ಕಡಲೆಕಾಯಿ ಬೀಜ…( ಶೇಂಗಾ )ಇಷ್ಟಪಡದವರುಂಟೇ….???

ಲೈಫ್ ಸ್ಟೈಲ್

ಇದು ಬಾದಾಮಿ ,ಪಿಸ್ತಾ ,ಗೋಡಂಬಿ ಗಿಂತ ಹೆಚ್ಚಿನ ಸತ್ವ ತುಂಬಿದ ಇದು ಬಡವರ ಬಾದಾಮಿ ಎಂದೇ ಕರೆಯಲಾಗುವ ಕಡಲೆಕಾಯಿ ಬೀಜದ ಬಗ್ಗೆ ಮಾಹಿತಿ ನೀಡುವ ಲೇಖನ .
ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..
ಕಡಲೆ ಕಾಯಿಬೀಜವನ್ನು ಹೆಚ್ಚಾಗಿ ಸೇವಿಸುತ್ತಾ ಬಂದಲ್ಲಿ ಹೃದಯ ಸಂಬಂದಿ ಕಾಯಿಲೆಗಳು ಬರದಂತೆ ತಡೆಯುತ್ತದೆ ಎಂದು ಅಧ್ಯಯನ ಗಳು ತಿಳಿಸಿವೆ .
ಕಡಲೆ ಕಾಯಿಯಲ್ಲಿ ಇರುವ ಒಳ್ಳೆಯ ಕೊಬ್ಬಿನಂಶ
Monounsaturated fats ,ಮತ್ತು oleic acid ಮುಂತಾದ ಆಂಟಿ accident ಗಳು ಹೃದಯವನ್ನು ಬಲವಾಗಿಸಲು ಅನುಕೂಲಮಾಡಿಕೊಡುತ್ತದೆ.
ಕೊನೆಪಕ್ಷ ವಾರಕ್ಕೆ 4ದಿನ ವಾದರೂ ಈ ಕಡಲೆ ಕಾಯಿ ಬೀಜವನ್ನು ನಿಮ್ಮ ಆಹಾರದಲ್ಲಿ ಸೇವಿಸಿದರೆ ಹೃದಯಸಂಬಂದಿ ಸಮಸ್ಯೆಗಳಿಂದ ದೂರವಿರಬಹುದು .
ನೆಲಕಡಲೆ ಯಲ್ಲಿ ಮ್ಯಾಂಗನೀಸ್ ಸತ್ವ ತುಂಬಿರು ತ್ತದೆ .ಮ್ಯಾಂಗ್ ನಿಸ್ ಲಕ್ಟೊಸ್ ಮತ್ತು ಕೊಬ್ಬುಗಳ ಬದಲಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಆದ್ದರಿಂದ ನಾವು ಸೇವಿಸುವ ಆಹಾರದಿಂದ ದೇಹಕ್ಕೆ ಕ್ಯಾಲ್ಸಿಯಂ ಸೇರುತ್ತದೆ.
ಅದರಲ್ಲೂಮಹಿಳೆಯರು ಹೆಚ್ಚು ಕಡಲೆ ಕಾಯಿ ಬೀಜವನ್ನು ಅಗಾಗ ಆಹಾರದಲ್ಲಿ ಸೇರಿಸಿ ಕೊಂಡರೆ ,ಅವರಿಗೆ ಮೂಳೆ ಸಂಬಂದಿ ಸಮಸ್ಯೆಗಳು ಬರುವ ಸಾಧ್ಯತೇ ಕಡಿಮೆಆಗುತ್ತದೆ .
*ಜ್ಞಾಪಕ ಶಕ್ತಿ ಹೆಚ್ಚುವುದು .*
ಇದರಲ್ಲಿರುವ ವೈಟಮಿನ್ B3 ಮಿದುಳಿನ ಚಟುವಟಿಕೆಯನ್ನು ಹೆಚ್ಚಿಸುವುದರೊಂದಿಗೆ ,ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ .
ಪ್ರೊಟೀನ್ ಆಗರವಾಗಿರುವ ಕಡಲೆ ಯಲ್ಲಿ ,ಐರನ್ಕಂಟೆಂಟ್ ,ಝಿನ್ಕ್ ,ಮೆಗ್ನಿಶಿಯಂ ,ಮತ್ತು ವೈಟಮಿನ್ ದ ಹೆಚ್ಚಿನ ಪ್ರಮಾಣದಲ್ಲಿದೆ .
ಅಂದರೆ ಮಾಂಸಾಹಾರ ದಲ್ಲಿರುವ ಅಷ್ಟು ಸತ್ವಗಳು ಇದರಲ್ಲಿ ಅಧಿಕ ವಾಗಿರುವುದರಿಂದ ,ಶಾಖಾಹಾರಿಗಳು ಇದನ್ನು ಹೆಚ್ಚು ಸೇವಿಸುವುದು ಒಳಿತು.
ಯೌವನವನ್ನು ಅಂದರೆ ವಯೋಸಹಜ ಮುಪ್ಪಿಗಿಂತ ಮುಂಚೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ .
