Home Cinema ಅರ್ಜುನ್ ಸರ್ಜಾ ವಿರುದ್ಧ “Me too” ಆರೋಪ ಪ್ರಕರಣಕ್ಕೆ ಟ್ವಿಸ್ಟ್..? ಬಿರುಗಾಳಿ ಎಬ್ಬಿಸಿದ Me too...

ಅರ್ಜುನ್ ಸರ್ಜಾ ವಿರುದ್ಧ “Me too” ಆರೋಪ ಪ್ರಕರಣಕ್ಕೆ ಟ್ವಿಸ್ಟ್..? ಬಿರುಗಾಳಿ ಎಬ್ಬಿಸಿದ Me too ಅಭಿಯಾನ…ಶೃತಿ ಹರಿಹರನ್ ವಿರುದ್ಧ ಹಿರಿಯ ನಟ ರಾಜೇಶ್ ವಾಣಿಜ್ಯ ಮಂಡಳಿಗೆ ದೂರು!?

2966
0
SHARE

ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀ ಟೂ ಆರೋಪಕ್ಕೆ ಅಳಿಯನ ಪರ ರಾಜೇಶ್ ಬ್ಯಾಟ್ ಬೀಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ರಾಜೇಶ್ ಚೇತನ್ ಹಳೇ ದ್ವೇಷದಿಂದ ಹೀಗೆ ಮಾಡ್ತಿದ್ದಾರೆ, ಅರ್ಜುನ್ ಸುಮಾರು ದಶಕಗಳಿಂದ ಸಿನಿರಂಗದಲ್ಲಿದ್ದಾರೆ, ಆವತ್ತಿಂದ ಮಾಡ್ದೇ ಇದ್ದೋರು ಇವತ್ತು ಹೀಗೆ ಮಾಡೋಕೆ ಸಾಧ್ಯಾನಾ..?

ಇಷ್ಟು ವರ್ಷ ಯಾವುದೇ ಕಳಂಕವಿರಲಿಲ್ಲ ಈಗ ಈಕೆ ಬಂದು ಇಲ್ಲಸಲ್ಲದ ಆರೋಪ ಮಾಡ್ತಿರೋದು ಎಷ್ಟು ಸರಿ..? ಕನ್ನಡ ಚಿತ್ರರಂಗಗಳಲ್ಲಿ ಆಗುವ ತೊಂದರೆಗಳ ಪರಿಹಾರಕ್ಕೆ ವಾಣಿಜ್ಯ ಮಂಡಳಿ ನ್ಯಾಯಲಯ ಇದ್ದಂತೆ ಹಾಗಾಗಿ ನ್ಯಾಯಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ, ನಟಿ ಶೃತಿ ಹರಿಹರನ್ ವಿರುದ್ಧ ವಾಣಿಜ್ಯ ಮಂಡಳಿಗೆ ರಾಜೇಶ್ ದೂರು ಕೊಟ್ಟಿದ್ದಾರೆ.

ಚಂದನವನದಲ್ಲಿ ಮೀ ಟೂ ಅಭಿಯಾನ ಬಹಳ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ, ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮೀ ಟೂ ಆರೋಪ ಮಾಡ್ದಾಗ್ಲಿಂದ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎದ್ದಿದೆ. ಯಾವತ್ತೋ ನಡೆದಿರೋ ಘಟನೆಯನ್ನ ಇಂದು ಅರೋಪ ಮಾಡ್ತಿರೋದು ಯಾಕೆ..?

ಇದರ ಹಿಂದೆ ಕಾಣದ ಕೈಗಳಿದ್ದು ಕೆಲವು ಸ್ಟಾರ್ ನಾಯಕರ ಮೇಲೆ ಅಪಪ್ರಚಾರ ಮಾಡ್ತಿದ್ದಾರೆ, ಜೊತೆಗೆ ಅವರ ಮಾನಸಿಕ ನೆಮ್ಮದಿ ಮತ್ತು ಮಾನ ಹಾನಿ ಮಾಡ್ತಿದ್ದಾರೆ, ಮಿಟೂ ಅಭಿಯಾನವನ್ನಕೆಲ ನಟಿಯರು ದುರುಪಯೋಗ ಮಾಡಿತದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಅಗ್ಬೇಕು ಜೊತೆಗೆ ಶೃತಿಹರಿಹರನ್ ಸಂಜಾನ ಮತ್ತು ಚೇತನ್ ರವರನ್ನ ಶಾಶ್ವತವಾಗಿ ಚಿತ್ರರಂಗದಿಂದ ಬ್ಯಾನ್ ಮಾಡ್ಬೇಕು ಅಂತ ಚಲನಚಿತ್ರ ಮಂಡಳಿಗೆ ಕರ್ನಾಟಕ ರಾಜ್ಯ ಪುರುಷರ ರಕ್ಷಣ ಸಮಿತಿ ದೂರನ್ನು ನೀಡಿದೆ..

ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರೋ ಮೀ ಟೂ ಆರೋಪ ಚಂದನವನದಲ್ಲಿ ಬಿರುಗಾಳಿ ಎಬ್ಬಿಸಿದೆ.ಸದ್ಯ ಅರ್ಜುನ್ ಸರ್ಜಾ ಪರ ಕರ್ನಾಟಕ ಕಲಾವಿದರ ಸಂಘ ಬ್ಯಾಟ್ ಬೀಸಿದೆ. ಶೃತಿಗೆ ಇಷ್ಟೆಲ್ಲಾ ಆಗಿದ್ದರೆ ಆಗಲೇ ಏಕೆ ಹೇಳಲಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಾಕ್‍ಲೈನ್ ವೆಂಕಟೇಶ್ ಪ್ರಶ್ನಿಸಿದ್ದಾರೆ.

ನನಗೆ ಹಲವು ಬೆದ ಕರೆಗಳು ಬರುತ್ತಿವೆ, ಅದರಲ್ಲೂ ಸರ್ಜಾ ಫ್ಯಾನ್ ಕ್ಲಬ್ ನಿಂದ ಕರೆಗಳು ಬರ್ತಿವೆ ಎಂದು ಹೇಳ್ತಿದ್ದಾರೆ.ಇದಕ್ಕೆ ಪ್ರೂಫ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಏನಾದ್ರೂ ತೊಂದರೆ ಆದ್ರೆ ಅದಕ್ಕೆ ತಕ್ಷಣ ಪ್ರತಿಕ್ರಿಯೆ ಇದ್ದೆ ಇರುತ್ತೆ, ಆದ್ರೆ ವಿಸ್ಮಯ ಚಿತ್ರದ ರಿಲೀಸ್‍ಗೂ ಮುನ್ನ ಹಲವು ಸುದ್ದಿಗೋಷ್ಟಿ ಮಾಡಿದ್ರು ಆಗ ಏಕೆ ಈ ಬಗ್ಗೆ ಹೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here