Home Crime ಅವನು ಜವಾರಿ ಹೋರಿ ಅವಳು ಟೀನೇಜ್ ನಾಟಿ ಕ್ಯೂಟಿ.! ಧಾರವಾಡ ಫ್ರೆಶ್ ಪೇಡದಂತ ಬೆಡಗಿ ಮೇಲಾಗಿತ್ತು...

ಅವನು ಜವಾರಿ ಹೋರಿ ಅವಳು ಟೀನೇಜ್ ನಾಟಿ ಕ್ಯೂಟಿ.! ಧಾರವಾಡ ಫ್ರೆಶ್ ಪೇಡದಂತ ಬೆಡಗಿ ಮೇಲಾಗಿತ್ತು ಮನಸ್ಸು.! ಬಾಯಲ್ಲಿ ನೀರು ಸುರಿಸಿದಿದ್ದ ಕಾಡು ಕೋಳಿ ರುಚಿ ನೋಡಲು..!

6190
0
SHARE

ಅದೊಂದು ಬಯಲು ಸೀಮೆಯ ಕಾಡು. ಅಲ್ಲಿಗೆ ಇದೆ ಅರವಟಿಗೆ ಗ್ರಾಮದ ಮಹಿಳೆಯರು ಇಲ್ಲಿಗೆ ಕಟ್ಟಿಗೆ ತರೋದಕ್ಕೆ ಬರ್ತಾರೆ. ಒಣಗಿದ ಕಟ್ಟಿಗೆಗಳನ್ನ ಮಹಿಳೆಯರು ಕಡಿದುಕೊಂಡು ತಮ್ಮ ಮನೆಗೆ ತಗೊಂಡು ಹೋಗ್ತಾರೆ. ಅವರೆಲ್ಲಾ ಕಟ್ಟಿಗೆ ಒಟ್ಟು ಮಾಡ್ತಿರುವಾಗ ಅವ್ರಿಗೆ ಸ್ವಲ್ಪ ದೂರದಲ್ಲಿ ಯಾರೋ ಮಲಗಿದ್ದ ಹಾಗೆ ಕಾಣಿಸಿತ್ತು.

ಅವನು ಸತ್ತು ಹೋಗಿ ತುಂಬಾ ಟೈಂ ಆಗಿದೆ ಅನ್ನೋದನ್ನ ಆ ಕಾಡಿನ ನೊಣಗಳು ಮ್ಯೂಸಿಕ್ ಹಾಕ್ಕೊಂಡು ಹೇಳ್ತಿದ್ವು.ಮಟ ಮಟ ಮಧ್ಯಾಹ್ನದ ಹೊತ್ತಿಗೆ ಹೆಂಗಸರೆಲ್ಲಾ ಸೇರಿ ಆ ಬಾಡಿಯನ್ನ ನೋಡಿ ಬೆವರೋದಕ್ಕೆ ಶುರುಮಾಡಿದ್ರು. ಯವ್ವಾ ಯಾಲ್ರೇ ಇವ ಹಿಂಗೆ ಜೀವ ಬಿಟ್ಟಾನಲ್ಲ ಅಂತ ಅವರೆಲ್ಲಾ ಬಾಯಿ ಬಡ್ಕೊಂಡು ಕಾಡಿನಿಂದ ಊರಿನ ಕಡೆ ಓಡಿ ಬಂದಿದ್ರು. ಹೆಂಗಸರ ಬಾಯಿಗೆ ಬೇರೆ ವಿಷಯ ಸಿಕ್ಕಿತ್ತು. ಒಂದೇ ಸಾರಿ ಕಾಡಲ್ಲಿ ಬಾಡಿ ಬಿದ್ದಿದೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಹೋಗಿತ್ತು. ವಿಷಯ ಗೊತ್ತಾಗ್ತಿದ್ದ ಹಾಗೆ ಊರಿನ ಜನರು ಕೂಡಾ ಹಾಗೆ ಓಡಿ ಬಂದಿದ್ರು. ಇಡೀ ಊರಿಗೆ ಊರೇ ಅವತ್ತು ಕಾಡಿನತ್ತ ಓಡಿ ಬಂದಿತ್ತು.

