶನ್ ಹಾಗೂ ಯಶ್ ಬಂದು ಸುಮಲತಾ ಪರವಾಗಿ ಪ್ರಚಾರ ಮಾಡಿದ್ರೆ ಗೋಬ್ಯಾಕ್ ಚಳುವಳಿ ಶುರುವಾಗುತ್ತೆ’ ಎಂದು ಜೆಡಿಎಸ್ ಕಾರ್ಯಕರ್ತರು ವಾರ್ನಿಂಗ್ ಕೊಟ್ಟಿದಾರೆ.ಅಂತೂ ಈ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಇಬ್ಬರ ಭವಿಷ್ಯವನ್ನ ನಿರ್ಧಾರಿಸಲಿದೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್ ಇವರಿಬ್ಬರ ಸ್ಪರ್ಧೆಗೆ ಸಿಲುಕಿ ಎರಡು ಭಾಗವಾಗಿಹೋಗಿದೆ. ಒಬ್ಬರಿಗೆ ಬೆಂಬಲ ಕೊಟ್ರೆ ಇನ್ನೊಬ್ಬರನ್ನ ಎದುರು ಹಾಕಿಕೊಳ್ಳಬೇಕು ಎನ್ನುವ ಅನಿವಾರ್ಯವನ್ನ ಟಾಪ್ ಸೆಲೆಬ್ರೆಟಿಗಳು ಫೇಸ್ ಮಾಡ್ತಿದಾರೆ.

ಇತ್ತ ಅಭ್ಯರ್ಥಿಗಳ ಕ್ಷಣಕ್ಷಣದ ನಡೆ ಸಾಕಷ್ಟು ಬೆಳವಣಿಗೆಗಳನ್ನ ಹುಟ್ಟುಹಾಕ್ತಿದೆ. ಒಂದು ಕಡೇ ಮಂಡ್ಯ ಜನ ನನ್ನ ಕೈ ಬಿಡಲಲ್ಲ, ಅವರ ಪ್ರೀತಿಗೆ ತಲೆಬಾಗಿ ನಾನು ಒಂದುಸಲ ಇಟ್ಟ ಹೆಜ್ಜೆಯನ್ನ ಹಿಂದೆ ತೆಗೆದುಕೊಳ್ಳಲ್ಲ ಎನ್ನುವ ಸುಮಲತಾ ಆತ್ಮವಿಶ್ವಾಸ, ಇನ್ನೊಂದು ಕಡೇ ನಾನೂ ಈ ಮಣ್ಣಿನ ಮಗನೇ, ನಾನು ಯಾವ ಸ್ವರ್ಥಕ್ಕೂ ರಾಜಕೀಯ ಮಾಡೋಕೆ ಬಂದಿಲ್ಲ, ನಾನು ಗೆದ್ರೆ ಯಾವ ರೀತಿ ಜನರ ಸೇವೆ ಮಾಡ್ತೀನಿ ನೋಡ್ತಾ ಇರಿ ಎನ್ನುವ ನಿಖಿಲ್ ಹಠ. ಎರಡೂ ಮಂಡ್ಯಕ್ಷೇತ್ರದ ಹಣಾಹಣಿಗೆ ಕಿಚ್ಚು ಹತ್ತಿಸಿಬಿಟ್ಟಿದೆ. ಆದರೆ ಮತದಾರ ಪ್ರಭು ಯಾರ ಮುಡಿಗೆ ಕಿರೀಟ ತೋಡಿಸ್ತಾನೆ ಅನ್ನೋದೆ ಒಂದು ದೊಡ್ಡ ಕ್ಯೂರ‍್ಯಸಿಟಿ.

LEAVE A REPLY

Please enter your comment!
Please enter your name here