
ವ್ಹೀಲಿಂಗ್ ಶೋಕಿಗೆ ಡಿಯೊ ಬೈಕ್ ಗಳನ್ನು ಕದಿಯುತ್ತಿದ್ದ ಯುವಕ ಅರೆಸ್ಟ್..!
ಬೆಂಗಳೂರು: ವ್ಹೀಲಿಂಗ್ ಶೋಕಿಗೆ ಡಿಯೊ ಬೈಕ್ಗಳನ್ನು ಕದಿಯುತ್ತಿದ್ದ ಯುವಕನನ್ನು ಬೆಂಗಳೂರಿನ ಪೀಣ್ಯಾ ಪೊಲೀಸರು ಬಂಧಿಸಿದ್ದಾರೆ. ಟಿ.ದಾಸರಹಳ್ಳಿಯ ಮೂಲದ 19 ವರ್ಷದ ಅಪ್ಜಲ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಪೀಣ್ಯಾ ಪೊಲೀಸರು ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 3ಡಿಯೋ ಬೈಕ್,ಮೊಬೈಲ್ ಪೊಲೀಸರು ಜಪ್ತಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಲೈಕ್ ಪಡೆಯಲು ಕೃತ್ಯ ಎಸಗುತ್ತಿದ್ದನಂತೆ.
ಪೋಷಕರಿಗೆ ತಿಳಿಯದೆ ಕದ್ದ ಬೈಕ್ಗಳನ್ನು ಸ್ನೇಹಿತರ ಮನೆ ಮುಂದೆ ನಿಲ್ಲಿಸುತ್ತಿದ್ದನು. ವ್ಹೀಲಿಂಗ್ ವೇಳೆ ಪೊಲೀಸರಿಗೆ ಸಿಕ್ರೆ ಬೈಕ್ ಬಿಟ್ಟು ಪರಾರಿಯಾಗುತ್ತಿದ್ದನು. ಪೀಣ್ಯಾ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಾದ ಬೈಕ್ ಕಳವು ಬಗ್ಗೆ ಸ್ಪೆಷಲ್ ಡ್ರೈವ್ ಮಾಡುತ್ತಿದ್ದಾಗ ಅರೋಪಿ ಅಪ್ಜಲ್ ಬಲೆಗೆ ಬಿದ್ದಿದ್ದಾನೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.