Home Latest WWF ಎಂಬ ಹುಚ್ಚಾಟ: ಅಲ್ಲಿ ನಿಜವಾಗಲು ನಡೆಯುತ್ತಾ ದೈತ್ಯರ ನಡುವೆ ಹೊಡೆದಾಟ.!

WWF ಎಂಬ ಹುಚ್ಚಾಟ: ಅಲ್ಲಿ ನಿಜವಾಗಲು ನಡೆಯುತ್ತಾ ದೈತ್ಯರ ನಡುವೆ ಹೊಡೆದಾಟ.!

626
0
SHARE
LAS VEGAS - AUGUST 24: Wrestler John Cena picks up wrestler Randy Orton as wrestler Triple H (R) looks on during the WWE Monday Night Raw show at the Thomas & Mack Center August 24, 2009 in Las Vegas, Nevada. (Photo by Ethan Miller/Getty Images)

ಯುವಿಷ್ಕಾ ರವಿಕುಮಾರ್

ಇಷ್ಟಕ್ಕೂ ಡಬ್ಲ್ಯೂ ಡಬ್ಲ್ಯೂ ಎಫ್ ಎಂದರೇನು? ಟಿವಿ ನೋಡುವವರಿಗೆ ಈ ಹೆಸರು ಚಿರಪರಿಚಿತ. ಅದರಲ್ಲೂ ಟಿವಿ ಹುಚ್ಚು ಹೆಚ್ಚಾಗಿರುವ ಮಕ್ಕಳಂತೂ ಈ ಕಾರ್ಯಕ್ರಮವನ್ನು ವೀಕ್ಷಿಸಲು ಕಾದು ಕುಳಿತಿರುತ್ತಾರೆ.

‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ’ ಸಂಕಟ ಎಂಬ ಮಾತನ್ನು ನೆನಪಿಗೆ ತರುವ ಈ ಹುಚ್ಚು ಆಟವನ್ನು ರೆಸ್ಲಿಂಗ್ ನ ಒಂದು ವಿಧ ವೆಂದು ಹೇಳಲಾಗುತ್ತಿದೆ .ಸಾಂಪ್ರದಾಯಿಕ ಕುಸ್ತಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಿಜವಾಗಿಯೂ ಒಂದು ಕಲೆಯನ್ನು ರೂಢಿಸಿಕೊಂಡು ಆಡುತ್ತಾರೆ .ಆದರೆ ಈ ಡಬ್ಲ್ಯುಡಬ್ಲ್ಯುಎಫ್ ಕುಸ್ತಿಯಲ್ಲಿ ಭಾಗವಹಿಸುವವರನ್ನು ದೈತ್ಯ ಮನುಷ್ಯರೇ? ಎಂಬ ಅನುಮಾನ ಬರುವುದು ಸಹಜ. ಪರ್ವತದಂತಹ ಬೊಜ್ಜು ಮೈ ,ಹೊತ್ತುಕೊಂಡು ಚಿತ್ರ ವಿಚಿತ್ರವಾದ ಉಡುಗೆಗಳನ್ನು ಧರಿಸಿ ಮುಖಗೆಲ್ಲ ಕಣ್ಣಿಗೆ ರಾಚುವಂತಹ ಬಣ್ಣ ಧರಿಸಿ ಕಣಕ್ಕೆ ಇಳಿಯುವ ಟಾಂಗ್ಯಾ, ಕೋ ಜೂನ್, ಲೇಕ್ಸ್ ಲಂಗರ್, ಅಲ್ಕಾ ಹೋಗನ್, ಮುಂತಾದವರು ಪ್ರಪಂಚದಾದ್ಯಂತ ಮಕ್ಕಳ ಆರಾಧ್ಯ ದೈವಗಳನ್ನು ಬಿಟ್ಟಿದ್ದಾರೆ.

