
ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲಶಾಲಿಗಳು: ನಟ ಮಾಧವನ್
ಮುಂಬೈ: ಮಹಿಳೆಯರು ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ನಟ ಮಾಧವನ್ ಹೇಳಿದ್ದಾರೆ. ಲಿಂಗ ತಾರತಮ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸಕ್ರಿಯವಾಗಿ ಏನನ್ನೂ ಮಾಡದಿದ್ದರೂ, ತಮ್ಮ ನಿಯಮಗಳನ್ನು ತೊಡೆದುಹಾಕುವುದು ಅತ್ಯಂತ ಮುಖ್ಯವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಆದರೆ ಎಲ್ಲದಕ್ಕೂ ಪುರುಷರನ್ನು ದೂಷಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಈ ನಿಯಮಗಳಲ್ಲಿ ಬೆಳೆದು ಬಂದಿದ್ದಾರೆ ಎಂದು ವಿವರಿಸಿದ ಅವರು, ಪುರುಷ ಮತ್ತು ಮಹಿಳೆಯರ ಕೆಲಸ ಹೇಗೆ ಹಂಚಿಕೆಯಾಗಿದೆ ಎಂಬುದು ತಿಳಿಸಿದ್ದಾರೆ.
ಮಹಿಳೆಯರು ಮತ್ತು ಪುರುಷರು ಬೆಳೆದು ಬರುವ ವಾತಾವರಣದಿಂದ ವ್ಯಕ್ತಿತ್ವ ನಿರ್ಧಾರವಾಗುತ್ತೆ. ಇದರಲ್ಲಿ ಜನರದ್ದು ಏನೂ ತಪ್ಪಿಲ್ಲ. ಕುಟುಂಬವೂ ಮೊದಲು ಶಿಕ್ಷಣ ಕೊಡಬೇಕು. ಕುಟುಂಬವೇ ಮಹಿಳೆಯರನ್ನು ಕೆಲವೊಮ್ಮೆ ನಿರ್ಬಂಧಿಸುವ ವಿಷಯಗಳು ಇವೆ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ. ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲಶಾಲಿಗಳು. ಪುರುಷರಿಗೆ ಈ ವಿಷಯವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಆದರೆ ಇದು ಸತ್ಯ. ಮಹಿಳೆಯರು ಬೆಳೆದಂತೆ ಅವರ ಬುದ್ದಿಶಕ್ತಿ ಹೆಚ್ಚಾಗುತ್ತೆ ಎಂದಿದ್ದಾರೆ.