
ಪತ್ನಿಯನ್ನು ಮಚ್ಚಿನಿಂದ ಕೊಂದು ಪೊಲೀಸರಿಗೆ ಶರಣಾದ ಪತಿರಾಯ
ಬೆಂಗಳೂರು: ಭೀಕರವಾಗಿ ಪತಿಯೇ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಗೋವಿಂದಪುರದ ಬೈರಪ್ಪ ಲೇಔಟ್ ನಲ್ಲಿ ನಡೆದಿದೆ. ಆಯೇಷ ಭಾನು ಮೃತ ಮಹಿಳೆಯಾಗಿದ್ದು, ಆಯೇಷ ಪತಿ ಮುಜಾಮಿಲ್ ಪಾಷ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಆಯೇಷ ಭಾನು ಹಾಗೂ ಮುಜಾಮಿಲ್ ಪಾಷ ನಡುವೆ ಪದೇ ಪದೇ ಜಗಳ ನಡೆಯುತಿತ್ತು. ಎಷ್ಟು ಸಲ ರಾಜಿ ಪಂಚಾಯತಿ ನಡೆಸಿದರೂ ದಂಪತಿ ಮತ್ತೆ ಮತ್ತೆ ಜಗಳವಾಡುತ್ತಿದ್ದರು. ನೆನ್ನೆ ರಾತ್ರಿ ಸಹ ಗಲಾಟೆ ನಡೆದಿದ್ದು. ಪತ್ನಿ ಮೇಲೆ ಕೋಪಗೊಂಡ ಆರೋಪಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ಮುಜಾಮಿಲ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.