Home KARNATAKA ದೃಶ್ಯರೂಪಕದ ಮೂಲಕ ಕೊರೊನಾ ಜಾಗೃತಿ: ಪೊಲೀಸರು ಅಧಿಕಾರಿಗಳು ಭಾಗಿ

ದೃಶ್ಯರೂಪಕದ ಮೂಲಕ ಕೊರೊನಾ ಜಾಗೃತಿ: ಪೊಲೀಸರು ಅಧಿಕಾರಿಗಳು ಭಾಗಿ

226
0
SHARE

ಇಡೀ ವಿಶ್ವವನ್ನು ತಲ್ಲಣಗೊಳಿಸುತ್ತಿರುವ ಕರೋನಾ ಹೆಮ್ಮಾರಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜಾಗೃತಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ಜೊತೆಗೆ ಅನೇಕ ಸಂಘ ಸಂಸ್ಥೆಗಳು ಸಹ ಕರೋನಾ ರೋಗ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿವೆ. ಅದರಂತೆ ಯಲಹಂಕದ ತಾಲೂಕು ಕಚೇರಿ ವೃತ್ತದಲ್ಲಿ ” ವಿಶ್ವ ಭಾರತಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ” ಕರೋನಾ ಜಾಗೃತಿದೃಶ್ಯರೂಪಕವನ್ನು ಆಯೋಜಿಸಿದ್ದರು. ಯಲಹಂಕ ತಾಲೂಕು ಕಚೇರಿ, ಈಶಾನ್ಯ ವಿಭಾಗದ ಪೊಲೀಸರು ಮತ್ತು ವಿಶ್ವಭಾರತಿ ಸಂಸ್ಥೆಯ ಜಾಗೃತಿ ಗೀತೆಯು ಎಲ್ಲರ ಗಮನ ಸೆಳೆಯಿತು. ಅಂದಹಾಗೆ ತಹಶಿಲ್ದಾರ್ & ಈಶಾನ್ಯ ವಿಭಾಗದ ಪೊಲೀಸರ ಸಮ್ಮುಖದಲ್ಲಿ ಕರೋನಾ ಜಾಗೃತಿ ಗೀತೆಯ ನೃತ್ಯರೂಪಕದ ಮೂಲಕ ಯಲಹಂಕದಲ್ಲಿಂದು ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದು ಚಾಲನೆ ಪಡೆದುಕೊಂಡಿದೆ. ಇನ್ನೂ ಚೀನಾದಲ್ಲಿ ಹುಟ್ಟಿಕೊಂಡ ವೈರಸ್ ಇಂದು ಇಡೀ ವಿಶ್ವನ್ನೆ ಅತಿಕ್ರೂರವಾಗಿ ಬಾಧಿಸುತ್ತಿದೆ..

ನಮ್ಮ ದೇಶದಲ್ಲಿ ಕರೋನಾ ಸೋಂಕಿನಿಂದ ಸಾವಿರಾರು ಜನ ಸಾವನ್ನಪ್ಪುತ್ತಿದ್ದು. ಲಕ್ಷಾಂತರ ಜನ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಮುಂದೆ ಈ ಹೆಮ್ಮಾರಿಯಿಂದ ನಮ್ಮ ಜೀವವನ್ನು ಉಳಿಸಿಕೊಳ್ಳಬೇಕಾದರೆ ನಾವು,,ನೀವು ಎಲ್ಲರೂ ಎಚ್ಚರದಿಂದ ಇರಬೇಕು..ಇಲ್ಲಾಂದ್ರೆ ಕಚ್ಚುತ್ತೆ.. ಆದ್ದರಿಂದ ಕರೋನಾ ನಿಯಂತ್ರಣಕ್ಕಾಗಿ ನಾವು ನೀವೆಲ್ಲಾ ಜಾಗೃತರಾಗಿರಬೇಕು. ಮಾಸ್ಕ್ ಧರಿಸಬೇಕು, ಕೈತೊಳೆದು, ಕೈ ಮುಗಿಯುವುದು ಒಳ್ಳೆಯದು..ಎಂದು ವಿಶ್ವ ಭಾರತಿ ತಂಡ ಹಾಡು ಮತ್ತು ನೃತ್ಯರೂಪಕದ ಮೂಲಕ ಎನ್‌ಇಎಸ್ ಬಸ್ಟಾಪ್ ಮತ್ತು ಯಲಹಂಕ ಓಲ್ಡ್ ಟೌನ್ ಬಸ್ಟಾಪ್ಗಳಲ್ಲಿ ಜನಜಾಗೃತಿ ಗೀತೆ ನೃತ್ಯರೂಪಕ ಮಾಡಿ ಅಭಿನಯಿಸಿ ಜನಜಾಗೃತಿಯನ್ನ ಮೂಡಿಸಲಾಯ್ತು. ಇನ್ನೂ ಕಾರ್ಯಕ್ರಮಕ್ಕೆ ಯಲಹಂಕ ತಹಶಿಲ್ದಾರ್ ರಘುಮೂರ್ತಿ ಮೂರ್ತಿ ಚಾಲನೆ ನೀಡಿದರೆ ಯಲಹಂಕ ಎಸಿಪಿ ಶ್ರೀನಿವಾಸ್, ಯಲಹಂಕ ಓಲ್ಡ್ ಟೌನ್ ಪೊಲೀಸ್ ಸ್ಟೇಷನ್ ತಂಡ ಮತ್ತು ಯಲಹಂಕ ಸಂಚಾರ ವಿಭಾಗದ ಪೊಲೀಸರ ಸಹಕಾರದೊಂದಿಗೆ ನೃತ್ಯರೂಪಕದ ಮೂಲಕ ಜಾಗೃತಿ ಮೂಡಿಸಲಾಯಿತು..

LEAVE A REPLY

Please enter your comment!
Please enter your name here