ವಾಶ್ ರೂಮಿಗೆ ತೆರಳ್ತಿದ್ದಾಗ ಮಹಿಳೆಯನ್ನು ಅಡ್ಡಹಾಕಿದ ಕಾಮುಕರು: ಅಂಡರ್ ಪಾಸ್ ಗೆ ಕರೆದೊಯ್ದು ಅತ್ಯಾಚಾರ

ಅಪರಾಧ

ಚಂಢೀಗಡ: ಕಾಮುಕರಿಬ್ಬರು 19 ವರ್ಷದ ಮಹಿಳೆಯನ್ನು ಅತ್ಯಾಚಾರಗೈದು ಬಳಿಕ ಆಕೆಯ ಬಳಿಯೇ ಫೋನ್ ನಂಬರ್ ಬಿಟ್ಟೋದ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಹರಿಯಾಣದ ಕರ್ನಲ್ ಎಂಬಲ್ಲಿ ನಡೆದಿದೆ. ಘಟನೆಯ ಬಳಿಕ ಮಹಿ ಳೆಯ ಬಳಿಯಿದ್ದ ಕಾಮುಕರ ಫೋನ್ ನಂಬರ್ ಹಿಡಿದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆ ತನ್ನ ಪತಿಯ ಜೊತೆ ಪಾಣಿಪತ್ ಗೆ ತೆರಳಿ ಬಸ್ಸಿನಲ್ಲಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಕರ್ನಲ್ ನಲ್ಲಿ ನಡೆದಿದೆ.

ಸಂಬಂಧಿಕರೊಬ್ಬರು ಕರೆ ಮಾಡಿದ್ದರಿಂದ ದಂಪತಿ ಪಾಣಿಪತ್‍ಗೆ ತೆರಳಿ ವಾಪಸ್ ಬರಲು ಟೋಲ್ ಪ್ಲಾಜಾ ಬಳಿ ಬಸ್ಸಿಗಾಗಿ ಕಾಯು ತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆ ವಾಶ್ ರೂಮ್ ಗೆ ತೆರಳಿದ್ದಾರೆ. ಆದರೆ ವಾಶ್ ರೂಮ್ ಹೊರಗಡೆ ನಿಂತಿದ್ದ ಕಾಮುಕರು ಮಹಿಳೆಗೆ ಚಾಕು ತೋರಿಸಿ ಪಕ್ಕದಲ್ಲೇ ಇದ್ದ ಅಂಡರ್ ಪಾಸ್‍ಗೆ ಕರೆದೊಯ್ದು ಅತ್ಯಾಚಾರವೆಸಗುವ ಮೂಲಕ ತಮ್ಮ ಕಾಮ ತೃಷೆ ತೀರಿಸಿ ಕೊಂಡಿದ್ದಾರೆ.

ಘಟನೆಯ ಮಾಹಿತಿ ಅರಿತ ಪೊಲೀಸರು ಕೂಡಲೇ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಟೋಲ್ ಪ್ಲಾಜಾ ಪಕ್ಕ ದಲ್ಲಿ ಸ್ನ್ಯಾಕ್ಸ್ ಮಾರಾಟ ಮಾಡುವಾತನಾಗಿದ್ದು, ಮತ್ತೋರ್ವ ಚೆಕ್ಕಿಂಗ್ ಪಾಯಿಂಟ್‍ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದವನು ಎಂದು ತಿಳಿದು ಬಂದಿದೆ. ದಂಪತಿ ಪಂಜಾಬ್ ಮೂಲದವರಾಗಿದ್ದು, ಸಂಬಂಧಿಕರ ಮನೆ ಪಾಣಿಪತ್ ಗೆ ತೆರಳಿದ್ದು, ವಾಪಸ್ಸಾಗಲು ರಾತ್ರಿ 11 ಗಂಟೆಯ ಬಸ್ಸಿಗಾಗಿ ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.