ಯಾಕಂದ್ರೆ ಊರಿನವರಿಗೆ ಒಂದು ಕ್ಯೂರಿಯಾಸಿಟಿಯಿತ್ತು ಸತ್ತವನು ಯಾರು ಅನ್ನೋದು, ಹೀಗಾಗಿ ಎಲ್ಲಾ ಓಡಿ ಬಂದಿದ್ರು. ಅಲ್ಲದೆ ಎರಡು ದಿನಗಳ ಹಿಂದೆ ಆ ಊರಲ್ಲಿ ವಯಸ್ಸಿಗೆ ಬಂದ ಹುಡುಗನೊಬ್ಬ ಕೂಡಾ ಕಾಣೆಯಾಗಿದ್ದ. ಹೀಗಾಗಿ ಅಲ್ಲಿ ಬಂದವರಿಗೆ ಕುತೂಹಲಕ್ಕಿಂತ ಹೆಚ್ಚಾಗಿ ಅವರಲ್ಲಿ ಭಯವಿತ್ತು. .ಸತ್ತವನು  ಯಾರಾದ್ರು ಆಗಿರಲಿ ಆದ್ರೆ ನಮ್ಮವನು ಮಾತ್ರ ಆಗದೇ ಇರಲಿ ಅಂತ ಅಂದುಕೊಂಡಿದ್ರು.ಇಡೀ ಊರಿಗೆ ಊರೇ ಅವತ್ತ ಆ ಕಾಡಲ್ಲಿ ಸೇರಿತ್ತು. ಎಲ್ಲಾ ಓಡಿ ಬಂದು ನೋಡಿದ್ರೆ ಅಲ್ಲಿ ಹುಡುಗನೊಬ್ಬ ಸತ್ತು ಬಿದ್ದಿರೋದು ಕಂಡುಬಂದಿತ್ತು. ಆ ಬಾಡಿಯನ್ನ ನೋಡ್ತಿದ್ದ ಹಾಗೆ ಅದ್ರಲ್ಲಿ ಸಾಕಷ್ಟು ಜನ ಅಯ್ಯೋ ಇವನು ಸತ್ತು ಹೋದನ ಅಂತ ಅಂದಕೊಳ್ಳೋದಕ್ಕೆ ಶುರುಮಾಡಿದ್ರು, ಯಾವಾನೋ ಕಳ್ ನನ್ ಮಕ್ಳು ಕೊಲೆ ಮಾಡಿ ಹಾಕ್ಯಾರ ಅಂತ ಮಾತನಾಡಿಕೊಳ್ಳೋದಕ್ಕೆ ಶುರುಮಾಡಿದ್ರು.

