WWE Superstar ಗ್ರೇಟ್ ಖಲಿಯಿಂದ ಟೋಲ್ ನೌಕರನಿಗೆ ಕಪಾಳಮೋಕ್ಷ – Video Viral

ರಾಷ್ಟ್ರೀಯ

ಚಂಡೀಗಢ: ದಿ ಗ್ರೇಟ್ ಖಲಿ ಅಕಾ ದಲೀಪ್ ರಾಣಾ ಟೋಲ್ ಪ್ಲಾಜಾದಲ್ಲಿ ನೌಕರನಿಗೆ ಕಪಾಳಮೋಕ್ಷ ಮಾಡಿದ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಪಾದಿತ ಘಟನೆಯ ವೀಡಿಯೊವನ್ನು ಟ್ವಿಟರ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಹೆಸರಾಂತ WWE ಕುಸ್ತಿಪಟು ಗುರುತಿನ ಚೀಟಿ ನೀಡುವಂತೆ ಒತ್ತಾಯಿಸಿದ ನಂತರ ತನಗೆ ಕಪಾಳಮೋಕ್ಷ ಮಾಡಿದ್ದಾರೆಂದು ಟೋಲ್ ಕೆಲಸಗಾರ ಆರೋಪಿಸಿದ್ದಾನೆ.ಸದ್ಯಕ್ಕೆ ಈ ಪ್ರಕರಣದಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಲುಧಿಯಾನ ಪೊಲೀಸರು ತಿಳಿಸಿದ್ದಾರೆ. ಪಂಜಾಬ್‌ನ ಫಿಲ್ಲೌರ್ ಪ್ರದೇಶದ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

Leave a Reply

Your email address will not be published.