ಪುಟಿನ್ ಗೆ ನೀಡಿದ್ದ ಗೌರವ ಬ್ಲ್ಯಾಕ್ ಬೆಲ್ಟ್ ಹಿಂಪಡೆದ ವರ್ಲ್ಡ್ ಟೇಕ್ವಾಂಡೋ..!

ಅಂತರಾಷ್ಟ್ರೀಯ

ಸಿಯೋಲ್: ಉಕ್ರೇನ್​ ಮೇಲೆ ಭೀಕರ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಈಗ ಟೀಕೆ ಹೆಚ್ಚಾಗುತ್ತಿದೆ. ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿರುವ ರಷ್ಯಾವನ್ನು ವರ್ಲ್ಡ್ ಟೇಕ್ವಾಂಡೋ ತೀವ್ರವಾಗಿ ಖಂಡಿಸಿದೆ. ಅಲ್ಲದೇ, ವ್ಲಾಡಿಮಿರ್​ ಪುಟಿನ್​ರಿಗೆ ನೀಡಲಾದ ಗೌರವ ಡಾನ್​ ಬ್ಲ್ಯಾಕ್​ ಬೆಲ್ಟ್​ ಅನ್ನು ಹಿಂಪಡೆಯಲು ನಿರ್ಧರಿಸಿದೆ.

ಅಲ್ಲದೇ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ ಒಗ್ಗೂಡಿ ಯಾವುದೇ ರಷ್ಯನ್ ಅಥವಾ ಬೆಲಾರೂಸ್​ನ ರಾಷ್ಟ್ರೀಯ ಧ್ವಜಗಳು ಅಥವಾ ಗೀತೆಗಳನ್ನು ವಿಶ್ವ ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಹಾರಾಟ, ನುಡಿಸುವುದನ್ನು ನಿರ್ಬಂಧಿಸಿದೆ.ಇದರ ಜೊತೆಗೆ ವಿಶ್ವ ಟೇಕ್ವಾಂಡೋ ಮತ್ತು ಯುರೋಪಿಯನ್ ಟೇಕ್ವಾಂಡೋ ಸಂಸ್ಥೆಗಳೆರಡು ರಷ್ಯಾ ಮತ್ತು ಬೆಲಾರಸ್‌ನಲ್ಲಿ ಟೇಕ್ವಾಂಡೋ ಸ್ಪರ್ಧೆಗಳನ್ನು ಆಯೋಜಿಸುವುದನ್ನು ಕೈ ಬಿಟ್ಟಿದೆ.

Leave a Reply

Your email address will not be published.