ಅಲ್ಲಿದ್ದವರೆಲ್ಲಾ ತಮ್ಮ ತಮ್ಮಲ್ಲೇ ನಾನಾ ರೀತಿಯಾಗಿ ಮಾತನಾಡಿಕೊಳ್ಳೋದಕ್ಕೆ ಶುರುಮಾಡಿದ್ರು. ಅಲ್ಲದೆ ಪಾಪ ಇಷ್ಟೊಂದು ಸಣ್ಣ ವಯಸ್ಸಲ್ಲಿ ಸತ್ತು ಹೋದನಲ್ಲ ಅಂತ ಕನಿಕರ ತೋರಿಸ್ತಿದ್ರು. ಪೊಲೀಸ್ರು ಕೊಟ್ಟ ಏಟಿಗೆ ಅವರಿಬ್ಬರ ಪೂರ್ವ ಜನ್ಮದ ಕಥೆಗಳೆಲ್ಲಾ ನೆನಪಿಗೆ ಬಂದಿತ್ತು, ಆಗ ಸರ್ ನಾವೇ ಕೊಲೆ ಮಾಡಿದ್ದು ಅಂತ ಅವ್ರು ಒಪ್ಪಿಕೊಂಡಿದ್ರು. ಆಗ ಪೊಲೀಸ್ರು ಅದ್ಯಾಕೆ ಕೊಲೆ ಮಾಡಿದ್ರಿ. ಹೇಗೆ ಕೊಲೆ ಮಾಡಿದ್ರಿ ಅಂತ ಕೇಳಿದಾಗ ಅವ್ರು ಅವತ್ತಿನ ಹತ್ಯೆ ಘಟನೆಯನ್ನ ಕಣ್ಣಿಗೆ ಕಟ್ಟುವ ಹಾಗೆ ಹೇಳಿದ್ರು. ಅವತ್ತು ಪೊಲೀಸ್ರು ಎಳ್ಕೊಂಡು ಬಂದಿದ್ದು ವಿಜಯ್ ಕುಮಾರ್ ಮತ್ತು ಶ್ರೀಧರ್ ಅನ್ನೋರನ್ನ. ಈ ವಿಜಯ್ ಅವತ್ತಿನ ಕಥೆಯನ್ನ ಹೀಗೆ ಹೇಳೋದಕ್ಕೆ ಶುರುಮಾಡಿದ್ದ. ಸರ್ ನನ್ನ ತಂಗಿ ಧಾರವಾಡದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ಲು. ಅವಳ ಹಿಂದೆ ಸಂಜಯ್ ಬಿದ್ದಿದ್ದ. ಅವನಿಗೆ ನಾವು ಮನೆಯವರೆಲ್ಲಾ ತುಂಬಾ ಸರಿ ಹೇಳಿದ್ವಿ.

ಅವಳನ್ನ ಬಿಟ್ಟು ಬಿಡು ಇಲ್ಲ ಅಂದ್ರೆ ಸರಿಯಿರೋದಿಲ್ಲ ಅಂತ ಆದ್ರೆ ಅವನು ಕೇಳಲೇ ಇಲ್ಲ. ಮತ್ತೆ ಮತ್ತ ಆಕೆಯ ಹಿಂದೆ ಬಿದ್ದು ಆಕೆಯನ್ನ ಕಾಡೋದಕ್ಕೆ ಶುರುಮಾಡಿದ್ದ.ಹೀಗಾಗಿ ಅವತ್ತು ಹೋಳಿ ಹಬ್ಬದ ದಿನ ಆತ ನಮಗೆ ಸಿಕ್ಕಿದ್ದ. ಅವನಿಗೆ ಕಾಡಲ್ಲಿ ಕಾಡು ಕೋಳಿಗೆ ಬಲೆ ಹಾಕಿದ್ದೀವಿ. ಎರಡು ಕೋಳಿಯಾದ್ರು ಬಿದ್ದಿರುತ್ತೆ. ನೀನು ಬಾ ಎಲ್ಲಾ ಸೇರಿ ಪಾರ್ಟಿ ಮಾಡೋಣ ಅಂತ ಹೇಳಿದ್ವಿ. ಅದಕ್ಕೆ ಅವನು ಆಯ್ತು ಅಂತ ಹೇಳಿ ನಮ್ಮ ಜೊತೆ ಬಂದಿದ್ದ. ಕಾಡಿಗೆ ಹೋದ ನಂತ್ರ ನಾವು ಅವನಿಗೆ ನನ್ನ ತಂಗಿಯ ಸಹವಾಸಕ್ಕೆ ಬರಬೇಡ ಅಂತ ಹೇಳಿದ್ವಿ ಆದ್ರೆ ಆತ ಕೇಳಲೇ ಇಲ್ಲ. ಹೀಗಾಗಿ ನಾಲ್ಕು ಬಾರಿಸಿ ಹೇಳಿದ್ರು ಅವನು ನಿನ್ನ ತಂಗಿಯನ್ನ ಬಿಡೋದಿಲ್ಲ ಅಂತ ಹೇಳಿದ್ದ.

