
ಮಹಿಳೆಗೆ ಒದ್ದು, ಕಪಾಳಮೋಕ್ಷ: ಮಸಾಜ್ ಪಾರ್ಲರ್ ಮಾಲೀಕ ದರ್ಪ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು : ಮಾಡಿದ್ದ ಕೆಲಸಕ್ಕೆ ಸಂಬಳ ಕೇಳಿದ ಕಾರಣಕ್ಕೆ ಮಸಾಜ್ ಪಾರ್ಲರ್ ಮಾಲೀಕನೊಬ್ಬ ಮಹಿಳೆಗೆ ಒದ್ದು, ಕಪಾಳಮೋಕ್ಷ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮನೋಜ್ ಎಂಬ ವ್ಯಕ್ತಿ ನಡೆಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಲಕ್ಷ್ಮಮ್ಮ ಎಂಬ ಮಹಿಳೆ ಕೆಲಸ ಮಾಡುತ್ತಿದ್ದರು. ಸಂಬಳ ನೀಡದೆ ಸತಾಯಿಸುತ್ತಿದ್ದ ಮಾಲೀಕ ಮನೋಜ್’ನ ಕುಮಾರಸ್ವಾಮಿ ಲೇಔಟ್ ಬಳಿಯಿರುವ
ಮನೆ ಬಳಿ ತೆರಳಿ ಸಂಬಳ ಕೇಳಿದ್ದಾರೆ.ಮನೋಜ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಘಟನೆ ಸಂಬಂಧ ಲಕ್ಷ್ಮಮ್ಮ ಅವರು ಕುಮಾರಸ್ವಾಮಿ ಲೇಔಟ್ ಕುಮಾರಸ್ವಾಮಿ ಲೇಔಟ್ ಯಲ್ಲಿ ದೂರು ದಾಖಲಿಸಿದ್ದಾರೆ.