
ಮಹಿಳಾ ವಿಶ್ವಕಪ್ 2022: ಅಭ್ಯಾಸ ಪಂದ್ಯದಲ್ಲಿ ʻಸ್ಮೃತಿ ಮಂಧಾನಾʼ ತಲೆಗೆ ಪೆಟ್ಟು..!
ನ್ಯೂಜಿಲ್ಯಾಂಡ್ : ಮಹಿಳಾ ಏಕದಿನ ವಿಶ್ವಕಪ್ಗೆ ತಯಾರಿ ನಡೆಸುತ್ತಿರುವ ಭಾರತಕ್ಕೆ ಆತಂಕ ಶುರುವಾಗಿದೆ. ಇಲ್ಲಿ ನಡೆದ ದಕ್ಷಿಣ ಆಫ್ರಿ ಕಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇದು ತಂಡದಲ್ಲಿ ಆತಂಕ ಮೂಡಿಸಿದೆ.ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಶಬ್ನಿಮ್ ಇಸ್ಮಾಯಿಲ್ ಅವರು ಎಸೆದ ಬೌನ್ಸರ್ ಮಂಧಾನಾರ ತಲೆಗೆ ಬಡಿದಿದೆ. ಈ ವೇಳೆ ಮಂಧಾನಾ ಭೀತಿಗೊಳಗಾಗಿದ್ದರು.
ಆಟಗಾರ್ತಿಯನ್ನು ವೈದ್ಯರು ತಪಾಸಣೆ ನಡೆಸಿದ ಬಳಿಕ ಆಟ ಮುಂದುವರಿಸಿದ್ದರು. ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಮಂಧಾ ನಾ ಕೆಲ ಸಮಯದ ಬಳಿಕ ಮೈದಾನದಿಂದ ನಿರ್ಗಮಿಸಿದರು.ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೇಳೆಯೂ ಸ್ಮೃತಿ ಮಂಧಾನಾ ಫೀಲ್ಡಿಂಗ್ಗೆ ಇಳಿದಿಲ್ಲ. ಮಾರ್ಚ್ 6ರಂದು ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್ನ ಮೊದಲ ಪಂದ್ಯವಾಡಲಿದೆ.