ಅದಕ್ಕೆ ನಾವು ನಮ್ಮ ಹತ್ತಿರ ಇದ್ದ ಟವೆಲ್ ನಿಂದ ಆತನ ಕುತ್ತಿಗೆಯನ್ನ ಬಿರಿದು ಕೊಲೆ ಮಾಡಿದ್ವಿ, ನಂತ್ರ ಯಾರಿಗೂ ಸಾಕ್ಷಿ ಸಿಗಬಾರದು ಅನ್ನೋ ಕಾರಣಕ್ಕೆ ಅವನ ಮೊಬೈಲ್ ಅನ್ನ ಕೂಡಾ ಜಜ್ಜಿ ಹಾಕಿದ್ವಿ. ಆಮೇಲೆ ನಾವಿಬ್ಬರು ಊರಿಗೆ ಬಂದು ಅವರ ಮನೆಯ ಹತ್ತಿರವೇ ಓಡಾಡ್ತಿದ್ವಿ. ಹೀಗಾಗಿ ಯಾರಿಗೂ ಅನುಮಾನ ಬರಲಿಲ್ಲ ಅಂತ ಹೇಳಿದ್ರು.ಇದು ಒಂದು ವರ್ಷನ್ ಆದ್ರೆ ಇನ್ನೊಂದು ಬೇರೆಯದ್ದೇ ಈ ಸ್ಟೋರಿಗೆ ಆಂಗಲ್ ಯಿದೆ. ಅದೇನಪ್ಪ ಅಂದ್ರೆ ಊರಿನ ಜನ ಹೇಳೋ ಪ್ರಕಾರ ಸಂಜಯ್ ಮತ್ತು ಆ ಯುವತಿ ಇಬ್ಬರು ಲವ್ ಮಾಡ್ತಿದ್ರು. ಇಬ್ಬರು ಏಕಾಂತದಲ್ಲಿರೋ ವೀಡಿಯೋವನ್ನ ಸಂಜಯ್ ಇಟ್ಟುಕೊಂಡು ಆಕೆಗೆ ಪದೇ ಪದೆ ಹೆದರಿಸ್ತಿದ್ದ. ಹೀಗಾಗಿ ಆಕೆ ನಮ್ಮ ಹತ್ತಿರ ಈ ವಿಚಾರವನ್ನ ಹೇಳಿದ್ಲು. ಆದ್ರೆ ಮನೆಯವರು ನಾವು ಯಾರು ಹೇಳಿದ್ರು ಆತ ಮಾತು ಕೇಳಲೇ ಇಲ್ಲ ಹೀಗಾಗಿ ಕೊಲೆ ಮಾಡಲಾಯ್ತು ಅನ್ನೋ ಆಯಾಮವು ಇದೆ.

ಪೊಲೀಸ್ರು ಇದೇ ಕಾರಣದಿಂದಾಗಿ ಆತನ ಮೊಬೈಲ್ ಅನ್ನ ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ. ಅಲ್ಲದೆ ಆ ಮೊಬೈಲ್ ನಲ್ಲಿ ಯುವತಿಯ ಯಾವುದಾದ್ರು ವೀಡಿಯೋ ಇರಬಹುದ ಅಂತ ತನಿಖೆ ನಡೆಸ್ತಿದ್ದಾರೆ.ಇನ್ನೊಂದು ಕಡೆ ಯುವತಿ ಮೇಲ್ಜಾತಿಗೆ ಸೇರಿದವಳು ಹುಡುಗ ಸವರ್ಣಿಯ ಇದೇ ಕಾರಣಕ್ಕೆ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಅಲ್ಲದೆ ಆಕೆಯನ್ನ ಬಿಟ್ಟು ಬಿಡುವಂತೆ ಹುಡುಗಿ ಮನೆಯವರು ಆತನಿಗೆ ಎಚ್ಚರಿಕೆ ನೀಡಿದ್ರು. ಆದ್ರೆ ಲವ್ ನಲ್ಲಿ ಬಿದ್ದಿದ್ದ ಹುಡುಗ ಆ ಒಳ್ಳೇ ಮಾತನ್ನ ಕೇಳಲಿಲ್ಲ. ಹೀಗಾಗಿ ಹುಡುಗಿ ಮನೆಯವರೇ ಕೊಲೆ ಮಾಡಿಸಿದ್ದಾರೆ ಅಂತಾನು ಕೆಲವರು ಮಾತನಾಡಿಕೊಳ್ತಿದ್ದಾರೆ. ಪೊಲೀಸ್ರು ಅವರಿಬ್ಬರಿಗೂ ಕೊಡೆ ರಿಪೇರಿ ಬೀಗ ರಿಪೇರಿ ಮಾಡಿದ್ದಕ್ಕೆ ಅವ್ರು ಅವತ್ತು ಕಾಡಿನಲ್ಲಿ ನಡೆದಿದ್ದ ಘಟನೆಯನ್ನ ಹೇಳಿದ್ರು.

