ಯಶ್ ನನ್ನ ಫೇವರಿಟ್ ಪ್ಯಾನ್ ಇಂಡಿಯಾ ಸ್ಟಾರ್ ಎಂದ ಸಮಂತಾ ಮಾಜಿ ಪತಿ

ಚಲನಚಿತ್ರ

ಕೆಜಿಎಫ್ ಸಿನಿಮಾದ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಯಶ್ ರನ್ನು ಪರಭಾಷೆಯ ಸ್ಟಾರ್ ನಟರು ಮೆಚ್ಚಿಕೊಂಡಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ತೆಲುಗು ನಟ ನಾಗಚೈತನ್ಯ ರಾಕಿಂಗ್ ಸ್ಟಾರ್ ಯಶ್ ನನ್ನ ಫೇವರಿಟ್ ಆಕ್ಟರ್ ಎಂದಿದ್ದು ಇದು ಯಶ್ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

ನಾಗಚೈತನ್ಯ ಇದೇ ಮೊದಲ ಭಾರಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದು ಇಂದು ಸಿನಿಮಾ ತೆರೆಗೆ ಬಂದಿದೆ. ಬಾಲಿವುಡ್ ಸ್ಟಾರ್ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆಮೀರ್ ಖಾನ್ ಮತ್ತು ನಾಗಚೈತನ್ಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅನೇಕ ಆಂಗ್ಲ ಮಾಧ್ಯಮಗಳಿಗೆ ನಾಗಚೈತನ್ಯ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಂದರ್ಶನದಲ್ಲಿ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ನಾಗ ಚೈತನ್ಯ ಕನ್ನಡದ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ.

ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ಅವರಿಗೆ ನಿರೂಪಕ, ‘ನಿಮ್ಮ ಇಷ್ಟದ ಪ್ಯಾನ್ ಇಂಡಿಯಾ ಸ್ಟಾರ್ ಯಾರು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ನಾಗ ಚೈತನ್ಯ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಿದರು. ಬಳಿಕ ನಿರೂಪಕ ಕೆಜಿಎಫ್ ಸಿನಿಮಾವನ್ನು ನಿಜಕ್ಕೂ ಇಷ್ಟ ಪಟ್ರಾ ಎಂದು ಕೇಳಿದರು. ಇದಕ್ಕೆ ನಾಗ ಚೈತನ್ಯ ಹೌದು, ನನಗೆ ಕೆಜಿಎಫ್ ತುಂಬಾ ಇಷ್ಟವಾಯಿತು ಎಂದಿದ್ದಾರೆ. ನಾಗಚೈತನ್ಯ ಹೇಳಿಕೆ ಯಶ್ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

ಇತ್ತೀಚಿಗಷ್ಟೆ ಸಮಂತಾ ಕೂಡ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದರು. ಕಾಫಿ ವಿತ್ ಕರಣ್ ಶೋನಲ್ಲಿ ಸಮಂತಾಗೆ ಕರಣ್ ಜೋಹರ್ ಜಿಪಿಎಸ್ ನಲ್ಲಿ ಯಾರ ಧ್ವನಿ ಕೇಳಲು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ, ಸಮಂತಾ ರಾಕಿಂಗ್ ಸ್ಟಾರ್ ಯಶ್ ಹೆಸರು ಹೇಳಿದ್ದರು. ಸದ್ಯ ಸಮಂತ ಹಾಗೂ ನಾಗಚೈತನ್ಯ ಇಬ್ಬರು ರಾಕಿಂಗ್ ಸ್ಟಾರ್ ರನ್ನು ಮೆಚ್ಚಿಕೊಂಡಿದ್ದು ಯಶ್ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.

 

Leave a Reply

Your email address will not be published.