ಈ ಕುಸ್ತಿಗೆ ನೀತಿ ನಿಯಮಗಳಿಂದ ಇಲ್ಲ. ಅಖಾಡಕ್ಕಿಳಿದ ಮೇಲೆ ಒಬ್ಬ ಕುಸ್ತಿಪಟು ಎದುರಾಳಿಯಲ್ಲ ಸೋಲಿಸಲು ಏನು ಬೇಕಾದರೂ ಮಾಡಬಹುದು. ಕಣ್ಣಿಗೆ ಉಗುರಿನಿಂದ ಚುಚ್ಚುವುದು. ರಿಂಗ್ನ ಕೊನೆಯ ನೈಲಾನ್ ಅಗ್ಗಕ್ಕೆ ಎದುರಾಳಿಯನ್ನು ನೂಕಿ ಆತ ತನ್ನತ್ತ ಬರುವ ಹೊತ್ತಿಗೆ ಓಡಿ ಬಂದು ಎದೆಗೆ ಒದೆಯುವುದು.  ಮುಖ ಮೂತಿ ನೋಡದಂತೆ ಎಲ್ಲೆಂದರಲ್ಲಿ ಚುಚ್ಚುವುದು ಎಲ್ಲವೂ ಇಲ್ಲಿ ನಡೆಯುತ್ತದೆ. ಕೆಳಗೆ ಬಿದ್ದ ಎದುರಾಳಿಯ ಮೇಲೆ ಜಿಗಿದು ಬೀಳುವುದು ಇಲ್ಲಿ ತಪ್ಪಲ್ಲ. ಕೆಲವೊಮ್ಮೆ ಎದುರಾಳಿ ಮೈದಾನದಿಂದ ಹೊರಕ್ಕೆ ಹೋದರು ಅಟ್ಟಿಸಿಕೊಂಡು ಹೋಗಿ ಒಡೆಯುವ ಪರಿಪಾಠವೂ ಉಂಟು.

ಇನ್ನೂ ಮುಂದೆ ಹೋಗಿ ಕೆಲವು ಕಡೆ ಆಟದಲ್ಲಿ ಇಬ್ಬಿಬ್ಬರು ಸೇರಿ ಒಬ್ಬನನ್ನು ಬಡಿಯುವುದು ಓಡಾಡಿಸಿಕೊಂಡು ಹೋಗುವುದು ನಡೆಯುತ್ತದೆ.

ಹೀಗೆ ಭಯಂಕರವಾಗಿ  ನಡೆಯುವ ಈ ಕುಸ್ತಿ ಹಿಂಸೆಯನ್ನು  ಪ್ರಚೋದಿಸುವುದರಲ್ಲಿ ಎತ್ತಿದ ಕೈ. ಹಾಗೆಂದು ಎಳೆಯ ಮಕ್ಕಳು ಇದನ್ನು ವೀಕ್ಷಿಸುವುದು ಬಗ್ಗೆ ದೊಡ್ಡವರು ಆತಂಕ ಪಡುತ್ತಿರುವುದು. ಕೆಲವು ಮಕ್ಕಳಂತೂ ಇಂತಹ ಕುಸ್ತಿಯನ್ನು ಅನುಕರಿಸಿ ಅಪಾಯ ಕ್ಕೊಳಗಾಗಿರುವ ಉದಾಹರಣೆಗಳು ಇಲ್ಲದಿಲ್ಲ. ಪಾಪ ಅವಳಿಗೇನು ಗೊತ್ತು ? ಇದೆಲ್ಲಾ ಕಣ್ಕಟ್ಟು, ಕ್ಯಾಮೆರಾ ಕೈಚಳಕ ಎಂದು.  ಒಬ್ಬ ಮತ್ತೊಬ್ಬನ ಪ್ರಾಣವನ್ನು ತೆಗೆದೆ ಬಿಡುತ್ತಾನೆ ಎಂದು ಕಾಣುವ ವಿಚಿತ್ರ  ಓಡಾಟದಲ್ಲಿ ಕುಸ್ತಿ ಪಟುಗಳಿಗೆ ಆಗುವುದು ಅಲ್ಪಸ್ವಲ್ಪ ಗಾಯ ಮಾತ್ರ ಏಕೆಂದರೆ ಇದು ಸಿನಿಮಾ ಶೂಟಿಂಗ್ ಗಿಂತ ಭಿನ್ನವಾದುದೇನೂ ಅಲ್ಲ !

