WI vs Ind.. ವಿಂಡಿಸ್ ವಿರುದ್ಧ 59 ರನ್ ಗಳ ಜಯ ಸಾಧಿಸಿದ ಟೀಂ ಇಂಡಿಯಾ

ಕ್ರೀಡೆ

ಫ್ಲೋರಿಡಾ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಂಡಿಸ್‌ ವಿರುದ್ಧ 59 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ 20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ಗಳಿಸಿತು. 192 ರನ್‌ಗಳ ಗುರಿಯನ್ನು ಪಡೆದ ವಿಂಡೀಸ್‌ 19.1 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟ್‌ ಆಯ್ತು.

ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿದ ವಿಂಡೀಸ್‌ ಪರ ನಾಯಕ ನಿಕೋಲಸ್‌ ಪೂರನ್‌ 24 ರನ್‌(8 ಎಸೆತ, 1 ಬೌಂಡರಿ, 3 ಸಿಕ್ಸರ್‌), ರೋವ್‌ಮನ್‌ ಪಾವೆಲ್‌ 24 ರನ್‌(16 ಎಸೆತ,1 ಬೌಂಡರಿ, 2 ಸಿಕ್ಸರ್‌) ಹೊಡೆದರು. ಆರ್ಶದೀಪ್‌ ಸಿಂಗ್‌ 3 ವಿಕೆಟ್‌ ಪಡೆದರೆ , ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯಿ ತಲಾ 2 ವಿಕೆಟ್‌ ಪಡೆದರು.

Leave a Reply

Your email address will not be published.