ಮುಸ್ಸಂಜೆಯಲ್ಲಿ ಏಕೆ ಊಟ ಮಾಡಬಾರದು???

ಲೈಫ್ ಸ್ಟೈಲ್

ಹಿರಿಯರು ಸಾಮಾನ್ಯವಾಗಿ ಮುಸ್ಸಂಜೆಯಲ್ಲಿ ಕುಳಿತು ತಿನ್ನಬಾರದು ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ…ಇಂದಿಗೂ ಕೂಡ ಎಷ್ಟೋ ಮನೆಗಳಲ್ಲಿ ಹಿರಿಯರು ಯಾವುದೇ ಕಾರಣಕ್ಕೂ ಸಂಧ್ಯಾ ಸಮಯಗಳಲ್ಲಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ.
ಪ್ರದೋಷ ಕಾಲ ಗಳಲ್ಲಂತೂ ಯಾವುದೇ ಕಾರಣಕ್ಕೂ ತಿನ್ನಬಾರದೆಂದು ಪ್ರಾಚೀನಕಾಲದಿಂದಲೂ ನಂಬಿ, ಹಾಗೆಯೇ ಅನುಸರಿಸಿಕೊಂಡು ಬಂದಿರುತ್ತಾರೆ.

ಸಾಯಂಕಾಲ ದೇವರಿಗೆ ದೀಪವನ್ನು ಹಚ್ಚುವಾಗ ಮತ್ತು ಮಂತ್ರಪಠಣ,,ಶ್ಲೋಕಗಳನ್ನು, ಯಾವುದೇ ಭಗವಂತನನ್ನು ಧ್ಯಾನಿಸಿ ಕೀರ್ತನೆ ಮಾಡಬೇಕಾದಂತಹ ಸಮಯವದು. ದೇವರು ಭಕ್ತನಿಗೆ ಪ್ರಸನ್ನ ನಾಗುವ ಸಮಯ ಎಂದು ಕೂಡ ಹೇಳಬಹುದು.ಮನೆಗೆ ಶುಭವನ್ನುಂಟು ಮಾಡುವ ಮಹಾಲಕ್ಷ್ಮಿ ಮನೆಯಲ್ಲಿ ದೀಪ ಬೆಳಗಿ ಪೂಜಿಸುವ ಸಮಯದಲ್ಲಿ ಅಲ್ಲಿ ಉಪಸ್ಥಿತರಿರುತ್ತಾಳೆ,,,ಲಕ್ಷ್ಮಿ ಬರುವ ಸಮಯದಲ್ಲಿ, ಅಶುಭ ಕಾರಿಯಾದ ಅಂತಹ ಧರಿದ್ರ ದೇವತೆಯು ಮನೆಯಿಂದ ಹೊರಗೆ ಹೋಗುವ ಸಮಯ ಅದು.

ಆದ್ದರಿಂದ ಆ ಸಮಯದಲ್ಲಿ ಊಟ ಮಾಡಬಾರದು ಎಂದು ಹಿರಿಯರು ಹೇಳುತ್ತಿದ್ದರು ನಿಜ… ಇನ್ನೊಂದು ಕಾರಣ,,ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಪ್ರಾರ್ಥಿಸಿ ದೈವಾರಾಧನೆಯನ್ನು ಮಾಡುತ್ತಿದ್ದರೆ ಆ ಮನೆ ಶುಭ ಲಕ್ಷಣದಲ್ಲಿಇದ್ದು ಆಯುರಾರೋಗ್ಯ ಎಲ್ಲರಿಗೂ ನೆಲೆಸಲಿ ಎಂಬುವ ಉದ್ದೇಶ ಕೂಡ… ಜೊತೆಗೆ ಎಲ್ಲರಿಗೂ ಭಗವದ್ಭಕ್ತಿ ಉಂಟಾಗಿ ದೇವರ ಪೂಜೆಯನ್ನು ಮಾಡುವಂತಹ ಭಕ್ತಿಸಿಗಲಿ ಮತ್ತು ನಮ್ಮ ಮನಸ್ಸಿನಲ್ಲಿ ಇರುವಂತಹ ಋಣಾತ್ಮಕ ಭಾವನೆಗಳೆಲ್ಲ ಹೋಗಿ ಧನಾತ್ಮಕ ಶಕ್ತಿಯು ನಮ್ಮ ದೇಹಕ್ಕೂ ಮತ್ತು ನಮ್ಮ ಮನಸ್ಸಿಗೂ ಸಿಗಲಿಎಂದೂ ಕೂಡ ಅವರ ಉದ್ದೇಶವಾಗಿತ್ತು.