ಕಡಲೆಯಲ್ಲಿ palipinals ಎಂಬ ಆಂಟಿಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿಯನ್ನು ನೀಡಿ ಮುದಿತನವನ್ನು ಹೋಗಲಾಡಿಸಲು ಅನುಕೂವಾಗಿದೆ .
*ಮೂತ್ರನಾಳಗಳಲ್ಲಿ ಕಲ್ಲು *
ಕಡಲೆ ಕಾಯಿ ಬೀಜವನ್ನು ದಿನವೂ 30ಒನ್ಸ್ (30gram)ಅಳತೆಗೆ ಸೇವಿಸುತ್ತಾ ಬಂದರೆ ಪಿತ್ತ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ .20ವರ್ಶಗಳ ಸತತ ಸಂಶೋಧನೆಯಿಂದ 25%ಪಿತ್ತ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ .
*ಮಾಂಸಗಳ ಬಲ ವರ್ಧನೆ **
ಕಡಲೆಯಲ್ಲಿ ಉಳ್ಳ ವಿಟಮಿನ್ ಬಿ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ .ಮಾಂಸಖಂಡಗಳು ಬಲಗೊಳ್ಳುವಲ್ಲೂ ಇದು ಒಂದು .
ದೇಹದಲ್ಲಿ metabaolisam ಬದಲಾವಣೆಯನ್ನು ಹೆಚ್ಚಿಸುತ್ತದೆ .ಅದರಲ್ಲೂ ಜಿಮ್ ಗೆ ಹೋಗಿ ದೇಹವನ್ನು ಫಿಟ್ನೆಸ್ ನಲ್ಲಿಡುವವರಿಗೆ ಅತ್ಯುತ್ತಮ ಶಕ್ರಿಯನ್ನು ನೀಡುವ ಆಗರ ಕಡಲೆ ಯಲ್ಲಿದೆ .
*ಕೊಬ್ಬನ್ನು ಕರಗಿಸುತ್ತದೆ *
ಕಡಲೆ ತಿಂದರೆ ಕೊಬ್ಬು ಜಾಸ್ತಿಯಾಗುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಕೆಲವರು ಇದನ್ನು ತಿನ್ನುವುದಿಲ್ಲ .
ಅದರಲ್ಲೂ ಮನುಷ್ಯನಿಗೆ ಒಳ್ಳೆಯದು ಮಾಡುವ ಒಳ್ಳೆಯ ಕೊಬ್ಬು ಗಳು ಈ ಕಡಲೆಯಲ್ಲಿದೆ .
ಇದರಲ್ಲಿರುವ ತಾಮ್ರಸತ್ತು ದೇಹದಲ್ಲಿ LDL ಎಂಬ ಕೆಟ್ಟ ಕೊಬ್ಬನ್ನು ಕಮ್ಮಿ ಮಾಡಿ ,ಒಳ್ಳೆಯ ಕೊಬ್ಬಾದHDL ಕೊಬ್ಬನ್ನು ಹೆಚ್ಚಿಸುತ್ತದೆ .
*ನ್ಯೂಟ್ರಿಯೆಂಟ್ಸ್ಗಗಳು *
ಕಡಲೆಯಲ್ಲಿ ಕಾರ್ಬೋಹೈಡ್ರೇಡ್ಟ್ಸ್ ,ಫೈಬರ್ ,ಕರಗುವ ಕೊಬ್ಬು (HDL)ಪ್ರೊಟೀನ್ ,ವಿಟಮಿನ್ ,ಕಬ್ಬಿಣ ಅಂಶ ,ಕ್ಯಾಲ್ಸಿಯಂ ,ಝಿನ್ಕ್ ,ಮ್ಯಾಂಗನೀಸ್ ,ಪಾಸ್ಪರಸ್ ,ಪೊಟ್ಟ್ಯಾಷಿಯಂ ,ಮತ್ತು ನಮ್ಮ ದೇಹಕ್ಕೆ ಬೇಕಾದ ಅತ್ಯವಶ್ಯಕ ನ್ಯೂಟ್ರಿಯೆಂಟ್ಸ್ಗಳು ಅಷ್ಟೂ ಇರುವ ಕಡಲೆ ಸೇವಿಸಿದರೆ ನಮಗೆ ಸಿಗುವ ಪೋಷಕಾಂಶಗಳು ಎಷ್ಟೊಂದು ಎಂದು ಇದರಿಂದ ತಿಳಿದು ಬರುತ್ತದೆ .
ಮತ್ತೆ ಕಡಲೆ ತಿನ್ನುವವರು ಧೀರ್ಘಾಯುಷ್ಯವಾಗಿ ಬಾಳಬಹುದು ಮತ್ತು ಹಾರ್ಟ್ ಅಟ್ಯಾಕ್ ಅಂತವುಗಳನ್ನು ತಡೆಯಬಹುದೆಂದು ಅಧ್ಯಯನಗಳು ತಿಳಿಸಿವೆ .
✍️✍️ಯಶುಪ್ರಸಾದ್ ✍️✍️

Leave a Reply

Your email address will not be published.