WWF ಎಂಬ ಹಣದ ಖಜಾನೆ..

WWF ನಲ್ಲಿ ಇಂತಹ ಆಟಗಳನ್ನು ಪ್ರಾಯೋಜಿಸಿದ ಹಿಡಿದು ಆಡುವವರೆಗೆ ಎಲ್ಲರ ಉದ್ದೇಶವೂ ಹಣ ಮಾಡುವುದೊಂದೆ. ಅದನ್ನು ಅವರು ಚೆನ್ನಾಗಿಯೇ ಮಾಡುತ್ತಿರುತ್ತಾರೆ ಈ ಚಿತ್ರ ವಿಚಿತ್ರ ಕುಸ್ತಿಪಟುಗಳು ಚಿತ್ರವಿರುವ ಕಾರ್ಡ್ಗಳು ಸ್ಟಿಕ್ಕರ್ಗಳು ಲೇಬಲ್ ಗಳು ಇಂದು ಮಾರುಕಟ್ಟೆಯಲ್ಲಿ ತುಂಬಿ ಹೋಗಿವೆ .

ಡಬ್ಲ್ಯುಡಬ್ಲ್ಯುಎಫ್ ಬಹಳವಾಗಿ ಮಕ್ಕಳನ್ನು ಆಕರ್ಷಿಸುವ ಆಟ ವಾಗಿರುವುದರಿಂದ ಟಿವಿಯ ಪರದೆಯ ಮೇಲೆ ಡಬ್ಲೂಡಬ್ಲೂಎಫ್ ಬಂದರೆ ಮಕ್ಕಳು ಅಲುಗಾಡದೆ ಟಿವಿಯ ಮುಂದೆ ಕೂತಿರುತ್ತಾರೆ ಹಾಗಂದ ಮೇಲೆ ಜಾಹೀರಾತಿನ ಹೊಳೆಯೇ ಹರಿವಿತ್ತು ಎಂದಾಯಿತಲ್ಲ .

ಪೆನ್ಸಿಲ್ ಪೆಟ್ಟಿಗೆಯಿಂದ ಹಿಡಿದು ವಾಟು ಬ್ಯಾಂಕಿನ ವರೆಗೂ ಎಲ್ಲ ಮಕ್ಕಳ ಬಳಕೆಯ ವಸ್ತುಗಳ ಮೇಲೂ ಈ ದೈತ್ಯರು ಕಾಣಿಸಿಕೊಳ್ಳತೊಡಗುತ್ತದೆ. ಮನರಂಜನೆಯ ಹೆಸರಿನಲ್ಲಿ ನಡೆಯುವ ಈ ಕುಸ್ತಿ ಪಂದ್ಯಗಳಲ್ಲಿ ಅಂಪೈರ್ ಹೆಸರಿಗೆ ಮಾತ್ರ ಇರುತ್ತಾನೆ .

ವಿಚಿತ್ರ ಮುಖವಾಡಗಳನ್ನು ಧರಿಸಿ ತಲೆ ಬುರುಡೆ ಅಂತ ವಸ್ತುಗಳನ್ನು ಕೈಯಲ್ಲಿ ಹಿಡಿದು ಆದಿ ಮಾನವರಂತೆ ಕೇಶರಾಶಿಯನ್ನು ಹೊಂದಿ ಭೂತ ಪ್ರೇತದಂತೆ ಕಿರುಚಾಡುತ್ತಾ ಅಖಾಡಕ್ಕಿಳಿದ ಈ ದೈತ್ಯರು ನಮ್ಮ ಮಕ್ಕಳ ಆರಾಧ್ಯ ದೈವವಾಗಿರುತ್ತಿರುವುದು ಎಂತಹ ದುರಂತ !!

 

LEAVE A REPLY

Please enter your comment!
Please enter your name here