ಎಲ್ಲರೂ ದೇವರ ಧ್ಯಾನದಲ್ಲಿ ಪಾಲ್ಗೊಳ್ಳಲಿ ಎಂಬುವ ಒಂದು ತತ್ವಕೂಡ.
ಪ್ರದೋಷಕಾಲಶಿವನಿಗೆ ಪ್ರಿಯವಾದ ಸಮಯ.ಆ ಸಮಯದಲ್ಲಿ ಭೂತಗಣಗಳು ಮತ್ತು ಶಿವನ ಗಣಗಳಪ್ರತಿನಿಧಿಗಳು ಭೂಲೋಕದಲ್ಲಿ ವಿಹರಿಸುತ್ತಾ ಪೂಜೆಮಾಡುವ,ನಡೆಯುತ್ತಿರುವ ಮನೆಯನ್ನು ಸಂದರ್ಶಿಸಿ ಅಲ್ಲಿ ಅವರಿಗೆ ಒಳಿತನ್ನುಂಟುಮಾಡುತ್ತದೆ, ಅಶ್ವಿನೀದೇವತೆಗಳು ಸಂಚರಿಸುವಾಗ ಆ ಸಮಯದಲ್ಲಿ ಒಳ್ಳೆಯದನ್ನೇ ಹಾರೈಸುತ್ತಾರೆ ಮಹಾಲಕ್ಷ್ಮಿ ಕೃಪೆ,ಭಗವಂತನ ಕೃಪೆ ಎಲ್ಲವೂ ಸಂಧ್ಯಾ ಸಮಯದಲ್ಲಿ ಎಲ್ಲರಿಗೂ ಸಿಗಲಿ ಎಂಬುವ ಉದ್ದೇಶವಷ್ಟೇ.

ಅಂತಹ ಸಮಯದಲ್ಲಿ ನಾವು ಅದಕ್ಕೆ ವಿರುದ್ಧವಾದವಿಷಯವಾದಂತಹ ಆಹಾರವನ್ನು ತಿನ್ನುವುದು, ನಾವು ಭಗವಂತನನ್ನು ಪರೋಕ್ಷವಾಗಿ ಅವಮಾನಿಸಿ ದಂತಾಗುತ್ತದೆ ಎಂಬುದು ಹಿರಿಯರ ಉದ್ದೇಶ. ಆಕಾರಣದಿಂದಲೇ ಅಲ್ಲದೆ ಆರೋಗ್ಯ ಶಾಸ್ತ್ರವನ್ನು ಅನುಸರಿಸಿ ಕೂಡ ನಾವು ಪ್ರದೋಷಕಾಲದಲ್ಲಿ ಅಂದರೆ ಸೂರ್ಯನು ಅಸ್ತಮಿಸಿದ ನಂತರ ಸ್ವಲ್ಪಕಾಲದ ಸಮಯದ ತನಕ ನಾವು ಯಾವುದೇ ಆಹಾರವನ್ನು ತಿನ್ನುವುದು ಯೋಗ್ಯವಲ್ಲ.

ಸಂಧಿಸಮಯದಲ್ಲಿ ಆಹಾರವು ಅಜೀರ್ಣವನ್ನು ಉಂಟುಮಾಡುತ್ತದೆ ಎಂಬುವ ಉದ್ದೇಶವು ಕೂಡ. 7:00 ಗಂಟೆಯ ನಂತರ ತಿನ್ನುವುದು ನಮ್ಮ ದೇಹಕ್ಕೆ ಮತ್ತುಆ ಸಮಯದಲ್ಲಿನ ವಾತಾವರಣದಲ್ಲಿನ ರಾಸಾಯನಿಕ ಬದಲಾವಣೆಗಳು ಉಂಟಾಗುವುದಕ್ಕೂ ಎರಡನ್ನು ತಾಳೆ ಹಾಕಿ ನೋಡಿದಾಗ ನಾವು ಸಂಧ್ಯಾಕಾಲದಲ್ಲಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು.
ವಿಜ್ಞಾನವೂ ಕೂಡ ಅದನ್ನೇ ಹೇಳುತ್ತದೆ. ಆದ್ದರಿಂದಲೇ ಆ ಕಾಲದಲ್ಲಿ ನಮ್ಮ ಹಿರಿಯರು ಎಂತಹ ಅದ್ಭುತವಾದಂತಹ ವಿಷಯಗಳನ್ನೆಲ್ಲ ನಮಗೆ ತಿಳಿಹೇಳಿದ್ದಾರೆ…ಅದನ್ನೇಕೆ ನಾವು ಅನುಸರಿಸಬಾರದು..

✍️✍️✍️ಯಶುಪ್ರಸಾದ್

Leave a Reply

Your email address will not be published.