
ರಾಜ್ಯಾದ್ಯಂತ ಇಂದು ‘’ಯೆಲ್ಲೋ ಬೋರ್ಡ್’’ ಸಿನಿಮಾ ರಿಲೀಸ್
ಟೈಗರ್ ಚಿತ್ರದ ಬಳಿಕ ನಟ ಪ್ರದೀಪ್ ಬರೊಬ್ಬರಿ 3 ವರ್ಷಗಳ ಬಳಿಕ ‘ಯೆಲ್ಲೋ ಬೋರ್ಡ್’ ಚಿತ್ರದ ಮೂಲಕ ಇಂದು ತರೆ ಮೇಲೆ ಬರಲಿದ್ದಾರೆ., ಯೆಲ್ಲೋ ಬೋರ್ಡ್ ಟೈಟಲ್ ಪ್ರತಿಯೊಬ್ಬ ನಾಗರಿಕರಿಗೂ ಸಂಬಂಧಿಸಿದ್ದಾಗಿದೆ. ಈ ಬಗ್ಗೆ ಮಾತನಾಡಿದ ಪ್ರದೀಪ್, ಟ್ಯಾಕ್ಸಿ, ಆಟೋ, ಟೆಂಪೋ ಟ್ರಾವೆಲರ್, ಲಗೇಜ್ ಆಟೋ ಅಥವಾ ಲಾರಿ ಯಾವುದೇ ಆಗಿರಲಿ, ಅಥವಾ ಯೆಲ್ಲೋ ಬೋರ್ಡ್ ಆಗಿರಲಿ, ಒಂದು ದಿನ ನಿಂತರೆ, ಇಡೀ ದೇಶ ಸ್ಥಬ್ತವಾಗಲಿದೆ. ನಾಗರಿಕರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದಿದ್ದಾರೆ. ಕ್ಯಾಬ್ ಚಾಲಕನ ಸುತ್ತ ಸುತ್ತುವ ಈ ಕಥೆ ಇದಾಗಿದೆ. ದಿನಗೂಲಿ ನೌಕರಿಯಲ್ಲಿ ತೊಡಗಿರುವ ಕ್ಯಾಬ್ ಡ್ರೈವರ್ ಗಳ ಜೀವನ ಈ ಚಿತ್ರದಲ್ಲಿದೆ.
ಕ್ಯಾಬ್ ಚಾಲಕನ ಜವಾಬ್ದಾರಿ, ಸಮಾಜದಲ್ಲಿ ಮಹಿಳಾ ಸುರಕ್ಷತೆ ಕುರಿತ ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಈ ಸಿನಿಮಾದಲ್ಲಿ ತುಂಬಾ ಇಂಟರೆಸ್ಟಿಂಗ್ ಆಗಿರೋದೆ ಅಪ್ಪು ಹಾಡಿದ ಹಾಡು. ಮೊದಲ ಬಾರಿಗೆ ರ್ಯಾಪ್ ಸಾಂಗ್ ಹೇಳಿದ ಖುಷಿ ಪುನೀತ್ ಅವರದ್ದಾದರೆ, ಅಪ್ಪು ಹತ್ತಿರ ಹಾಡು ಹೇಳಿಸಿದ ಸಂತಸ ಈ ಚಿತ್ರ ತಂಡಕ್ಕಿತ್ತು. ಈ ಸಿನಿಮಾ ಕತೆ ಹುಟ್ಟಿದ ಬಗ್ಗೆ ನಿರ್ದೇಶಕ ತ್ರಿಲೋಕ ರೆಡ್ಡಿ ಹೇಳಿದ್ದು ಹೀಗೆ.ಟ್ಯಾಕ್ಸಿ ಚಾಲಕರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ನಟ ಸುದೀಪ್, ಐಎಎಸ್ ಶಿವರಾಮ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇನ್ನೂ ಈ ಹಿಂದೆ ತ್ರಿಲೋಕ್ ರೆಡ್ಡಿ ಫರ್ಸ್ಟ್ ರ್ಯಾಂಕ್ ರಾಜು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಾಲಕನಾಗಿ ಪ್ರದೀಪ್ ನಾಯಕ. ಮಧ್ಯಮವರ್ಗದ ಹುಡುಗಿಯಾಗಿ ಅಹಲ್ಯ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸ್ನೇಹಖುಷಿ, ಮೋನಿಕಾ, ಸಾಧುಕೋಕಿಲ, ಭವಾನಿಪ್ರಕಾಶ್, ಅಮಿತ್, ಶ್ರೀನಿವಾಸ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಚೇತನ್ಕುಮಾರ್, ಡಾ.ನಾಗೇಂದ್ರಪ್ರಸಾದ್, ಗೌಸ್ಪೀರ್ ಮತ್ತು ವಿಶ್ವಜಿತ್ ಸಾಹಿತ್ಯದ ಐದು ಹಾಡುಗಳಿಗೆ ಹೊಸ ಪ್ರತಿಭೆ ಅದ್ವಿಕ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರವೀಣ್, ಸಂಕಲನ ಗಿರಿಮಹೇಶ್, ಕಾರ್ಯಕಾರಿ ನಿರ್ಮಾಪಕ ನವೀನ್, ಮಾಸ್ಮಾದ ಸಾಹಸ ನಿರ್ದೇಶನ ಮಾಡಿದ್ದಾರೆ.