Home Crime Zomato ಹಿಂದಿದೆ ರಾಜಕಾರಣಿ ಕೈವಾಡ..?! ಅತಿ ಹೆಚ್ಚು ಮತಗಳಿಂದ ಗೆದ್ದಿರೋ ಶಾಸಕನಿಂದಲೇ ಬಂಡವಾಳ ಹೂಡಿಕೆ..!?

Zomato ಹಿಂದಿದೆ ರಾಜಕಾರಣಿ ಕೈವಾಡ..?! ಅತಿ ಹೆಚ್ಚು ಮತಗಳಿಂದ ಗೆದ್ದಿರೋ ಶಾಸಕನಿಂದಲೇ ಬಂಡವಾಳ ಹೂಡಿಕೆ..!?

1387
0
SHARE

ಬೆಂಗಳೂರಿಗರ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿರೋ ಜೊಮಟೋ ಫುಡ್ ಆಪ್ ಕಂಪನಿಯ ಹಾವಳಿ ಇನ್ನು ನಿಂತಿಲ್ಲ. ಯಾಕಂದ್ರೆ ಸಾವಿರಾರು ಕಳಪೆ ಹೋಟೆಲ್ ಗಳೊಂದಿಗೆ ಟೈ ಅಪ್ ಮಾಡ್ಕೊಂಡಿರೋ ಕಂಪನಿ ಬೆಂಗಳೂರಿನ ಜನರನ್ನ ಹೋಲ್ ಸೆಲ್ ಆಗಿ ಆಸ್ಪತ್ರೆಗೆ ಸೇರಿಸೋ ಸ್ಕೀಂ ಹಾಕ್ಕೊಂಡಿದೆ.

ಈ ಕಂಪನಿಯ ಜೊತೆ ನಗರದ ಪ್ರಭಾವಿ ಶಾಸಕರು ಕೈ ಮಿಲಾಯಿಸಿರೋದ್ರಿಂದ ಅದನ್ನ ಅಲ್ಲಾಡಿಸೋದಕ್ಕೆ ಯಾರಿಗೂ ಸಾಧ್ಯವಾಗ್ತಿಲ್ಲ. ಅಲ್ಲದೆ ಬೃಹತ್ ಕಂಪನಿಯನ್ನ ಪ್ರಾರಂಭಿಸಿರೋ ಉದ್ಯಮಿ ತನ್ನ ಹಿಂದೆ ಬೆಂಗಳೂರಿನ ಕುಖ್ಯಾತ ರೌಡಿಗಳನ್ನ ಜೊತೆಗಿಟ್ಟುಕೊಂಡಿದ್ದಾನೆ. ಹೀಗಾಗಿ ಜೊಮಟೋ ಕಂಪನಿಯ ವಿರುದ್ಧ ಯಾರು ಧ್ವನಿ ಎತ್ತದ ಹಾಗೆ ಆಗಿದೆ.

ತೆರೆಮರೆಯಲ್ಲಿ ಕುಳಿತಿರೋ ಉದ್ಯಮಿಗಳು ಕೋಟಿ ಕೋಟಿ ಹಣವನ್ನ ಮಾಡ್ತಿದ್ದಾರೆ. ಅಲ್ಲದೆ ಅದೇ ಹಣದಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನ ಪರ್ಚೇಸ್ ಮಾಡಿದ್ದಾರೆ. ಹೀಗಾಗಿ ಕೊಳೆತ ಮಾಂಸ, ತಿನ್ನಲು ಯೋಗ್ಯವಲ್ಲದ ತರಕಾರಿಗಳನ್ನ ಹಾಕಿ ಅಡುಗೆ ಮಾಡಿದ್ರು ಯಾರು ತಲೆ ಕೆಡಿಸಿಕೊಳ್ತಿಲ್ಲ.

ಬೀದಿ ಬದಿ ಮಾರಾಟ ಮಾಡೋ ಹೋಟೆಲ್ ಗಳಿಗಿಂತ ಕಡಿಮೆ ದರದಲ್ಲಿ ಫುಡ್ ಸಪ್ಲೈ ಮಾಡ್ತಿದ್ರು ಇದೆಲ್ಲಾ ಹೇಗೆ ಸಾಧ್ಯನಪ್ಪಾ ಅಂತ ಕೇಳೋರು ಯಾರು ಇಲ್ಲ. ಅಧಿಕಾರಿಗಳಿಗೆ ಮತ್ತು ಖಾದಿಗಳಿಗೆ ಸೇರಬೇಕಾಗಿರೋದು ಪ್ರತಿ ತಿಂಗಳು ತಲುಪುತ್ತಿರೋದ್ರಿಂದ ಯಾರು ಕಮಕ್ ಕಿಮಕ್ ಅಂತಿಲ್ಲ. ಹೀಗೆ ಆದ್ರೆ ಜೊಮಟೋ ಆಪ್ ಮೂಲಕ ಫುಡ್ ಆರ್ಡರ್ ಮಾಡಿ ತಿನ್ನುತ್ತಾ ಇರೋರು ಸಾಲಾಗಿ ಆಸ್ಪತ್ರೆ ಮುಂದೆ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

LEAVE A REPLY

Please enter your comment!
Please enter your name here