ಇಲ್ಲಿ ಎರಡು ವಿಚಾರಗಳು ಸ್ಪಷ್ಟವಾಗುತ್ತೆ. ಒಂದು ಹುಡುಗಿಯ ವಿಚಾರಕ್ಕೆ ಕೊಲೆ ನಡೆದಿರೋದು ಎಲ್ಲರಿಗೂ ಗೊತ್ತು. ಆದ್ರೆ ಕೊಲೆ ಮಾಡಿದವರು ತಮ್ಮ ತಂಗಿಯ ಮರ್ಯಾದೆ ಮೂರು ಕಾಸಿಗೆ ಹರಾಜು ಆಗಬಾರದು ಅನ್ನೋ ಕಾರಣಕ್ಕೆ ಅವರಿಬ್ಬರ ಪ್ರೀತಿಯ ವಿಚಾರವನ್ನ ಮರೆಮಾಚಿದ್ದಾರೆ. ಅಲ್ಲದೆ ಆತನೊಂದಿಗೆ ಪ್ರೈವೇಟ್ ವೀಡಿಯೋ ಇದೆ ಅನ್ನೋದು ಜನಕ್ಕೆ ಗೊತ್ತಾದ್ರೆ ಆಕೆಯ ಲೈಫ್ ಹಾಳಾಗುತ್ತೆ ಅನ್ನೋ ಕಾರಣಕ್ಕೆ ಪೊಲೀಸ್ರ ಮುಂದೆ ಇದೆಲ್ಲವನ್ನ ಬಿಟ್ಟು ಉಳಿದ ಕಥೆಯನ್ನ ಹೇಳಿರೋ ಸಾಧ್ಯತೆಯಿದೆ.ಆದ್ರೆ ಈ ಸ್ಟೋರಿಯಲ್ಲಿ ಅವರದ್ದು ಟೂ ವೇ ಲವ್ ಆಗಿತ್ತ.

ಅಥವಾ ಜಾತಿ ಕಾರಣಕ್ಕಾಗಿ ಮದುವೆಯನ್ನ ನಿರಾಕರಿಸಿ ಕೊಲೆ ಮಾಡಿದ್ರ, ಅಥವಾ ಇವರಿಬ್ಬರು ಹೇಳೋ ಹಾಗೆ ಇವನ ಕಾಟ ತಡೆಯೋದಕ್ಕೆ ಆಗದೆ ಕೊಲೆ ಮಾಡಿದ್ರ ಅನ್ನೋದು ನಿಗೂಢವಾಗಿಯೇ ಉಳಿದಿದೆ. ಆದ್ರೆ ಒಟ್ನಲ್ಲಿ ಸಂಜಯ್ ದೊಡ್ಡವರು ಹೇಳಿದ ಮಾತನ್ನ ಕೇಳಿದ್ರೆ ಖಂಡಿತವಾಗಿಯು ಜೀವಂತವಾಗಿ ಉಳಿಯುತ್ತಿದ್ದ ಅನ್ಸುತ್ತೆ.  ಆದ್ರೆ ಹುಡುಗ ಬುದ್ದಿ, ಬಿಸಿ ರಕ್ತ ಯಾರ ಮಾತನ್ನ ಕೂಡಾ ಕೇಳಲಿಲ್ಲ. ಹೀಗಾಗಿ ಸಣ್ಣ ವಯಸ್ಸಲ್ಲೇ ಜೀವ ಬಿಟ್ಟಿದ್ದಾನೆ.

LEAVE A REPLY

Please enter your comment!
Please enter your name here