
ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದಾಗ ಗಂಡ ನನ್ನ ಪಕ್ಕದಲ್ಲೇ ಇದ್ದ: ಸಂತ್ರಸ್ತೆ ದೂರು
ಜೈಪುರ: ವ್ಯಕ್ತಿಯೊಬ್ಬ ಪತ್ನಿಯ ಮೇಲೆ ತನ್ನ ಸ್ನೇಹಿತ ಅತ್ಯಾಚಾರ ಎಸಗುತ್ತಿದ್ದರೆ ರೂಮಿನ ಹೊರಗೆ ಲಾಠಿ ಹಿಡಿದು ಕಾವಲು ಕಾಯುತ್ತಿದ್ದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್ಪುರ ಪ್ರದೇಶದಲ್ಲಿ ನಡೆದಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ 18 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ಮಾರುಕಟ್ಟೆಗೆ ಹೋಗುವ ನೆಪದಲ್ಲಿ ಪತಿ ಸಂತ್ರಸ್ತೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದನು. ದಾರಿಯಲ್ಲಿ ಆರೋಪಿ ತನ್ನ ಸ್ನೇಹಿತ ಮಿಚ್ಚು ಅಲಿಯಾಸ್ ಬಲ್ವಂತ್ ಧಾನಕ್ನನ್ನು ಅದೇ ಬೈಕ್ನಲ್ಲಿ ತನ್ನೊಂದಿಗೆ ಬರಲು ಕೇಳಿಕೊಂಡಿದ್ದಾನೆ ಎಂದು ಸ್ಟೇಷನ್ ಹೌಸ್ ಆಫೀಸರ್ ಸುರೇಂದ್ರ ಸಿಂಗ್ ರಾವತ್ ಹೇಳಿದರು.
ಪತಿ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದನು. ಬೈಕಿನಿಂದ ಇಳಿದು ಸ್ವಲ್ಪ ಸಮಯ ಅಲ್ಲೆ ಕುಳಿತ್ತಿದ್ದೆವು. ಆಗ ಧಾನಕ್ ಬಂದು ನನ್ನನ್ನು ಹತ್ತಿರದಲ್ಲಿದ್ದ ರೂಮಿಗೆ ಎಳೆದುಕೊಂಡು ಹೋದ. ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನನ್ನ ಮೇಲೆ ಅತ್ಯಾಚಾರ ನಡೆಯು ತ್ತಿದ್ದಾಗ ಪತಿ ಲಾಠಿ ಹಿಡಿದು ರೂಮಿನ ಹೊರಗೆ ಕಾವಲು ನಿಂತಿದ್ದನು. ಹೀಗಾಗಿ ತನ್ನ ಸ್ನೇಹಿತ ನನ್ನ ಮೇಲೆ ಅತ್ಯಾಚಾರ ನಡೆಸಲು ಅವಕಾಶ ನೀಡಲು ಪತಿ ಸಂಚು ರೂಪಿಸಿದ್ದನು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.