ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಇನ್ಸ್’ಪೆಕ್ಟರ್..!

ಬೆಂಗಳೂರು

ಬೆಂಗಳೂರು: ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಶಾಂತ್ ಎಸ್ ಅವರು ಕಂಚಿನ ಪದಕವನ್ನು  ಗೆದ್ದಿದ್ದಾರೆ. ನೆದರ್ಲ್ಂಡ್ ನ ರೋಟರ್ ಡ್ಯಾಂ ನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಪ್ರಶಾಂತ್ ಎಸ್ ಅವರು ಟೆನಿಸ್ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಶ್ವ ಪೊಲೀಸ್ ಕ್ರೀಡಾಕೂಟ ಭಾಗವಹಿಸಲು ಅರ್ಹತೆ ಪಡೆದಿದ್ದ ಏಕೈಕ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ್ ಅವರಾಗಿದ್ದಾರೆ. ಕಂಚಿನ ಪದಕ ಜಯಿಸಿದ ಇನ್ಸ್ ಪೆಕ್ಟರ್ ಪ್ರಶಾಂತ್ ಗೆ ಹಿರಿಯ ಅಧಿಕಾರಿಗಳು ಶುಭ ಕೋರಿದ್ದಾರೆ.

Leave a Reply

Your email address will not be published.